ಕೊವಿಡ್ ನಡುವೆಯೇ ಕರ್ನಾಟಕದಲ್ಲಿ 3,272 ಬಾಲ್ಯವಿವಾಹ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ: ಸಚಿವೆ ಶಶಿಕಲಾ ಜೊಲ್ಲೆ

ರಾಜ್ಯದಲ್ಲಿ 48 ಮಕ್ಕಳು ಕೊವಿಡ್‌ನಿಂದ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಅನಾಥ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ನಿರ್ವಹಿಸುತ್ತಿದೆ. 900ಕ್ಕೂ ಹೆಚ್ಚು ಮಕ್ಕಳು ಓರ್ವ ಪೋಷಕರನ್ನು ಕಳೆದುಕೊಂಡಿದ್ದಾರೆ.

ಕೊವಿಡ್ ನಡುವೆಯೇ ಕರ್ನಾಟಕದಲ್ಲಿ 3,272 ಬಾಲ್ಯವಿವಾಹ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ: ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ
Follow us
| Updated By: guruganesh bhat

Updated on: Jun 19, 2021 | 8:54 PM

ಮೈಸೂರು: ಕೊವಿಡ್ ಸೋಂಕಿತರ ಪ್ರಮಾಣ ಹೆಚ್ಚಿರುವಾಗಲೇ ರಾಜ್ಯದಲ್ಲಿ 3,272 ಬಾಲ್ಯವಿವಾಹ ನಡೆದಿದೆ. ಬಾಲ್ಯವಿವಾಹಗಳಿಗೆ ಸಂಬಂಧಿಸಿ 3589 ದೂರುಗಳು ಬಂದಿದ್ದು, 2,008 ಎಫ್​ಐಆರ್ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಾಲ್ಯವಿವಾಹಗಳ ಸಂಖ್ಯೆ ಕಡಿಮೆಯಿದೆ. ಆಶಾ ಕಾರ್ಯಕರ್ತೆಯರು, ಎನ್​ಜಿಒಗಳು ಬಾಲ್ಯವಿವಾಹ ತಡೆಯುವ ಕಾರ್ಯನಿರ್ವಹಿಸುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಮೈಸೂರಿನಲ್ಲಿ ತಿಳಿಸಿದರು.

