ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಹಾಸನ ನಗರಸಭೆ; ಬಹುಮತಕ್ಕೆ ಹತ್ತಿರವಿದ್ದರೂ ಜೆಡಿಎಸ್​ಗೆ ನಿರಾಸೆ

| Updated By: guruganesh bhat

Updated on: Jun 19, 2021 | 9:52 PM

ಜೆಡಿಎಸ್ ಹಾಸನ ನಗರಸಭೆಯಲ್ಲಿ ಓರ್ವ ಪಕ್ಷೇತರ ಸದಸ್ಯನ ನೆರವಿನಿಂದ ಅಧಿಕಾರಕ್ಕೇರುವ ಕನಸು ಕಂಡಿತ್ತು. ಆದರೆ ಮೀಸಲಾತಿ ನೆರವಿನಿಂದ ಬಿಜೆಪಿ ಸದಸ್ಯರು ಅಧಿಕಾರ ಸ್ವೀಕರಿಸಿದ್ದು ಜೆಡಿಎಸ್​ನಿಂದ ಹಾಸನ ನಗರ ಸಭೆಯ ಅಧಿಕಾರ ಕೈತಪ್ಪಿದೆ.

ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಹಾಸನ ನಗರಸಭೆ; ಬಹುಮತಕ್ಕೆ ಹತ್ತಿರವಿದ್ದರೂ ಜೆಡಿಎಸ್​ಗೆ ನಿರಾಸೆ
ಸಾಂಕೇತಿಕ ಚಿತ್ರ
Follow us on

ಹಾಸನ: ಇದೇ ಮೊದಲ ಬಾರಿಗೆ ಹಾಸನ ನಗರಸಭೆ ಬಿಜೆಪಿ ತೆಕ್ಕೆಗೆ ಒಲಿದಿದೆ. ಜೆಡಿಎಸ್ ಪಕ್ಷ ಬಹುಮತಕ್ಕೆ ಹತ್ತಿರವಿದ್ದರೂ ಅಧಿಕಾರದಿಂದ ವಂಚಿತವಾಗಿದೆ. 35 ಸದಸ್ಯ ಬಲದ ನಗರಸಭೆಯಲ್ಲಿ 17 ಸ್ಥಾನ ಗೆದ್ದಿದ್ದ ಜೆಡಿಎಸ್​ಗೆ ನಿರಾಸೆ ಮೂಡಿದ್ದರೆ 13 ಸ್ಥಾನ ಗೆದ್ದಿದ್ದ ಬಿಜೆಪಿಗೆ ಅಧ್ಯಕ್ಷ ಸ್ಥಾನ ಒಲಿದಿದೆ.

ಜೆಡಿಎಸ್ ಹಾಸನ ನಗರಸಭೆಯಲ್ಲಿ ಓರ್ವ ಪಕ್ಷೇತರ ಸದಸ್ಯನ ನೆರವಿನಿಂದ ಅಧಿಕಾರಕ್ಕೇರುವ ಕನಸು ಕಂಡಿತ್ತು. ಆದರೆ ಮೀಸಲಾತಿ ನೆರವಿನಿಂದ ಬಿಜೆಪಿ ಸದಸ್ಯರು ಅಧಿಕಾರ ಸ್ವೀಕರಿಸಿದ್ದು ಜೆಡಿಎಸ್​ನಿಂದ ಹಾಸನ ನಗರ ಸಭೆಯ ಅಧಿಕಾರ ಕೈತಪ್ಪಿದೆ. ಬಿಜೆಪಿ ನಗರಸಭೆ ಸದಸ್ಯರಾದ ಮೋಹನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉಪಾಧ್ಯಕ್ಷರಾಗಿ ಮಂಗಳಾ ಪ್ರದೀಪ್ ಅಧಿಕಾರ ಸ್ವೀಕರಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇದ್ದಿದ್ದ ಕಾರಣ ಜೆಡಿಎಸ್​ ಕೈಯಿಂದ ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನ ಕೈಬಿಟ್ಟಿತ್ತು. ಆದರೆ ಜೆಡಿಎಸ್​ನಿಂದ ಆಯ್ಕೆಯಾಗಿದ್ದ ನಗರಸಭೆ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ಇದ್ದ ಕಾರಣದಿಂದಲೇ ಅರ್ಜಿ ಸಲ್ಲಿಸಲಿಲ್ಲ. ಹೀಗಾಗಿ ಉಪಾಧ್ಯಕ್ಷ ಸ್ಥಾನವೂ ಜೆಡಿಎಸ್​ ಕೈಬಿಟ್ಟಿದೆ. ಶಾಸಕ‌ ಪ್ರೀತಂಗೌಡ ಸಮ್ಮುಖದಲ್ಲಿ ಮೋಹನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಂಗಳಾ ಪ್ರದೀಪ್ ಅಧಿಕಾರ ಸ್ವೀಕರಿಸಿದ್ದಾರೆ. ಕೇವಲ 13 ಸ್ಥಾನ ಗೆದ್ದರೂ ಮೀಸಲಾತಿ ನೆರವಿನಿಂದ ಬಿಜೆಪಿ ಇದೇ ಮೊದಲ ಬಾರಿಗೆ ಹಾಸನ ನಗರಸಭೆಯಲ್ಲಿ ಅಧಿಕಾರ ಪಡೆದಿದೆ.

ಇದನ್ನೂ ಓದಿ: Karnataka Unlock: 2ನೇ ಹಂತದ ಅನ್​ಲಾಕ್: ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಓಡಾಟ ಆರಂಭ, ಎಲ್ಲಾ ಅಂಗಡಿ ಓಪನ್, ಶರತ್ತುಗಳು ಅನ್ವಯ

ಕೊವಿಡ್ ನಡುವೆಯೇ ಕರ್ನಾಟಕದಲ್ಲಿ 3,272 ಬಾಲ್ಯವಿವಾಹ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ: ಸಚಿವೆ ಶಶಿಕಲಾ ಜೊಲ್ಲೆ

(BJP Won Hassan Municipal election in first time JDS lost)