ಮಂಗಳೂರು: ದೈವ ನರ್ತನ ಮುಗಿಸ್ತಿದ್ದಂತೆ ಹೃದಯಾಘಾತದಿಂದ ನರ್ತಕ ಸಾವು

ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪ ದೈವ ನರ್ತನ ಮುಗಿಸುತ್ತಿದ್ದಂತೆ ಖ್ಯಾತ ದೈವ ನರ್ತಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಬಳಿಕ ದೈವ ನರ್ತನವನ್ನು ಅಶೋಕ ಬಂಗೇರಾ ಅವರ ತಮ್ಮ ಪೂರ್ಣಗೊಳಿಸಿದ್ದು, ಅಶೋಕ್ ಬಂಗೇರರ ದೈವ ನರ್ತನದ ಕೊನೆಯ ವಿಡಿಯೋ ಲಭ್ಯ ಇಲ್ಲಿದೆ.

Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 27, 2024 | 6:04 PM

ದಕ್ಷಿಣ ಕನ್ನಡ, ಜ.27: ದೈವ ನರ್ತನ ಮುಗಿಸುತ್ತಿದ್ದಂತೆ ಖ್ಯಾತ ದೈವ ನರ್ತಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪ ನಡೆದಿದೆ. ಪದವಿನಂಗಡಿ ಗಂಧಕಾಡು ನಿವಾಸಿ ಅಶೋಕ್ ಬಂಗೇರ ಸಾವನ್ನಪ್ಪಿದ ದೈವ ನರ್ತಕ(47). ನಿನ್ನೆ ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವ ನೇಮ ಹಮ್ಮಿಕೊಳ್ಳಲಾಗಿತ್ತು. ದೈವ ನರ್ತನದ ವೇಳೆಯೇ ಎದೆನೋವು ಲಘುವಾಗಿ ಕಾಣಿಸಿಕೊಂಡಿದೆ.

ಅರ್ಧಕ್ಕೆ ವೇಷ ತೆಗೆದು ಆಸ್ಪತ್ರೆಗೆ ತೆರಳಿದ ನರ್ತಕ

ಇನ್ನು ಎದೆನೋವು ತೀವ್ರವಾಗಿ ಕಾಣಿಸಿಕೊಂಡಿದ್ದರಿಂದ ದೈವ ನೇಮ ಅರ್ಧಕ್ಕೆ ನಿಲ್ಲಿಸಿದ ಅಶೋಕ ಬಂಗೇರಾ ಅವರು ದೈವ ವೇಷವನ್ನು ತೆಗೆದು ಆಸ್ಪತ್ರೆಗೆ ‌ತೆರಳಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ದೈವ ನರ್ತಕ ಕೊನೆಯುಸಿರೆಳೆದಿದ್ದಾರೆ. ಬಳಿಕ ದೈವ ನರ್ತನವನ್ನು ಅಶೋಕ ಬಂಗೇರಾ ಅವರ ತಮ್ಮ ಪೂರ್ಣಗೊಳಿಸಿದ್ದು, ಅಶೋಕ್ ಬಂಗೇರರ ದೈವ ನರ್ತನದ ಕೊನೆಯ ವಿಡಿಯೋ ಲಭ್ಯ ಇಲ್ಲಿದೆ.

ಇದನ್ನೂ ಓದಿ:ಮಂಗಳೂರಿನ ಎಡಮಂಗಲದಲ್ಲಿ ಮರುಕಳಿಸಿದ ‘ಕಾಂತಾರ’ ಸನ್ನಿವೇಶ; ದೈವ ನುಡಿಗೆ ತಲೆ ಬಾಗಿದ ಜನ

ಮಂಗಳೂರಿನ ಎಡಮಂಗಲದಲ್ಲಿ ಮರುಕಳಿಸಿದ ‘ಕಾಂತಾರ’ ಸನ್ನಿವೇಶ

ಕಾಂತಾರ, ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ. ತುಳುನಾಡಿನ ದೈವಾರಾಧನೆಯ ಕಥಾ ಕಂದರ ಇರುವ ಈ ಸಿನಿಮಾವನ್ನೇ ನೆನಪಿಸುವ ಘಟನೆ ಮತ್ತೆ ಕರಾವಳಿಯ ಮಣ್ಣಿನಲ್ಲಿ ನಡೆದಿದೆ. ದೈವ ನರ್ತಿಸುತ್ತಾ ದೇವರ ಪಾದ ಸೇರಿದ ದೈವ ನರ್ತಕನ ಮಗ ದೈವ ಚಾಕರಿಯ ದೈವ ಬೂಳ್ಯ ಹಿಡಿದು ಜವಾಬ್ದಾರಿ ಹೊತ್ತ ಅಪರೂಪದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಕಳೆದ 2023ರ ಮಾರ್ಚ್ 30 ರಂದು ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲಿ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಬಳಿಕ ಆ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು.

ಇದೀಗ ದೈವಜ್ಞರ ಪ್ರಶ್ನಾ ಚಿಂತನೆ ನಡೆಸಲಾಯಿತು. ಪ್ರಶ್ನಾ ಚಿಂತನೆಯಲ್ಲಿ ದೈವ ನರ್ತಿಸುತ್ತಾ ಸಾವನ್ನಪ್ಪಿದ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ಅವರೇ ಮುಂದೆ ದೈವ ನರ್ತನದ ಜವಾಬ್ದಾರಿ ಹೊರಬೇಕು ಅಂತ ಕಂಡು ಬಂದಿದೆ. ಬಳಿಕ, ಶಿರಾಡಿ ದೈವದ ಒಪ್ಪಿಗೆಯನ್ನೂ ಪಡೆಯಲಾಗಿತ್ತು.ಹೀಗಾಗಿ ಈ ವರ್ಷದ ಶಿರಾಡಿ ದೈವದ ನೇಮೋತ್ಸವದ ದಿನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ದೈವ ಇಬ್ಬರಿಗೂ ಯಾವ ರೀತಿಯಲ್ಲಿ ದೈವದ ಸೇವೆಯನ್ನು ಮಾಡಬೇಕು ಅನ್ನೋದನ್ನು ಸವಿವರವಾಗಿ ತಿಳಿಸುವ ಪ್ರಕ್ರಿಯೆ ನಿಜಕ್ಕೂ ರೋಮಾಂಚನಕಾರಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Sat, 27 January 24