ರಾಜ್ಯದಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗ್ತಿಲ್ಲ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿ

Updated By: ಪ್ರಸನ್ನ ಹೆಗಡೆ

Updated on: Oct 07, 2025 | 5:45 PM

ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಬರ್ತಾರೋ ಏನೋ ಎಂಬ ಗೊಂದಲ ಉಂಟಾಗಿದ್ದು, ರಾಜ್ಯ ಸರ್ಕಾರವಂತೂ ಸ್ಥಗಿತವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ನವೆಂಬರ್​ ಕ್ರಾಂತಿಯಾಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಈ ಗೊಂದಲಗಳಾದಾಗ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗೋದಿಲ್ಲ ಎಂದು ಅವರು ಹೇಳಿದ್ದಾರೆ.

ಉಡುಪಿ, ಅಕ್ಟೋಬರ್​ 07: ರಾಜ್ಯದಲ್ಲಿ ನವೆಂಬರ್​ ಕ್ರಾಂತಿಯಾಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯ ಸರ್ಕಾರವಂತೂ ಸ್ಥಗಿತವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojary) ಹೇಳಿದ್ದಾರೆ. ಹೊಸ ಮುಖ್ಯಮಂತ್ರಿ ಬರ್ತಾರೋ ಏನೋ ಎಂಬ ಗೊಂದಲ ಇದ್ದಾಗ ಸರ್ಕಾರಿ ಕೆಲಸಗಳು ಸ್ಥಗಿತ ಆಗುತ್ತೆ. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗೋದಿಲ್ಲ. ವಿಎ, ಜಿಲ್ಲಾಧಿಕಾರಿ, ಶಿಕ್ಷಕರು ಯಾರನ್ನೂ ಕೇಳಿದರು ನಾವು ಜಾತಿಗಣತಿಯಲ್ಲಿ ಇದ್ದೇವೆ ಅಂತಾರೆ. ಅಸ್ಥಿರ ಸರ್ಕಾರ ಇದ್ದಾಗ ಯಾರು ಕೂಡ ಕೆಲಸ ಮಾಡುವುದಿಲ್ಲ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.