ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡಿ ಬೇಕೆಂದು ವ್ಯಕ್ತಿ ರಂಪಾಟ; ವಿಡಿಯೋ ನೋಡಿ

ಬೀಡಿ ಸೇದದಿದ್ದರಿಂದ ಮಾನಸಿಕ ಅಸ್ವಸ್ಥನಂತೆ ವರ್ತನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಹೀಗೆ ಅಸ್ವಸ್ಥನಂತೆ ವರ್ತಿಸಿದ ಅಪ್ಪನನ್ನು ಸಮಾಧಾನ ಪಡಿಸಲು ಮಗ ಪರದಾಡಿದ್ದಾನೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡಿ ಬೇಕೆಂದು ವ್ಯಕ್ತಿ ರಂಪಾಟ; ವಿಡಿಯೋ ನೋಡಿ
ಏರ್​ಪೋರ್ಟ್​ನಲ್ಲಿ ಬೀಡಿಗಾಗಿ ರಂಪಾಟ
TV9kannada Web Team

| Edited By: ganapathi bhat

Jun 16, 2021 | 5:09 PM


ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡಿಗಾಗಿ ವ್ಯಕ್ತಿ ರಂಪಾಟ ಮಾಡಿದ ಘಟನೆ ನಡೆದಿದೆ. ಜೈಪುರದಿಂದ ಕುಟುಂಬಸ್ಥರ ಜೊತೆ ಕೆಐಎಬಿಗೆ ಬಂದಿದ್ದ ವ್ಯಕ್ತಿ ಏರ್​ಪೋರ್ಟ್​ ಟರ್ಮಿನಲ್​ನಲ್ಲಿ ಬೀಡಿಗಾಗಿ ರಂಪಾಟ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಹೆಂಡತಿ, ಮಗನನ್ನು ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಆತ ಬೀಡಿ ಸೇದದಿದ್ದರಿಂದ ಮಾನಸಿಕ ಅಸ್ವಸ್ಥನಂತೆ ವರ್ತನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಹೀಗೆ ಅಸ್ವಸ್ಥನಂತೆ ವರ್ತಿಸಿದ ಅಪ್ಪನನ್ನು ಸಮಾಧಾನ ಪಡಿಸಲು ಮಗ ಪರದಾಡಿದ್ದಾನೆ. ವಿಮಾನದಲ್ಲಿ ಬೀಡಿ, ಸಿಗರೇಟ್​ ಸೇದಲು ಅವಕಾಶವಿಲ್ಲ. ಬಳಿಕ, ಸಿಗರೇಟ್​ ಕೊಟ್ಟರೂ ಸೇದದೆ ಬೀಡಿ ನೀಡುವಂತೆ ಪಟ್ಟು ಹಿಡಿದಿದ್ದಾನೆ. ಕಳೆದ 3 ಗಂಟೆಯಿಂದ ಬೀಡಿ ಸೇದಿಲ್ಲವೆಂದು ವ್ಯಕ್ತಿ ರಂಪಾಟ ಮಾಡಿರುವುದರಿಂದ ಕುಟುಂಬಸ್ಥರು ಪೇಚಿಗೆ ಸಿಲುಕಿದ್ದಾರೆ.

ಬೀಡಿ, ಸಿಗರೇಟ್, ತಂಬಾಕು ಅಥವಾ ಮದ್ಯಪಾನ ಯಾವುದೇ ಇರಲಿ. ಅತಿಯಾದ ಚಟ ಮನುಷ್ಯನಿಗೆ ಅಂಟಿಕೊಂಡರೆ ಬಳಿಕ ಬಿಡಿಸುವುದು ಅಥವಾ ಬಿಡುವುದು ಕಷ್ಟವೇ ಆಗುತ್ತದೆ. ಒಂದೇ ಸಲಕ್ಕೆ ಎಲ್ಲವನ್ನೂ ಬಿಟ್ಟಿರಲು ಆಗುವುದಿಲ್ಲ. ಅಂಥಾ ಸಮಯದಲ್ಲಿ ವೈದ್ಯರ ಅಥವಾ ಮಾನಸಿಕ ರೋಗ ತಜ್ಞರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದುಕೊಳ್ಳುವುದು ಅವಶ್ಯವಾಗುತ್ತದೆ.

ಸಿಗರೇಟ್ ಬಿಡಲು ಇಚ್ಛಿಸುವವರು ಕೆಲವು ಸುಲಭ ಮಾರ್ಗಗಳನ್ನು ಅನುಸರಿಸಬಹುದು. ದಿನನಿತ್ಯದ ಜೀವನದಲ್ಲಿ ಅವನ್ನು ಅಳವಡಿಸಿಕೊಂಡು ದುಶ್ಚಟಗಳಿಂದ ಬಿಡುಗಡೆ ಹೊಂದಬಹುದು. ಆ ಬಗ್ಗೆ ವಿವರ ಈ ಕೆಳಗಿನ ಬರಹದಲ್ಲಿ ನೀಡಲಾಗಿದೆ.

ಇದನ್ನೂ ಓದಿ: World No Tobacco Day 2021: ಸಿಗರೇಟ್ ಸೇವನೆ ಬಿಡಬೇಕು ಎಂದು ಯೋಚಿಸುತ್ತಿದ್ದೀರಾ? ಈ ಮಾರ್ಗಗಳನ್ನು ಅನುಸರಿಸಿ

World No Tobacco Day: ಅಜಯ್​ ದೇವಗನ್​, ಹೃತಿಕ್​, ಸಲ್ಮಾನ್, ಸೈಫ್​​ ಸಿಗರೇಟ್ ಚಟ​ ಬಿಡಲು ಕಾರಣ ಆಗಿದ್ದು ಏನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada