ಮುಖ್ಯಮಂತ್ರಿ ಬದಲಾವಣೆಗೆ ಅರುಣ್ ಸಿಂಗ್ ಬರುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು: ಆರ್ ಅಶೋಕ್

ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದ್ದಾರೆ. ಅರುಣ್ ಸಿಂಗ್​ ಜತೆ ಚರ್ಚೆಗೆ 10 ಶಾಸಕರು ಅನುಮತಿ ಕೇಳಿದ್ದಾರೆ. ಪಕ್ಷದ ವಿರುದ್ಧ ನಡೆದುಕೊಂಡ್ರೆ ಅಂತವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬದಲಾವಣೆಗೆ ಅರುಣ್ ಸಿಂಗ್ ಬರುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು: ಆರ್ ಅಶೋಕ್
ಆರ್.ಅಶೋಕ್
TV9kannada Web Team

| Edited By: ganapathi bhat

Jun 16, 2021 | 4:59 PM

ದೇವನಹಳ್ಳಿ: ಮುಖ್ಯಮಂತ್ರಿ ಬದಲಾವಣೆಗೆ ಅರುಣ್ ಸಿಂಗ್ ಬರುತ್ತಿದ್ದಾರೆ ಎಂದು ಕೇಳಿಬಂದಿರುವ ಚರ್ಚೆಯ ಬಗ್ಗೆ ಕಂದಾಯ ಸಚಿವ, ಬಿಜೆಪಿ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ಇಮೇಜ್ ಕ್ರಿಯೇಟ್ ಮಾಡೋಕೆ ಬರುತ್ತಿದ್ದಾರೆ. ಕೊರೊನಾ ನಂತರ ಏನಾಗಿದೆ ಅಂತ ತಿಳಿಯಲು ಬರ್ತಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ.

ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದ್ದಾರೆ. ಅರುಣ್ ಸಿಂಗ್​ ಜತೆ ಚರ್ಚೆಗೆ 10 ಶಾಸಕರು ಅನುಮತಿ ಕೇಳಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಲು ಅನುಮತಿ ಕೇಳಿದ್ದಾರೆ. ಪಕ್ಷದ ವಿರುದ್ಧ ನಡೆದುಕೊಂಡ್ರೆ ಅಂತವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.

ಇಂದು (ಜೂನ್ 16) ಅರುಣ್ ಸಿಂಗ್ ಜೊತೆ ಸಂಪುಟ ಸದಸ್ಯರ ಮಾತುಕತೆ ನಡೆಯುತ್ತದೆ. ನಾಳೆ ಪಕ್ಷದ ಸಂಘಟನೆ, ಸರ್ಕಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ನಾಡಿದ್ದು ಕೋರ್ ಕಮಿಟಿ ಸಭೆ ಮುಗಿಸಿ ಅರುಣ್ ಸಿಂಗ್ ದೆಹಲಿಗೆ ಹೋಗುತ್ತಾರೆ ಎಂದು ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ನಡುವೆ ಸಮಸ್ಯೆಯಿದೆ ಎಂದು ಈ ವೇಳೆ ಆರ್. ಅಶೋಕ್ ಮಾತನಾಡಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ಬಂದಾಗ ಇಷ್ಟು ಸುದ್ದಿಯಾಗಲ್ಲ ಯಾಕೆ ಅಂತ ನನಗೆ ಅರ್ಥವಾಗ್ತಿಲ್ಲ. ಅರುಣ್ ಸಿಂಗ್ ಮಾದ್ಯಮಗಳಲ್ಲಿ ಸಿಎಂ ಬದಲಾವಣೆ ಮಾಡಲು ಬರ್ತಿದ್ದಾರೆ ಅಂತ ಬರ್ತಿದೆ. ಆದ್ರೆ ಇದು ಶುದ್ದ ಸುಳ್ಳು ಆ ರೀತಿ ಯಾವುದೇ ಬೆಳವಣಿಗೆ ನಡೆದಿಲ್ಲ. ರಾಜಕೀಯ ಪಕ್ಷ ಅಂದ ಮೇಲೆ ಸಣ್ಣಪುಟ್ಟ ಸಮಸ್ಯೆ ಇರುತ್ತದೆ. 4 ಗೋಡೆ ನಡುವೆ ಕುಳಿತು ಸಮಸ್ಯೆಯನ್ನ ಬಗೆಹರಿಸುತ್ತೇವೆ ಅಷ್ಟೇ ಎಂದು ಅಶೋಕ್ ಹೇಳಿದ್ದಾರೆ.

ಅರುಣ್ ಸಿಂಗ್​ರನ್ನು ಭೇಟಿಯಾಗಿ ಯಾರು ಬೇಕಾದರೂ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಬಹುದು: ಇದಕ್ಕೂ ಮೊದಲು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸುತ್ತಮುತ್ತ ಇರುವವರು ಇಲಾಖೆಗಳಲ್ಲಿ ಮೂಗು ತೂರಿಸ್ತಿದ್ದಾರೆನ್ನುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ ಇದೇ ವೇಳೆ ಹೇಳಿದ್ದಾರೆ. ಯಾರಿಗಾದರೂ ಹೀಗೆ ಅನಿಸಿದರೆ ಮುಕ್ತವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಅವರನ್ನು ಭೇಟಿಯಾಗಿ ಹೇಳಬಹುದು. ನಾಳೆ ಸಂಜೆಯವರೆಗೂ ಸಿಎಂ, ಅರುಣ್ ಸಿಂಗ್​ ಜತೆಯಲ್ಲಿರುತ್ತಾರೆ. ಯಾರು ಬೇಕಾದರೂ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಬಹುದು. ಆದರೆ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಅರುಣ್ ಸಿಂಗ್​ ಬಂದ ನಂತರ ಸಮಸ್ಯೆ ಬಗೆಹರಿಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಅರುಣ್ ಸಿಂಗ್ ನೇತೃತ್ವದಲ್ಲಿ ಇಂದು ಆರೋಪ ಪ್ರತ್ಯಾರೋಪಗಳ ಚರ್ಚೆ; ಏನಾಗಲಿದೆ ಸಿಎಂ ಯಡಿಯೂರಪ್ಪ ಭವಿಷ್ಯ?

ಮುಗಿದಿಲ್ಲ ಕರ್ನಾಟಕ ಬಿಜೆಪಿ ಗೊಂದಲ; ಗುರುವಾರ ಶಾಸಕರ ನಿಯೋಗದಿಂದ ಅರುಣ್ ಸಿಂಗ್ ಭೇಟಿಗೆ ಕಾಲಾವಕಾಶ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada