ಮುಗಿದಿಲ್ಲ ಕರ್ನಾಟಕ ಬಿಜೆಪಿ ಗೊಂದಲ; ಗುರುವಾರ ಶಾಸಕರ ನಿಯೋಗದಿಂದ ಅರುಣ್ ಸಿಂಗ್ ಭೇಟಿಗೆ ಕಾಲಾವಕಾಶ

TV9kannada Web Team

TV9kannada Web Team | Edited By: sadhu srinath

Updated on: Jun 14, 2021 | 5:03 PM

Karnataka BJP leadership: ಈ ಶಾಸಕರು ಪಕ್ಷದ ಚೌಕಟ್ಟಿನಲ್ಲೇ ಕೆಲ ಸಲಹೆಗಳನ್ನು ನೀಡಲು ಪ್ಲ್ಯಾನ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅರುಣ್‌ಸಿಂಗ್‌ಗೆ ತಮ್ಮ ಭಾವನೆ ಹೇಳಲು  ನಿರ್ಧರಿಸಿರುವ ಶಾಸಕರು ಉಸ್ತುವಾರಿಗೆ ಸಲಹೆ ಕೊಡ್ತೇವೆ, ಮುಂದಿನದ್ದು ಅವರಿಗೆ ಬಿಟ್ಟದ್ದು ಎಂಬ ನಿರ್ಧಾರ ತಳೆದಿದ್ದಾರೆ ಎಂದು ಅರುಣ್ ಸಿಂಗ್ ಭೇಟಿಗೆ ಉದ್ದೇಶಿಸಿರುವ ಶಾಸಕರಿಂದ ಮಾಹಿತಿ ಲಭ್ಯವಾಗಿದೆ. 

ಮುಗಿದಿಲ್ಲ ಕರ್ನಾಟಕ ಬಿಜೆಪಿ ಗೊಂದಲ; ಗುರುವಾರ ಶಾಸಕರ ನಿಯೋಗದಿಂದ ಅರುಣ್ ಸಿಂಗ್ ಭೇಟಿಗೆ ಕಾಲಾವಕಾಶ
ಅರುಣ್ ಸಿಂಗ್

ಬೆಂಗಳೂರು: ಇನ್ನೂ ಮುಗಿದಿಲ್ಲ ಕರ್ನಾಟಕ ಬಿಜೆಪಿ ಗೊಂದಲ. ಮೂಮದೆರಡು ವರ್ಷ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಸುವುದಿಲ್ಲ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಅವರೇ ಕಳೆದ ವಾರ ಸ್ಪಷ್ಟಪಡಿಸಿದ್ದರೂ ಇನ್ನೂ ಬಗೆಹರಿದಿಲ್ಲ ರಾಜ್ಯ ಬಿಜೆಪಿ ನಾಯಕತ್ವದ ಬಗೆಗಿನ ಅಸ್ಪಷ್ಟತೆ. ಈ ಮಧ್ಯೆ ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದು ಎಂದು ವೀರಶೈವ ಲಿಂಗಾಯತ ಮಠಾಧೀಶರು ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲಿನ ಒತ್ತಾಯದ ಸಂದೇಶ ರವಾನಿಸಿಯೂ ಆಗಿದೆ. ಆದರೂ ರಾಜ್ಯ ಬಿಜೆಪಿಯಲ್ಲಿ ಕೆಲ ಶಾಸಕರ ಅಸಮಾಧಾನ ಮುಂದುವರಿದಿದೆ.

ಈ ಬೆಳವಣಿಗೆಗಳಿಗೆ ಇಂಬು ಕೊಡುವಂತೆ ಸ್ವತಃ  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ ಅವರೇ ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಬರುತ್ತಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಂಡು ರಾಜ್ಯದ ಅನೇಕ ಜಿಲ್ಲೆಗಳ ಬಿಜೆಪಿ ಶಾಸಕರು ಅರುಣ್ ಸಿಂಗ್‌ ಬಲೀ ಭೇಟಿಗೆ ಸಮಯಾವಕಾಶ ಕೋರಿದ್ದಾರೆ.

ಜೂನ್ 17ರಂದು ಬಿಜೆಪಿ ಶಾಸಕರ ನಿಯೋಗಗವೊಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ ಅವರನ್ನು ಭೇಟಿ ಮಾಡಿ, ತಮ್ಮ ಸೂಕ್ತ ಅಭಿಪ್ರಾಯ ಹೇಳಲು ಮುಂದಾಗಿದ್ದಾರೆ. ಸದರಿ ಶಾಸಕರ ತಂಡವು ಅರುಣ್‌ಸಿಂಗ್ ಭೇಟಿಯಾಗಿ ನಮ್ಮ ಅಹವಾಲು ಹೇಳುತ್ತೇವೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಕೆಲ ಅಭಿಪ್ರಾಯ ತಿಳಿಸ್ತೇವೆ. ಸರ್ಕಾರಕ್ಕೆ ಒಳ್ಳೆಯದಾಗಬೇಕೆಂಬ ಕಾರಣಕ್ಕೆ ನಮ್ಮೀ ಅಭಿಪ್ರಾಯ ಸಲ್ಲಿಸುತ್ತೇವೆ ಅನ್ನುತ್ತಿದ್ದಾರೆ.

