ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಅವರ ಸೂಚನೆ ಮೇರೆಗೆ ಇವರ ಕ್ರಮ: ಆರ್ ಅಶೋಕ್ ವಾಗ್ದಾಳಿ

| Updated By: Ganapathi Sharma

Updated on: Oct 14, 2024 | 12:54 PM

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಹೋರಾಟಕ್ಕಿಳಿದಿದ್ದಾರೆ. ಭಾನುವಾರ ಹುಬ್ಬಳ್ಳಿಯಲ್ಲಿ ಬೃಹತ್ ಹೋರಾಟ ನಡೆಸಿದ್ದ ಬಿಜೆಪಿ ನಾಯಕರು, ಇಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಪಕ್ಷ ನಾಯಕ ಆರ್ ಅಶೋಕ ಸೇರಿದಂತೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು. ಯಾರು ಏನಂದರು ಎಂಬ ವಿವರ ಇಲ್ಲಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಅವರ ಸೂಚನೆ ಮೇರೆಗೆ ಇವರ ಕ್ರಮ: ಆರ್ ಅಶೋಕ್ ವಾಗ್ದಾಳಿ
ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಅವರ ಸೂಚನೆ ಮೇರೆಗೆ ಇವರ ಕ್ರಮ: ಆರ್ ಅಶೋಕ್ ವಾಗ್ದಾಳಿ
Follow us on

ಬೆಂಗಳೂರು, ಅಕ್ಟೋಬರ್ 14: ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಅವರ ಸೂಚನೆಗೆ ಮೇರೆಗೆ ಇವರು ಕಾರ್ಯನಿರ್ವಹಿಸುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಪ್ರತಿಭಟಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಾತನಾಡಿದ ಅಶೋಕ, ಈ ಸರ್ಕಾರ ಭಯೋತ್ಪಾದಕರ ಸೂಚನೆ ಮೇರೆಗೆ ನಡೆಯುತ್ತಿದೆ. ಹುಬ್ಬಳಿಯಲ್ಲಿ ಹಾಕಿದ್ದ ಕೇ್​ಗಳನ್ನು ವಾಪಸ್ ಪಡೆಯಿರಿ ಎಂದು ಅವರು ಸೂಚನೆ ನೀಡಿದರು, ಅದಕ್ಕೆ ಇವರು ವಾಪಸ್ ಪಡೆದಿದ್ದಾರೆ. ಮುಸ್ಲಿಮನರ ಋಣ ತೀರಿಸುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣ, ವಾಲ್ಮೀಕಿ ಹಗರಣದ ಆರೋಪ ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸೈಟ್ ವಾಪಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯಗೆ ಅವರ ಪಕ್ಷದವರೇ ಬೆಂಬಲ ಕೊಡುತ್ತಿಲ್ಲ. ಮುಸ್ಲಿಮರ ಒಲೈಕೆ ಮಾಡಿ ಉಳಿಯಬೇಕು ಎಂದು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಇವರು ಹಿಂದುಗಳ ಮೇಲಿನ ಕೇಸ್​ಗಳನ್ನು ವಾಪಸ್ಸು ಪಡೆದಿದ್ದಾರಾ? ಸಿಟಿ ರವಿ ಏನ್ ಕೇಸ್ ವಾಪಸ್ಸು ತೆಗಿರಿ ಅಂತಾ ಕೇಳಿಲ್ಲಾ. ಪೊಲೋಸರನ್ನ ಹೊಡೆದು, ಬೆಂಕಿ ಹಚ್ಚಿದವರ ಕೇಸ್ ವಾಪಸ್ಸು ಪಡೆದಿದ್ದಾರೆ. ಬಿಜೆಪಿ ಶಾಸಕ ಮುನಿರತ್ನಗೆ ಜೈಲಾಗಿದೆ. ಆದರೆ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮೇಲೆ ರೇಪ್ ಕೇಸ್ ಆಗಿದೆ, ಅವರಿಗೆ ಯಾಕೆ ಜೈಲಿಲ್ಲಾ ಎಂದು ಅಶೋಕ್ ಪ್ರಶ್ನಿಸಿದರು.

