ನಾನು ದೆಹಲಿಗೆ ಹೋಗಿಲ್ಲ; ಎಲ್ಲವನ್ನೂ ಅರುಣ್ ಸಿಂಗ್ ಮುಂದೆ ಹೇಳ್ತೀನಿ: ಸಿ ಪಿ ಯೋಗೇಶ್ವರ್

| Updated By: ganapathi bhat

Updated on: Jun 16, 2021 | 7:03 PM

ಹವಾಮಾನ ವೈಪರಿತ್ಯದಿಂದ ವಿಮಾನ ಆಗಮನ ಒಂದು ಗಂಟೆ ತಡ ಆಯ್ತು ಎಂದು ಹೇಳಿದ್ದಾರೆ. ಬಳಿಕ, ರಾಜಕೀಯ ಹವಾಮಾನ ವೈಪರಿತ್ಯ ಸರಿ‌ ಹೋಗುತ್ತಾ ಸರ್ ಅನ್ನೋ ಪ್ರಶ್ನೆಗೆ ನಕ್ಕು ಸುಮ್ಮನೆ ಹೊರಟಿದ್ದಾರೆ.

ನಾನು ದೆಹಲಿಗೆ ಹೋಗಿಲ್ಲ; ಎಲ್ಲವನ್ನೂ ಅರುಣ್ ಸಿಂಗ್ ಮುಂದೆ ಹೇಳ್ತೀನಿ: ಸಿ ಪಿ ಯೋಗೇಶ್ವರ್
ಸಚಿವ ಸಿ.ಪಿ.ಯೋಗೇಶ್ವರ್
Follow us on

ಬೆಂಗಳೂರು: ರಾಜಕೀಯವಾಗಿ ನಾನು ಏನೂ ಮಾತನಾಡಲ್ಲ. ನಾನು ದೆಹಲಿಗೆ ಹೋಗಿಲ್ಲ ಎಂದು ಏರ್​ಪೋರ್ಟ್‌ನಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ. ವೈಯಕ್ತಿಕ ಕೆಲಸಕ್ಕೆ ನಾನು ಹೈದರಾಬಾದ್‌ಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ, ಬಿಜೆಪಿ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆ ಯೋಗೇಶ್ವರ್ ಮತ್ತೆ ದೆಹಲಿಗೆ ಹೋಗಿದ್ದಾರೆ ಎನ್ನಲಾಗಿತ್ತು. ಆ ಬಗ್ಗೆ ಏರ್​ಪೋರ್ಟ್​ನಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಾನು ನೇರವಾಗಿ ಅರುಣ್ ಸಿಂಗ್ ಸಭೆಗೆ ಹೋಗ್ತೀನಿ. ಎಲ್ಲಾ ಸರಿ ಹೋಗಬಹುದು. ಎಲ್ಲವನ್ನೂ ಅರುಣ್ ಸಿಂಗ್ ಮುಂದೆ ಹೇಳ್ತೀನಿ. ಬಿಜೆಪಿಯ ಯಾವ ನಾಯಕರನ್ನೂ ನಾನು ಭೇಟಿಯಾಗಿಲ್ಲ ಎಂದು ಏರ್​ಪೋರ್ಟ್‌ನಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.

ಹವಾಮಾನ ವೈಪರಿತ್ಯದಿಂದ ವಿಮಾನ ಆಗಮನ ಒಂದು ಗಂಟೆ ತಡ ಆಯ್ತು ಎಂದು ಹೇಳಿದ್ದಾರೆ. ಬಳಿಕ, ರಾಜಕೀಯ ಹವಾಮಾನ ವೈಪರಿತ್ಯ ಸರಿ‌ ಹೋಗುತ್ತಾ ಸರ್ ಅನ್ನೋ ಪ್ರಶ್ನೆಗೆ ನಕ್ಕು ಸುಮ್ಮನೆ ಹೊರಟಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರ ಜೊತೆ ಅರುಣ್​ ಸಿಂಗ್​ ಸಭೆ ಆರಂಭವಾಗಿದೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಭೆ ನಡೆಸುತ್ತಿದ್ದಾರೆ. ಡಿಸಿಎಂಗಳಾದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವತ್ಥ್‌ ನಾರಾಯಣ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಸುರೇಶ್ ಕುಮಾರ್, ಶ್ರೀರಾಮುಲು, ಈಶ್ವರಪ್ಪ, ಪ್ರಭು ಚೌಹಾಣ್, ಲಿಂಬಾವಳಿ, ಸಚಿವೆ ಜೊಲ್ಲೆ, ಅಂಗಾರ, ಕೋಟ ಶ್ರೀನಿವಾಸ​ ಪೂಜಾರಿ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಶೆಟ್ಟರ್​, ನಿರಾಣಿ, ಉಮೇಶ್​ ಕತ್ತಿ, ಯೋಗೇಶ್ವರ್‌ ಸೇರಿ 32 ಸಚಿವರು ಭಾಗಿಯಾಗಿದ್ದಾರೆ.

ಸೋಮವಾರ ಸಚಿವ ಸಂಪುಟ ಸಭೆ
ಸೋಮವಾರ ಸಂಜೆ 4 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಸುವ ಬಗ್ಗೆ ನಿಗದಿಯಾಗಿದೆ. ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ಸಂಪುಟ ಸಭೆ ನಡೆಯಲಿದೆ. ಜೂನ್ 21ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಕೇವಲ ಆರೋಪ ಮಾಡ್ತಿದೆ, ಜೆಡಿಎಸ್ ಕ್ವಾರಂಟೈನ್​​ನಲ್ಲಿದೆ, ಯಡಿಯೂರಪ್ಪ ಸರ್ಕಾರ ಮಾತ್ರ ಫೀಲ್ಡ್​​ನಲ್ಲಿದೆ: ಅರುಣ್ ಸಿಂಗ್ ವ್ಯಾಖ್ಯಾನ

ಮುಖ್ಯಮಂತ್ರಿ ಬದಲಾವಣೆಗೆ ಅರುಣ್ ಸಿಂಗ್ ಬರುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು: ಆರ್ ಅಶೋಕ್

Published On - 6:59 pm, Wed, 16 June 21