ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಷಡ್ಯಂತ್ರದ ಹಿಂದೆ ಮಹಾನಾಯಕನ ವಿಚಾರ ಮತ್ತೆ ಪ್ರಸ್ತಾಪವಾಗಿದೆ. ಇತರ ಆರೋಪಿಗಳಂತೆ ಮಹಾನಾಯಕನೂ ಆರೋಪಿಯಲ್ಲವೇ? ರಾಜಕಾರಣದಲ್ಲಿ ಅತಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಪಕ್ಷಕ್ಕೆ ಬದ್ಧತೆ ಎನ್ನುವುದು ಇದ್ದರೆ ಮಹಾನಾಯಕ ರಾಜೀನಾಮೆ ಪಡೆಯಲಿ (#DKShiMustResign) ಎಂದು ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ಈ ಮಧ್ಯೆ ಬೆಂಗಳೂರಿನ ಹೊರವಲಯದಲ್ಲಿ ಸಿಡಿ ಯುವತಿ ಪತ್ತೆಯಾಗಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ. ಉದ್ಯಮಿ ಶಿವಕುಮಾರ್ ಅವರ ಕಾರು ಚಾಲಕ ಪರಶಿವ ಮೂರ್ತಿ ಜೊತೆಯಲ್ಲಿ ಸಿಡಿಯಲ್ಲಿರುವ ಯುವತಿ ಇದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಸಿಡಿ ಗ್ಯಾಂಗ್ನ ನರೇಶ್ ಗೌಡ, ಶ್ರವಣ್ ಉತ್ತರ ಭಾರತದ ಭಾಗದಲ್ಲಿರುವ ಬಗ್ಗೆ ಮಾಹಿತಿ ಬಂದಿದ್ದು, ಬೆಂಗಳೂರಿನ ಹೊರಭಾಗದಿಂದಲೇ ಇಂದು ಯುವತಿ ವಿಡಿಯೋ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಷಡ್ಯಂತ್ರದ ಹಿಂದೆ #ಮಹಾನಾಯಕನ ಹೆಸರು ಪ್ರಸ್ತಾಪವಾಗಿದೆ. ಇತರ ಆರೋಪಿಗಳಂತೆ ಮಹಾನಾಯಕ ಕೂಡಾ ಆರೋಪಿಯಲ್ಲವೇ?
ರಾಜಕಾರಣದಲ್ಲಿ ಅತಿಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ?@INCKarnataka ಪಕ್ಷಕ್ಕೆ ಬದ್ಧತೆ ಅನ್ನುವುದಿದ್ದರೆ ಮೊದಲು ಮಹಾನಾಯಕನ ರಾಜೀನಾಮೆ ಪಡೆಯಲಿ.#DKShiMustResign pic.twitter.com/pfwB0TFVvW
— BJP Karnataka (@BJP4Karnataka) March 27, 2021
ಇದನ್ನೂ ಓದಿ:
Published On - 12:49 pm, Sat, 27 March 21