ಸಿದ್ದರಾಮಯ್ಯ ಮನೆ ದೇವರು ಟಿಪ್ಪು, ಸರ್ಕಾರದಿಂದ ಟಿಪ್ಪು ಆಡಳಿತ: ಅಶೋಕ್

ಇವರ (ಕಾಂಗ್ರೆಸ್ ನಾಯಕರ) ಬ್ರದರ್ಸ್ ಯಾರು? ಕುಕ್ಕರ್ ಬ್ಲಾಸ್ಟ್ ಮಾಡಿದ್ರೆ ಇವರ ಬ್ರದರ್ಸ್. ಎಲ್ಲಾ ಕಡೆ ಹಿಂದುಗಳನ್ನ ತುಳಿಯಲಾಗುತ್ತಿದೆ. ಗಣೇಶ ಹಬ್ಬಕ್ಕೆ ಪೊಲೀಸ್ ಅನುಮತಿ ಬೇಕು. ಸರ್ಕಾರ ಟಿಪ್ಪು ಆಡಳಿತ ಮಾಡುತ್ತಿದೆ. ಸಿದ್ದರಾಮಯ್ಯ ಮನೆ ದೇವರು ಟಿಪ್ಪು. ನಾಮ ಇಟ್ಟುಕೊಂಡು ಹೋದರೆ ನಾಮ್ ಗಿರಾಕಿನ ಅಂತಾ ಚೇಡಿಸ್ತಿದ್ರ, ಟ್ರಾನ್ಸಫರ್​ಗೆ ಹೋದ್ರೆ ಜಿಲಾಬಿನಾ ಅನ್ನೋರು. ಈಗ ಸಿದ್ದರಾಮಯ್ಯ ಅವರೇ ಹೋಗಿ ಕುಂಕುಮ ಇಟ್ಟುಕೊಳ್ತಿದ್ದಾರೆ. ಜನ್ಮದಲ್ಲೇ ಅರ್ಚನೆ ಮಾಡಿಸಿರಲಿಲ್ಲ, ಈಗ ಮಾಡಿಸುತ್ತಿದ್ದಾರೆ. ಅವರು ಹೋಗುವ ಸಮಯ ಬಂದಿದೆ ಎಂದು ಅಶೋಕ್ ಕಿಡಿ ಕಾರಿದರು.

ಮೈಸೂರು ಏರ್ ಪೋರ್ಟ್​​​ಗೆ ಚಾಮುಂಡೇಶ್ವರಿ ಹೆಸರು ಯಾಕೆ ಇಡಲಿಲ್ಲ? ನಾವು ಪ್ರತಿಭಟನೆ ಮಾಡಲಿಲ್ಲ ಎಂದರೆ ಟಿಪ್ಪು ಹೆಸರು ಇಡುತ್ತಿದ್ದರು. ಮುಸಲ್ಮಾನರ ತುಘಲಕ್ ಆಡಳಿತ ನಡೆಯುತ್ತಿದೆ. ಪ್ರತಿಭಟನೆ ಮುಗಿದ ಮೇಲೆ ರಾಜಭನಕ್ಕೆ ಹೋಗಿ ಸರ್ಕಾರದ ವಿರುದ್ದ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಸರ್ಕಾರದ ವಿರುದ್ದ ಇನ್ನು ಹೋರಾಟ ಮಾಡುತ್ತೇವೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.

ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಅಶ್ವತ್ಥ್ ನಾರಾಯಣ, ಎಸ್ಆರ್‌ ವಿಶ್ವನಾಥ್, ಎಂಎಲ್‌ಸಿಗಳಾದ ಛಲವಾದಿ ನಾರಾಯಣ ಸ್ವಾಮಿ, ಎನ್‌.ರವಿಕುಮಾರ್ ಭಾಗಿಯಾದರು. ಪ್ರತಿಭಟನೆ ಸಮಾವೇಶದಲ್ಲಿ ಭಾಗಿಯಾದ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಕಾನೂನಿಗೆ ಗೌರವ ಕೊಡ್ ಕಾಂಗ್ರೆಸ್’

ತುಷ್ಟೀಕರಣ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್, ಕಾನೂನಿಗೆ ಗೌರವ ಕೊಡುತ್ತಿಲ್ಲ. ಭಯೋತ್ಪಾದಕರು ಕಾಂಗ್ರೆಸ್​ನವರ ಸಹೋದರರು ಎಂದು ಅಶ್ವತ್ಥ್ ನಾರಾಯಣ ಆರೋಪಿಸಿದ್ದಾರೆ. ಭಯೋತ್ಪಾದಕರನ್ನು ಸಿಎಂ ಸಿದ್ದರಾಮಯ್ಯ ರಕ್ಷಣೆ ಮಾಡಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಯೋತ್ಪಾದಕ: ಸಿದ್ದರಾಮಯ್ಯ

ಇನ್ನೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರೇ ಭಯೋತ್ಪಾದಕರು ಎಂದಿದ್ದ ಸಿಎಂ ಸಿದ್ದರಾಮಯ್ಯಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಕಲ್ಲು ತೂರಿದವರು ದೇಶಪ್ರೇಮಿಗಳಾ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:52 pm, Mon, 14 October 24