ಮಂಗಳೂರಿನಲ್ಲಿ ಧರ್ಮ ಜಾಗೃತಿ ಸಭೆ: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆಗೆ ನಿರ್ಧಾರ, ಸರ್ಕಾರಕ್ಕೆ 8 ಅಂಶಗಳ ಪತ್ರ

ದೈವ, ದೇವಸ್ಥಾನ ಮತ್ತು ಸಂಸ್ಕೃತಿ ರಕ್ಷಣೆ ಸಂಬಂಧ‌ ಹಿಂದೂ ಜನಜಾಗೃತಿ ಸಮಿತಿ ಮಂಗಳೂರಿನಲ್ಲಿ ದೇವಸ್ಥಾನಗಳ ಪರಿಷತ್ ಸಭೆ ನಡೆಸಿದೆ. ಸಭೆಯಲ್ಲಿ ದಕ್ಷಿಣ ಜಿಲ್ಲೆಯ 200ಕ್ಕೂ ದೇವಾಲಯ, ದೈವಸ್ಥಾನಗಳ ವಿಶ್ವಸ್ಥರು ಭಾಗಿಯಾಗಿದ್ದರು. ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹಾಗೆ ಸರಕಾರಕ್ಕೆ 7 ಅಂಶಗಳ ಪತ್ರ ಬರೆಯಲಾಗಿದೆ.

ಮಂಗಳೂರಿನಲ್ಲಿ ಧರ್ಮ ಜಾಗೃತಿ ಸಭೆ: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆಗೆ ನಿರ್ಧಾರ, ಸರ್ಕಾರಕ್ಕೆ 8 ಅಂಶಗಳ ಪತ್ರ
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆ ಪರಿಷತ್ತು
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ

Updated on:Jan 27, 2024 | 10:55 AM

ಮಂಗಳೂರು, ಜನವರಿ 27: ದೈವ, ದೇವಸ್ಥಾನ ಮತ್ತು ಸಂಸ್ಕೃತಿ ರಕ್ಷಣೆ ಸಂಬಂಧ‌ ಹಿಂದೂ (Hindu) ಜನಜಾಗೃತಿ ಸಮಿತಿ ಮಂಗಳೂರಿನಲ್ಲಿ (Mangaluru) ದೇವಸ್ಥಾನಗಳ ಪರಿಷತ್ ಸಭೆ ನಡೆಸಿದೆ. ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ದೈವ, ದೇವಾಲಯಗಳ ಪಾವಿತ್ರತೆ, ವಸ್ತ್ರ ಸಂಹಿತೆ, ದೇವಾಲಯಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 200ಕ್ಕೂ ಹೆಚ್ಚು ದೇವಾಲಯ, ದೈವಸ್ಥಾನಗಳ ವಿಶ್ವಸ್ಥರು ಭಾಗಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಕಟ್ಟು ನಿಟ್ಟಾಗಿ ವಸ್ತ್ರ ಸಂಹಿತೆ ಜಾರಿಗೆ ತರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ದಕ್ಷಿಣ ಕನ್ನಡದ 100 ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ತೀರ್ಮಾನಿಸಲಾಯಿತು. ಫೆಬ್ರವರಿ ತಿಂಗಳಲ್ಲಿ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಅಲ್ಲದೇ ಪ್ರತಿ ದೇವಾಲಯಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದು. ಧಾರ್ಮಿಕ ಪಾಠದ ಮೂರು ತಿಂಗಳ ಕೋರ್ಸ್​​ನ್ನು ಹಿಂದೂ ಜನಜಾಗೃತಿ ಸಮಿತಿ ಸಿದ್ದ ಪಡಿಸಿದೆ. ಈ ಕೋರ್ಸ್​ನಲ್ಲಿ ಹಿಂದೂ‌ ಧರ್ಮ, ದೇವರುಗಳ, ಆಚಾರ ವಿಚಾರ, ಸಂಸ್ಕೃತಿ, ಪದ್ದತಿ, ಪರಂಪರೆಗಳ ಬಗ್ಗೆ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಇನ್ನು ವಾರಕ್ಕೆ ಒಂದು ದಿನ ಪ್ರತಿ ದೇವಾಲಯಗಳಲ್ಲಿ ಧಾರ್ಮಿಕ ಪಾಠ ನಡೆಸಬೇಕು. ದೇವಾಲಯಗಳ ಮೂಲಕ ಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡಲು ನಿರ್ಣಯಿಸಲಾಯಿತು.

ಇದನ್ನೂ ಓದಿ: ಇಂದಿನಿಂದ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿ: ತುಂಡು ಬಟ್ಟೆ ಧರಿಸಿಕೊಂಡು ಬಂದ್ರೆ ದೇವಾಲಯದೊಳಗೆ ನೋ ಎಂಟ್ರಿ

ಸರಕಾರದ ಬಳಿ ನಿವೇದಿಸಲಾದ ಠರಾವುಗಳು

  1. ಧರ್ಮನಿರಪೇಕ್ಷ ಸರಕಾರವು ಹಿಂದೂಗಳ ಧಾರ್ಮಿಕ ಸ್ಥಾನಗಳಾಗಿರುವ ದೇವಸ್ಥಾನಗಳ ವ್ಯವಸ್ಥಾಪನೆಯನ್ನು ಮಾಡಲು ಸಾಧ್ಯವಿಲ್ಲ, ಎಂಬುದನ್ನು ನ್ಯಾಯಾಲಯಗಳು ಅನೇಕ ಬಾರಿ ಹೇಳಿದ್ದರೂ ಇಂದಿಗೂ ಕರ್ನಾಟಕದಲ್ಲಿನ ಅನೇಕ ದೇವಸ್ಥಾನಗಳ ಮೇಲೆ ಸರಕಾರದ ನಿಯಂತ್ರಣವಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶಗಳ ಪಾಲನೆ ಮಾಡುತ್ತಾ ಕರ್ನಾಟಕ ಸರಕಾರವು ರಾಜ್ಯದಲ್ಲಿನ ಎಲ್ಲ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸಿ ಅವುಗಳನ್ನು ಭಕ್ತರಿಗೆ ಒಪ್ಪಿಸಬೇಕು.
  2. ದೇವಸ್ಥಾನಗಳಲ್ಲಿ ಭಕ್ತರು ಶ್ರದ್ಧೆಯಿಂದ ಅರ್ಪಣೆ ಮಾಡಿದ ನಿಧಿಯು ಸರಕಾರಕ್ಕೆ ನೀಡಿರುವ ದೇಣಿಗೆ ಅಥವಾ ತೆರಿಗೆ ಅಲ್ಲ. ಆದ್ದರಿಂದ ಸರಕಾರಕ್ಕೆ ದೇವಸ್ಥಾನಗಳ ಹಣವನ್ನು ವಿಕಾಸಕಾರ್ಯಕ್ಕಾಗಿ ಉಪಯೋಗಿಸುವ ಯಾವುದೇ ಅಧಿಕಾರವಿಲ್ಲ. ಆದ್ದರಿಂದ ಕರ್ನಾಟಕ ಸರಕಾರವು ದೇವಸ್ಥಾನಗಳ ಸಂಪತ್ತನ್ನು ವಿಕಾಸಕಾರ್ಯಕ್ಕಾಗಿ ಉಪಯೋಗಿಸುವುದಿಲ್ಲವೆಂದು ಘೋಷಿಸಬೇಕು.
  3. ಕರ್ನಾಟಕದಲ್ಲಿ ಪ್ರಾಚೀನ ಅಥವಾ ಐತಿಹಾಸಿಕ ಮಹತ್ವವಿರುವ ಆದರೆ ಆಡಳಿತ ಹಾಗೂ ಪುರಾತತ್ವ ವಿಭಾಗದಿಂದ ದುರ್ಲಕ್ಷಿಸಲ್ಪಟ್ಟಿರುವ ದೇವಸ್ಥಾನಗಳನ್ನು ತಕ್ಷಣ ಜೀರ್ಣೋದ್ಧಾರ ಮಾಡಲು ಕರ್ನಾಟಕ ಸರಕಾರವು ಮುಂಗಡಪತ್ರದಲ್ಲಿ ಸಾಕಷ್ಟು ಏರ್ಪಾಡು ಮಾಡಬೇಕು.
