ಕರ್ನಾಟಕದಲ್ಲಿ ಆತ್ಮಹತ್ಯೆ, ಬಾಣಂತಿಯರ‌ ಸರಣಿ ಸಾವು: ಪ್ರತ್ಯೇಕ ಸಮಿತಿ ರಚಿಸಿದ ಬಿಜೆಪಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 29, 2024 | 11:00 PM

ಕರ್ನಾಟಕದಲ್ಲಿ ಆತ್ಮಹತ್ಯೆ ಮತ್ತು ಬಾಣಂತಿ ಸರಣಿ ಸಾವು ಪ್ರಕರಣಗಳಲ್ಲಿ ಏರಿಕೆ ಹಿನ್ನೆಲೆಯಲ್ಲಿ, ಬಿಜೆಪಿ ಎರಡು ತನಿಖಾ ಸಮಿತಿಗಳನ್ನು ರಚಿಸಿದೆ. ಒಂದು ಸಮಿತಿ ಆತ್ಮಹತ್ಯೆ ಪ್ರಕರಣಗಳನ್ನು ತನಿಖೆ ಮಾಡಲಿದೆ, ಇನ್ನೊಂದು ಬಾಣಂತಿ ಸಾವು ಪ್ರಕರಣಗಳ ಕಾರಣಗಳನ್ನು ಪತ್ತೆಹಚ್ಚಲಿದೆ. ಈ ಸಮಿತಿಗಳಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು ಮತ್ತು ಮುಖಂಡರನ್ನೊಳಗೊಂಡಿದೆ.

ಕರ್ನಾಟಕದಲ್ಲಿ ಆತ್ಮಹತ್ಯೆ, ಬಾಣಂತಿಯರ‌ ಸರಣಿ ಸಾವು: ಪ್ರತ್ಯೇಕ ಸಮಿತಿ ರಚಿಸಿದ ಬಿಜೆಪಿ
ಕರ್ನಾಟದಲ್ಲಿ ಆತ್ಮಹತ್ಯೆ, ಬಾಣಂತಿಯರ‌ ಸರಣಿ ಸಾವು: ಪ್ರತ್ಯೇಕ ಸಮಿತಿ ರಚಿಸಿದ ಬಿಜೆಪಿ
Follow us on

ಬೆಂಗಳೂರು, ಡಿಸೆಂಬರ್​​ 29: ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ (BJP) ನಾಯಕರನ್ನೊಳಗೊಂಡ ಆಂದೋಲನ‌ ಸಮಿತಿ ರಚನೆ ಮಾಡಲಾಗಿದೆ. ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ್‌ ನಾರಾಯಣ ಅವರನ್ನೊಳಗೊಂಡ 17 ಸದಸ್ಯರ ಸಮಿತಿಯನ್ನು ಬಿಜೆಪಿ ರಚನೆ ಮಾಡಿದೆ.

ಸಮಿತಿಯಲ್ಲಿ ಯಾರೆಲ್ಲಾ?

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಬಸವರಾಜ ಮತ್ತಿಮೂಡ, ವಿಧಾ‌ನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಭಾರತಿ ಶೆಟ್ಟಿ, ಹೇಮಲತಾ ನಾಯಕ್, ಮಾಜಿ ಸಚಿವ ರಾಜುಗೌಡ, ಮಾಜಿ ಶಾಸಕ ರಾಜ ಕುಮಾರ್ ಪಾಟೀಲ್ ತೇಲ್ಕೂರ್, ರಾಜ್ಯ ಕಾರ್ಯದರ್ಶಿ ಲಲಿತಾ ಅನಪೂರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್, ಜಿಲ್ಲಾಧ್ಯಕ್ಷ ಚಂದು ಪಾಟೀಲ್, ವಕ್ತಾರರಾದ ಭಾಸ್ಕರ್ ರಾವ್, ವೆಂಕಟೇಶ್ ದೊಡ್ಡೇರಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ ಕುಮಾರ್, ಮಾಧ್ಯಮ ವಿಭಾಗ ರಾಜ್ಯ ಸಂಚಾಲಕ ಕರುಣಾಕರ್ ಖಾಸಲೆ ಅವರನ್ನು ಸಮಿತಿ ಒಳಗೊಂಡಿದೆ.

ಬಾಣಂತಿಯರ‌ ಸರಣಿ ಸಾವು: ಬಿಜೆಪಿಯಿಂದ ಸತ್ಯ ಶೋಧನಾ‌ ಸಮಿತಿ ರಚನೆ

ಇನ್ನು ಕರ್ನಾಟಕದಲ್ಲಿ ಬಾಣಂತಿಯರ‌ ಸರಣಿ ಸಾವು ಹಿನ್ನೆಲೆ ಬಿಜೆಪಿಯಿಂದ ಸತ್ಯ ಶೋಧನಾ‌ ಸಮಿತಿ ರಚನೆ ಮಾಡಲಾಗಿದೆ. ಡಾ.ಚಂದ್ರು ಲಮಾಣಿ, ಕೇಲಗಾರ ಅವರನ್ನೊಳಗೊಂಡ 13 ಸದಸ್ಯರ ಸಮಿತಿ ರಚನೆ ಮಾಡಿದ್ದು, ಈ ಸತ್ಯ ಶೋಧನಾ ಸಮಿತಿ ರಾಜ್ಯ ಘಟಕಕ್ಕೆ ಸಮಗ್ರ ವರದಿ ಸಲ್ಲಿಸಲಿದೆ.

ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವಿಗೆ ಔಷಧ ಮಾತ್ರ ಕಾರಣವಲ್ಲ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ಫೋಟಕ ಹೇಳಿಕೆ

ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಅವಿನಾಶ್ ಜಾಧವ್, ಡಾ. ಚಂದ್ರು ಲಮಾಣಿ, ಡಾ. ಬಸವರಾಜ್ ಕೇಲಗಾರ, ಡಾ. ಲಕ್ಷ್ಮಿ ಅಶ್ವಿನ್ ಗೌಡ, ಡಾ. ನಾರಾಯಣ್, ಡಾ. ಅರುಣಾ, ಡಾ. ಪದ್ಮ ಪ್ರಕಾಶ್, ವಿಜಯಲಕ್ಷ್ಮೀ ಕರೂರು, ಡಾ. ವಿಜಯಲಕ್ಷ್ಮೀ ಬಾ. ತುಂಗಳ, ಡಾ. ಸುಧಾ ಹಲ್ಕಾಯಿ, ರತನ್ ರಮೇಶ್ ಪೂಜಾರಿ, ಪ್ರದೀಪ್ ಕಡಾಡಿ, ಮಹಿಳಾ ಮೋರ್ಚಾ ಅಧ್ಯಕ್ಷ ಮಂಜುಳಾ, ರಾಜ್ಯ ವಕ್ತಾರರು ಅಶೋಕ್​ಗೌಡರನ್ನು ಸಮಿತಿ ಒಳಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:58 pm, Sun, 29 December 24