‘ನೋಡಮ್ಮಾ ಹುಡುಗಿ.. ಕೇಳಮ್ಮ ಸರಿಯಾಗಿ.. ಲವ್​ ಮ್ಯಾರೇಜ್​ ಆದ್ರೂ ನಿಮ್ಮ ಅಪ್ಪಾ ಅಮ್ಮನನ್ನ ನೋಡ್ಕೋಬೇಕು ಸರಿಯಾಗಿ’

|

Updated on: Mar 06, 2021 | 8:05 PM

ಪ್ರೀತಿಸಿ ಮದುವೆಯಾದ ಜೋಡಿಗೆ ಹೊನ್ನಾಳಿ ಶಾಸಕ M.P.ರೇಣುಕಾಚಾರ್ಯ ಬುದ್ಧಿವಾದ ಹೇಳಿದ ಸ್ವಾರಸ್ಯಕರ ಸಂಗತಿ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುವದಲ್ಲಿ ನಡೆದಿದೆ. ಕುಂಕುವ ಗ್ರಾಮದ ಶಿವಕುಮಾರ್ ಹಾಗೂ ಭೂಮಿಕಾ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ತಂದೆ, ತಾಯಿ ವಿರೋಧದ ನಡುವೆಯೂ ಮದುವೆಯಾಗಿದ್ದರು.

‘ನೋಡಮ್ಮಾ ಹುಡುಗಿ.. ಕೇಳಮ್ಮ ಸರಿಯಾಗಿ.. ಲವ್​ ಮ್ಯಾರೇಜ್​ ಆದ್ರೂ ನಿಮ್ಮ ಅಪ್ಪಾ ಅಮ್ಮನನ್ನ ನೋಡ್ಕೋಬೇಕು ಸರಿಯಾಗಿ’
ನವಜೋಡಿಗೆ ಬುದ್ಧಿವಾದ ಹೇಳಿದ ಶಾಸಕ M.P.ರೇಣುಕಾಚಾರ್ಯ
Follow us on

ದಾವಣಗೆರೆ: ಪ್ರೀತಿಸಿ ಮದುವೆಯಾದ ಜೋಡಿಗೆ ಹೊನ್ನಾಳಿ ಶಾಸಕ M.P.ರೇಣುಕಾಚಾರ್ಯ ಬುದ್ಧಿವಾದ ಹೇಳಿದ ಸ್ವಾರಸ್ಯಕರ ಸಂಗತಿ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುವದಲ್ಲಿ ನಡೆದಿದೆ. ಕುಂಕುವ ಗ್ರಾಮದ ಶಿವಕುಮಾರ್ ಹಾಗೂ ಭೂಮಿಕಾ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ತಂದೆ, ತಾಯಿ ವಿರೋಧದ ನಡುವೆಯೂ ಮದುವೆಯಾಗಿದ್ದರು.

‘ನಿಮ್ಮ ತಂದೆ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು’

ಇನ್ನು, ಈ ಬಗ್ಗೆ ಅರಿತ ಶಾಸಕ ನಿಮ್ಮ ಅಪ್ಪ ನನ್ನ ಸ್ನೇಹಿತ, ನೀವು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಿಮ್ಮ ತಂದೆ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಭೂಮಿಕಾಗೆ ತಾಕೀತು ಮಾಡಿದರು. ಜೊತೆಗೆ, ನೀನು ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಶಿವಕುಮಾರ್​ಗೆ ಬುದ್ಧಿವಾದ ಸಹ ಹೇಳಿದರು. ನವಜೋಡಿ ರೇಣುಕಾಚಾರ್ಯರ ಮಾತಿಗೆ ಒಪ್ಪಿದ ಬಳಿಕ ಚೆನ್ನಾಗಿ ಬಾಳಿ ಎಂದು ಇಬ್ಬರಿಗೂ ಶಾಸಕ ಶುಭಹಾರೈಸಿದರು.

‘ನೀನು ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು’

ರೇಣುಕಾಚಾರ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿಗಳು
ಇತ್ತ, ಶಾಶಕ ರೇಣುಕಾಚಾರ್ಯ ಜೊತೆ ವಿದ್ಯಾರ್ಥಿಗಳು ಸೆಲ್ಫಿಗಾಗಿ ಮುಗಿಬಿದ್ದ ಪ್ರಸಂಗವೂ ಸಹ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

ರೇಣುಕಾಚಾರ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ಜೊತೆ ಖುಷಿಯಿಂದ ಬೆರೆತ ರೇಣುಕಾಚಾರ್ಯ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಶಾಸಕರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿ ಸಂತಸಟ್ಟರು.

ವಿದ್ಯಾರ್ಥಿಗಳ ಜೊತೆ ಖುಷಿಯಿಂದ ಬೆರೆತ ಶಾಸಕ ರೇಣುಕಾಚಾರ್ಯ

‘ಅಬಕಾರಿ ಡೇಸ್​’ ನೆನೆದ ಶಾಸಕ!
ಕಳ್ಳಬಟ್ಟಿ ಸಾರಾಯಿಗೆ ಕಡಿವಾಣ ಹಾಕಲು ತೆರಳಿದ್ದಾಗ ನನ್ನ ಪ್ರಾಣಕ್ಕೆ ಕುತ್ತು ಬಂದಿತ್ತು. ಮಚ್ಚು ಲಾಂಗ್​ಗಳಿಂದ ದುಷ್ಕರ್ಮಿಗಳು ನನ್ನ ಮೇಲೆ ದಾಳಿಗೆ ಮುಂದಾಗಿದ್ರು ಎಂದು ತಾವು ಅಬಕಾರಿ ಸಚಿವರಾಗಿದ್ದಾಗಿನ ಘಟನೆಯನ್ನು ರೇಣುಕಾಚಾರ್ಯ ಸ್ಮರಿಸಿದರು.

ಅಂದು ನನ್ನ ಜೀವಕ್ಕೆ ಸಂಚಕಾರ ಬಂದಿತ್ತು. ಅಷ್ಟಾದರೂ ನಾನು ಬಿಡಲಿಲ್ಲ. ಮತ್ತೆ ದಾಳಿ ಮಾಡಿದೆ. ಅಬಕಾರಿ ಇಲಾಖೆಯ ಮಹಿಳಾ ಸಿಬ್ಬಂದಿಗೆ ಗಾಯವಾಗಿತ್ತು ಎಂದು ಆ ಘಟನೆಯನ್ನು ಸ್ಮರಿಸಿದರು. ಸಿಎಂ ಯಡಿಯೂರಪ್ಪ ಫೋನ್ ಮಾಡಿ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರು ಎಂದು ನೆನಪಿಸಿಕೊಂಡರು.

ಇದನ್ನೂ ಓದಿ: ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವುಗೊಳಿಸಿ -ಮತ್ತೆ ಪುಂಡಾಟಿಕೆ ಮೆರೆಯಲು ಸಜ್ಜಾದ ಎಂ.ಇ.ಎಸ್

Published On - 6:43 pm, Sat, 6 March 21