ಈ ಶಾಸಕರು ಪಕ್ಷದ ಚೌಕಟ್ಟಿನಲ್ಲೇ ಕೆಲ ಸಲಹೆಗಳನ್ನು ನೀಡಲು ಪ್ಲ್ಯಾನ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅರುಣ್‌ಸಿಂಗ್‌ಗೆ ತಮ್ಮ ಭಾವನೆ ಹೇಳಲು  ನಿರ್ಧರಿಸಿರುವ ಶಾಸಕರು ಉಸ್ತುವಾರಿಗೆ ಸಲಹೆ ಕೊಡ್ತೇವೆ, ಮುಂದಿನದ್ದು ಅವರಿಗೆ ಬಿಟ್ಟದ್ದು ಎಂಬ ನಿರ್ಧಾರ ತಳೆದಿದ್ದಾರೆ ಎಂದು ಅರುಣ್ ಸಿಂಗ್ ಭೇಟಿಗೆ ಉದ್ದೇಶಿಸಿರುವ ಶಾಸಕರಿಂದ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ಶಾಸಕರು, ಕೊಡಗು ಜಿಲ್ಲೆಯ ಇಬ್ಬರು, ಮೈಸೂರು ಜಿಲ್ಲೆಯ ಶಾಸಕರಿಬ್ಬರು, ಬಾಗಲಕೋಟೆ ಜಿಲ್ಲೆಯ ಇಬ್ಬರು, ಚಿತ್ರದುರ್ಗ ಜಿಲ್ಲೆಯ ಒಬ್ಬರು, ಧಾರವಾಡ ಜಿಲ್ಲೆಯ ಓರ್ವ ಶಾಸಕರು ತಂಡವಾಗಿ ತೆರಳಿ ಅರುಣ್‌ ಸಿಂಗ್​​ರನ್ನು  ಭೇಟಿಯಾಗಲು ನಿರ್ಧಾರ ಮಾಡಿದ್ದಾರೆ.  ಜೂನ್ 17ರಂದು ಗುರುವಾರ ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಉಸ್ತುವಾರಿ ಅರುಣ್‌ ಸಿಂಗ್​​ರನ್ನು  ಭೇಟಿಯಾಗುವ  ಸಾಧ್ಯತೆಯಿದೆ.

ಕರುಣಾನಿಧಿ ವ್ಹೀಲ್​ಚೇರ್​ನಲ್ಲಿ ಕುಳಿತು ಆಡಳಿತ ಮಾಡಿಲ್ವೇ?

ಈ ಮಧ್ಯೆ, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದು ಎಂದು ವೀರಶೈವ ಲಿಂಗಾಯತ ಮಠಾಧೀಶರು ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲ ಒತ್ತಾಯದ ಸಂದೇಶ ರವಾನೆ ಮಾಡಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರಿನ ಷಡಕ್ಷರಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ 10ಕ್ಕೂ ಹೆಚ್ಚು ಮಠಾಧೀಶರು ಸಿಎಂ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ವ್ಯಕ್ತಿಗಳು ಸಿಎಂ ಸ್ಥಾನಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಮಾನಸಿಕವಾಗಿ ನೋವುಂಟಾಗುತ್ತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್​ವೈ ಅವರು ಕಾರಣ ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಷಡಕ್ಷರಿ ಮಠದ ರುದ್ರಮುನಿ ಸ್ವಾಮಿಜಿ, ಜಂಗಮ ಮಠದ ಸಿದ್ದಲಿಂಗ ಸ್ವಾಮಿಜಿ, ಬೆಳ್ಳಾವಿ ಕಾರದ ಮಠದ ವೀರಬಸವ ಸ್ವಾಮಿಜಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ವಾಮಿಜಿಗಳು ಯಡಿಯೂರಪ್ಪ ಪರ  ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲಿನ ಸಂದೇಶ ರವಾನಿಸಿದ್ದಾರೆ.ಸಿಎಂ ಸ್ಥಾನದಿಂದ BSY ಕೆಳಗಿಳಿಸಲು ಹುನ್ನಾರ ನಡೆಯುತ್ತಿದೆ. ಸಿಎಂ ಯಡಿಯೂರಪ್ಪಗೆ ವಯಸ್ಸಾಗಿದೆ, ನಡೆಯಲು ಆಗಲ್ಲ. ಕಿವಿ ಕೇಳಿಸುವುದಿಲ್ಲ, ಉಸಿರಾಡಲು ಆಗಲ್ಲವೆಂದು ಅಪಪ್ರಚಾರ ನಡೆದಿದೆ. ಕರುಣಾನಿಧಿ ವ್ಹೀಲ್​ಚೇರ್​ನಲ್ಲಿ ಕುಳಿತು ಆಡಳಿತ ಮಾಡಿಲ್ವೇ? ನಮ್ಮ ಯಡಿಯೂರಪ್ಪಗೆ ಅಷ್ಟೊಂದು ವಯಸ್ಸಾಗಿದೆಯೇ? BSY ಅಧಿಕಾರ ಪೂರ್ಣಗೊಳಿಸುವವರೆಗೆ ಅಡ್ಡಿಪಡಿಸಬಾರದು. ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ಅಂಥವರನ್ನು ತುಳಿಯಲು, ಮೂಲೆಗುಂಪು ಮಾಡಲು ಪಿತೂರಿ ನಡೆದಿದೆ ಎಂದು ಮಠಾಧೀಶರು ಅಸಮಾಧಾನ ಸೂಚಿಸಿದ್ದಾರೆ.

(change in leadership picks up again some of the bjp mlas decide to meet karnataka bjp incharge arun singh)

ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದ ಅರುಣ್ ಸಿಂಗ್, ಯಡಿಯೂರಪ್ಪ ಬಗ್ಗೆ ಹೇಳಿದ್ದೇನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada