ಊರಿಗೆಲ್ಲ ನೈತಿಕತೆ ಪಾಠ ಮಾಡುವ ಖರ್ಗೆ, ಸಿದ್ದರಾಮಯ್ಯ, ರಮೇಶ್ ಕುಮಾರ್, ಪಾಟೀಲ್ ಈಗ ಎಲ್ಲಿ ಭೂಗತರಾಗಿದ್ದಾರೆ?: ಬಿಜೆಪಿ ಕರ್ನಾಟಕ

| Updated By: ganapathi bhat

Updated on: Apr 05, 2022 | 1:10 PM

ಬಿಜೆಪಿ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಪ್ರಕರಣ ಸ್ಫೋಟಕ ತಿರುವು ಪಡೆದು ಮುಂದುವರೆಯುತ್ತಿದೆ. ಕೇಸ್​ನಲ್ಲಿ ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ವಿರುದ್ಧ ಬಿಜೆಪಿ ಟ್ವೀಟ್ ದಾಳಿ ನಡೆಸಿದೆ.

ಊರಿಗೆಲ್ಲ ನೈತಿಕತೆ ಪಾಠ ಮಾಡುವ ಖರ್ಗೆ, ಸಿದ್ದರಾಮಯ್ಯ, ರಮೇಶ್ ಕುಮಾರ್, ಪಾಟೀಲ್ ಈಗ ಎಲ್ಲಿ ಭೂಗತರಾಗಿದ್ದಾರೆ?: ಬಿಜೆಪಿ ಕರ್ನಾಟಕ
ಬಿಜೆಪಿ ಕರ್ನಾಟಕ
Follow us on

ಬೆಂಗಳೂರು: ಊರಿಗೆಲ್ಲ ನೈತಿಕತೆಯ ಪಾಠ ಮಾಡುತ್ತಿದ್ದ ಖರ್ಗೆ, ಸಿದ್ದರಾಮಯ್ಯ, ರಮೇಶ್ ಕುಮಾರ್, ಎಚ್.ಕೆ. ಪಾಟೀಲ್ ಸೇರಿದಂತೆ ಕರ್ನಾಟಕ ಕಾಂಗ್ರೆಸ್‌ ಪಕ್ಷದ ಘಟಾನುಘಟಿ ನಾಯಕರು ಈಗ ಎಲ್ಲಿ ಭೂಗತರಾಗಿದ್ದಾರೆ? ಅನೈತಿಕ ರಾಜಕಾರಣದ ಪಿತಾಮಹ ಡಿ.ಕೆ. ಶಿವಕುಮಾರ್ ಅವರ ರಾಜೀನಾಮೆಗೆ ಕಾಂಗ್ರೆಸ್‌ ನಾಯಕರು ಏಕೆ ಒತ್ತಾಯಿಸುತ್ತಿಲ್ಲ? ಎಂದು ಬಿಜೆಪಿ ಕರ್ನಾಟಕ ಕಾಂಗ್ರೆಸ್​ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದೆ. ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಪ್ರಕರಣ ಸ್ಫೋಟಕ ತಿರುವು ಪಡೆದು ಮುಂದುವರೆಯುತ್ತಿದೆ. ಕೇಸ್​ನಲ್ಲಿ ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ವಿರುದ್ಧ ಬಿಜೆಪಿ ಟ್ವೀಟ್ ದಾಳಿ ನಡೆಸಿದೆ.

ಪ್ರಕರಣದ ಪ್ರಮುಖ ಆರೋಪಿ ʼನಮ್ಮ ಹುಡುಗʼ ಎಂದು ಹೇಳುವ ಮೂಲಕ ಆರೋಪಿಯೊಂದಿಗೆ ನಿಕಟ ಸಂಪರ್ಕ ಇದೆ ಎಂಬುದನ್ನು ಮಹಾನಾಯಕ ಒಪ್ಪಿಕೊಂಡಿದ್ದಾರೆ. ಷಡ್ಯಂತ್ರದ ನೇರ ಹಾಗೂ ಸಾಂದರ್ಭಿಕ ಸಾಕ್ಷಿಗಳು ಮಹಾನಾಯಕನ ಸುತ್ತಲೇ ತಿರುಗುತ್ತಿದೆ. ನೈತಿಕತೆಯ ಪಾಠ ಮಾಡುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೇ ನಿಮ್ಮ ಮಾನವೀಯತೆ ಈಗೆಲ್ಲಿದೆ? ಎಂದೂ ಕೈ ನಾಯಕರನ್ನು ಪ್ರಶ್ನಿಸಿದ್ದಾರೆ.

ಕಳಂಕಿತರಿಂದ ಉತ್ತರ ಪಡೆಯುವುದಿಲ್ಲವೆಂದು ಸದನದ ಸಮಯವನ್ನು ಹಾಳುಗೆಡವಿದ ಕಾಂಗ್ರೆಸ್ ನಾಯಕರೇ, ಸಂತ್ರಸ್ಥೆಯೇ ಹೇಳಿದಂತೆ, ಷಡ್ಯಂತ್ರದ ಭಾಗವಾಗಿರುವ ಡಿ.ಕೆ. ಶಿವಕುಮಾರ್ ಮಾಡಿರುವ ಘನಂದಾರಿ ಕೆಲಸವನ್ನು ಸಮರ್ಥಿಸುತ್ತೀರಾ? ಎಂದು ಕರ್ನಾಟಕ ಬಿಜೆಪಿ ಪ್ರಶ್ನೆ ಮಾಡಿದೆ. ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಭಾರತೀಯ ಜನತಾ ಪಕ್ಷವು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಟ್ವೀಟ್ ದಾಳಿ ನಡೆಸಿದೆ.

ಇಂಥಹ ಹೀನ ಕೆಲಸ ನಿರ್ವಹಣೆ ಮಾಡುವುದಕ್ಕೆ ಕೆಪಿಸಿಸಿಯಲ್ಲಿ ಪ್ರತ್ಯೇಕ ಘಟಕ ತೆರೆಯಲಾಗಿದೆಯಾ? ಎಂದೂ ಕೇಳಿರುವ ಬಿಜೆಪಿ, ಕಾಂಗ್ರೆಸ್ ನಾಯಕರನ್ನು ಸರಣಿ ಟ್ವೀಟ್​ಗಳಲ್ಲಿ ವಿರೋಧಿಸಿದೆ.

ಇದನ್ನೂ ಓದಿ: ಮತ್ತೆ ಮಹಾನಾಯಕನ ಪ್ರಸ್ತಾಪ; ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಬಿಜೆಪಿ ಕರ್ನಾಟಕ ಮಹಾ ಪ್ರಶ್ನೆ

ಷಡ್ಯಂತ್ರದ ಭಾಗವಾಗಿರುವ ಡಿ.ಕೆ. ಶಿವಕುಮಾರ್ ಘನಂದಾರಿ ಕೆಲಸವನ್ನು ಸಮರ್ಥಿಸುತ್ತೀರಾ? ಕರ್ನಾಟಕ ಬಿಜೆಪಿ ಪ್ರಶ್ನೆ

Published On - 5:55 pm, Sat, 27 March 21