  4. ಕರ್ನಾಟಕದಲ್ಲಿ ಧಾರ್ಮಿಕ ಮಹತ್ವವಿರುವ ತೀರ್ಥಕ್ಷೇತ್ರಗಳು, ಶ್ರೀಕ್ಷೇತ್ರ, ಕೋಟೆಗಳಲ್ಲಿನ ದೇವಸ್ಥಾನಗಳ ಮೇಲಾಗಿರುವ ಅನ್ಯ ಮತೀಯರ ಅತಿಕ್ರಮಣಗಳನ್ನು ಕರ್ನಾಟಕ ಸರಕಾರ ಸಮೀಕ್ಷೆ ಮಾಡಿ ತಕ್ಷಣ ಆ ಅತಿಕ್ರಮಣಗಳನ್ನು ತೆರವುಗೊಳಿಸಬೇಕು. ಈ ವಿಷಯದಲ್ಲಿ ನಡೆಯುತ್ತಿರುವ ನ್ಯಾಯಾಂಗ ಖಟ್ಲೆಗಳಿಗಾಗಿ ತ್ವರಿತಗತಿ (FAST TRACK COURT) ನ್ಯಾಯಾಲಯಗಳನ್ನು ನಿರ್ಮಾಣ ಮಾಡಬೇಕು.
  5. ದೇವಸ್ಥಾನಗಳ ಪರಿಸರದಲ್ಲಿ ಹಾಗೂ ತೀರ್ಥಕ್ಷೇತ್ರದ ಸ್ಥಳಗಳ ಪಾವಿತ್ರ್ಯ ರಕ್ಷಣೆಗಾಗಿ ಮದ್ಯ ಹಾಗೂ ಮಾಂಸ ನಿಷೇಧ ಮಾಡಬೇಕೆಂದು ಕರ್ನಾಟಕ ಸರಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
  6. ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಿಂದ ಸಂಗ್ರಹವಾದ ಕಾಮನ್ ಪೂಲ್ ನಿಧಿಯನ್ನು ಅನ್ಯ ಯಾವುದೇ ಉದ್ಧೇಶಕ್ಕೆ ಬಳಸದೆ ಕೇವಲ ಹಿಂದೂ ಧಾರ್ಮಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು.
  7. ದೇವಸ್ಥಾನದ ಜಾತ್ರೆ ಉತ್ಸವ ಇತ್ಯಾದಿ ಸಂದರ್ಭದಲ್ಲಿ ಅನ್ಯ ಮತೀಯರಿಗೆ ವ್ಯಾಪಾರ ವಹಿವಾಟು ಮಾಡುವುದಕ್ಕೆ ಅವಕಾಶ ನೀಡಬಾರದು.
  8. ಸರ್ವೋಚ್ಚ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಅದಕ್ಕೆ ಸಂಬಂಧಪಟ್ಟ ನಿಯಮಗಳನ್ನು ಗಾಳಿಗೆ ತೂರಿ ಪ್ರಾಚೀನ ದೇವಸ್ಥಾನಗಳನ್ನು ತೆರವುಗೊಳಿಸುವುದನ್ನು ತೀವ್ರವಾಗಿ ಈ ಪರಿಷತ್ತು ವಿರೋಧಿಸುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:29 am, Sat, 27 January 24

ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ಮಂಜಣ್ಣನ ಮಟನ್ ಪ್ರೀತಿಗೆ ಮನೆಯವರಿಂದ ವಿರೋಧ
ಮಂಜಣ್ಣನ ಮಟನ್ ಪ್ರೀತಿಗೆ ಮನೆಯವರಿಂದ ವಿರೋಧ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು