ಬೆಂಗಳೂರು, ಅಕ್ಟೋಬರ್ 28: ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿಜಯಭೇರಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೈದರಾಬಾದ್ ತಲುಪಿದ್ದಾರೆ. ಇದೇ ವೇಳೆ ಇತ್ತ ಕರ್ನಾಟಕದಲ್ಲಿ ಪ್ರತಿಪಕ್ಷ ಬಿಜೆಪಿ (BJP) ಅವರ ವಿರುದ್ಧ ವ್ಯಂಗ್ಯಾಸ್ತ್ರಗಳ ಮೂಲಕ ಟೀಕಾ ಪ್ರಹಾರ ನಡೆಸಿದೆ. ಡಿಕೆ ಶಿವಕುಮಾರ್ ಅವರು ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ. ಕಲೆಕ್ಷನ್ ಹಣವನ್ನು ತಲುಪಿಸಲು ತೆಲಂಗಾಣಕ್ಕೆ ಹೋಗಿರಬೇಕು ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ವ್ಯಂಗ್ಯವಾಡಿದೆ.
‘ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ! ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಕರ್ನಾಟಕದಲ್ಲಿ ಭೀಕರ ಬರವಿದೆ, ಜನ-ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲ, ಸಾಲದ್ದಕ್ಕೆ ನೀವು ನೀರಾವರಿ ಸಚಿವರು! ಕರ್ನಾಟಕದಲ್ಲಿ ಎಷ್ಟು ಬಾರಿ ಬರ ಪ್ರವಾಸ ಮಾಡಿದ್ದೀರಿ ಸ್ವಾಮಿ? ತೆಲಂಗಾಣ ಕಾಂಗ್ರೆಸ್ಸಿಗರ ಮನೆಯಲ್ಲಿ ಐಟಿ ರೇಡ್ ವೇಳೆ ಹಣ ಸಿಕ್ಕಿ ಬಿದ್ದಿದ್ದರಿಂದ, ಕರ್ನಾಟಕದಲ್ಲಿ ಮಾಡಿದ ಕಲೆಕ್ಷನ್ ಹಣವನ್ನು ತಲುಪಿಸಲು ಹೋಗಿದ್ದೀರೇನು’ ಎಂದು ಎಕ್ಸ್ ಸಂದೇಶದಲ್ಲಿ ಬಿಜೆಪಿ ಪ್ರಶ್ನಿಸಿದೆ. ಜತೆಗೆ #ATMSarkara, #CongressLootsKarnataka ಹ್ಯಾಷ್ಟ್ಯಾಗ್ಗಳ ಮೂಲಕ ಕುಹಕವಾಗಿಡಿದೆ.
ಕರ್ನಾಟಕಕ್ಕೆ ಬರಗಾಲದ ಗ್ರಹಣ ಹಿಡಿಯುತ್ತಿದ್ದಂತೆ @INCKarnataka ಸರ್ಕಾರ ವಿದ್ಯುತ್ ತೆಗೆದು ಕತ್ತಲಲ್ಲಿ ನಾಪತ್ತೆಯಾಗಿದೆ.
ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಶೇ. 80 ರಷ್ಟು ಬೆಳೆ ನಾಶವಾಗಿದೆ. ಮತ್ತೊಂದು ಕಡೆ ಎರಡು ಗಂಟೆಯೂ ವಿದ್ಯುತ್ ಪೂರೈಕೆ ಮಾಡಲು ಯೋಗ್ಯತೆ ಇಲ್ಲದ @siddaramaiah ಅವರ ಸರ್ಕಾರದ ಕಾರಣದಿಂದ ಅನ್ನದಾತ ಕಂಗೆಟ್ಟು… pic.twitter.com/azfiuAqFR6
— BJP Karnataka (@BJP4Karnataka) October 28, 2023
ಕತ್ತಲೆ ಕರುನಾಡಲ್ಲಿ ಸರ್ಕಾರ ನಾಪತ್ತೆಯಾಗಿದೆ. ಬರ ಸಿಡಿಲಿಗೆ ಅನ್ನದಾತ ಬೆಂದು ಹೋಗಿದ್ದಾನೆ ಎಂದು ಮತ್ತೊಂದು ಸಂದೇಶದಲ್ಲಿ ಬಿಜೆಪಿ ಟೀಕಿಸಿದೆ. ಜತೆಗೆ ವಿದ್ಯುತ್ ಅಭಾವ, ರೈತರ ಸಂಕಷ್ಟಗಳ ಕುರಿತ ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಬೊಮ್ಮಾಯಿ ಹೃದಯ ಆರೋಗ್ಯ ಕುರಿತು ಕೀಳು ಅಭಿರುಚಿಯ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಕೋನರಡ್ಡಿ
‘ಕರ್ನಾಟಕಕ್ಕೆ ಬರಗಾಲದ ಗ್ರಹಣ ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ವಿದ್ಯುತ್ ತೆಗೆದು ಕತ್ತಲಲ್ಲಿ ನಾಪತ್ತೆಯಾಗಿದೆ. ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಶೇ 80 ರಷ್ಟು ಬೆಳೆ ನಾಶವಾಗಿದೆ. ಮತ್ತೊಂದು ಕಡೆ ಎರಡು ಗಂಟೆಯೂ ವಿದ್ಯುತ್ ಪೂರೈಕೆ ಮಾಡಲು ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಅವರ ಸರ್ಕಾರದ ಕಾರಣದಿಂದ ಅನ್ನದಾತ ಕಂಗೆಟ್ಟು ಹೋಗಿದ್ದಾನೆ. ಕಾಂಗ್ರೆಸ್ ಬಂದಿದೆ ಬರದ ಜತೆ ಕರುನಾಡು ಕತ್ತಲಾಗಿದೆ!’ ಎಂದು ಬಿಜೆಪಿ ಲೇವಡಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