ರಾಜ್ಯದಲ್ಲಿ 48 ಮಕ್ಕಳು ಕೊವಿಡ್‌ನಿಂದ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಅನಾಥ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ನಿರ್ವಹಿಸುತ್ತಿದೆ. 900ಕ್ಕೂ ಹೆಚ್ಚು ಮಕ್ಕಳು ಓರ್ವ ಪೋಷಕರನ್ನು ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಬಾಲ ಸೇವಾ ಯೋಜನೆಯನ್ನ ಜಾರಿಗೊಳಿಸಿದೆ. ಮಕ್ಕಳನ್ನು ದತ್ತು ಪಡೆದರೂ ಇಲಾಖೆ ಕೊಂಡಿಯಾಗಿ ಕೆಲಸಮಾಡುತ್ತಿದೆ. ಕೊವಿಡ್ 3ನೇ ಅಲೆಯ ನಿರ್ವಹಣೆಗಾಗಿ ಪ್ರತಿ ತಾಲೂಕಿನಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆಯಲಾಗುತ್ತಿದೆ. ಮಗುವಿನ ಜತೆ ತಾಯಿಯನ್ನೂ ಉಳಿದುಕೊಳ್ಳುವ ವ್ಯವಸ್ಥೆ ಮಾಡುತ್ತೇವೆ. 9,200 ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಕರ್ನಾಟಕದಲ್ಲಿ ಇಂದು 5,815 ಜನರಿಗೆ ಕೊವಿಡ್ ದೃಢ, 161 ಜನರು ನಿಧನ; ಪಾಸಿಟಿವಿಟಿ ದರ ಶೇ 3.38 ಕರ್ನಾಟಕದಲ್ಲಿ ಇಂದು 5,815 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 161 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 1,263 ಜನರಿಗೆ ಸೋಂಕು ಖಚಿತವಾಗಿದ್ದು, 23 ಜನರು ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 11,832 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇಂದಿನ ಕೊವಿಡ್ ಸೋಂಕಿತರನ್ನೂ ಸೇರಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 28,01,936ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 26,37,279 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 33,763 ಜನರ ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರ 1,263, ದಕ್ಷಿಣ ಕನ್ನಡ ಜಿಲ್ಲೆ 832, ಮೈಸೂರು 594, ಹಾಸನ 391, ಶಿವಮೊಗ್ಗ 223, ಬೆಳಗಾವಿ 222, ಮಂಡ್ಯ 208, ದಾವಣಗೆರೆ 194, ತುಮಕೂರು 182, ಚಿಕ್ಕಮಗಳೂರು 177, ಉಡುಪಿ 174, ಬೆಂಗಳೂರು ಗ್ರಾಮಾಂತರ 161, ಉತ್ತರ ಕನ್ನಡ 144, ಕೊಡಗು 135, ಕೋಲಾರ 132, ಬಳ್ಳಾರಿ 128, ಚಾಮರಾಜನಗರ 113, ಚಿತ್ರದುರ್ಗ 113, ಚಿಕ್ಕಬಳ್ಳಾಪುರ 105, ಧಾರವಾಡ 83, ಕೊಪ್ಪಳ 62, ವಿಜಯಪುರ 44, ಕಲಬುರಗಿ 28, ಗದಗ 28, ರಾಮನಗರ 24, ಹಾವೇರಿ 20, ರಾಯಚೂರು 16, ಬಾಗಲಕೋಟೆ 11, ಯಾದಗಿರಿ 5, ಬೀದರ್ ಜಿಲ್ಲೆ 3 ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 161 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು 23, ಮೈಸೂರು ಜಿಲ್ಲೆ 17, ದಕ್ಷಿಣ ಕನ್ನಡ ಜಿಲ್ಲೆ 16, ದಾವಣಗೆರೆ ಜಿಲ್ಲೆ 11, ಬಳ್ಳಾರಿ ಜಿಲ್ಲೆ 10, ಬೆಳಗಾವಿ, ಧಾರವಾಡ, ಮಂಡ್ಯ ಜಿಲ್ಲೆ 8, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ 7, ಹಾವೇರಿ, ಕೋಲಾರ ಜಿಲ್ಲೆ 6, ಉತ್ತರ ಕನ್ನಡ ಜಿಲ್ಲೆ 5, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆ 4, ಹಾಸನ, ಕೊಪ್ಪಳ, ಉಡುಪಿ ಜಿಲ್ಲೆ ತಲಾ ಮೂವರು, ಚಿಕ್ಕಬಳ್ಳಾಪುರ, ರಾಯಚೂರು, ತುಮಕೂರು, ವಿಜಯಪುರ ಜಿಲ್ಲೆ 2, ಚಾಮರಾಜನಗರ, ಗದಗ, ಕೊಡಗು, ರಾಮನಗರ ಜಿಲ್ಲೆಗಳಲ್ಲಿ ತಲಾ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Karnataka Unlock: 2ನೇ ಹಂತದ ಅನ್​ಲಾಕ್: ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಓಡಾಟ ಆರಂಭ, ಎಲ್ಲಾ ಅಂಗಡಿ ಓಪನ್, ಶರತ್ತುಗಳು ಅನ್ವಯ

ವೈದ್ಯರ ಮೇಲೆ ಹಲ್ಲೆ ಪ್ರಕರಣ: ಕೊವಿಡ್​ನಿಂದ ಗುಣವಾಗಿ ಬಂದ ನಟ ಕೋಮಲ್​ ಹೇಳಿದ್ದೇನು?

(Women and Children welfare Minister Shashikala Jolle says 3272 child marriage in Karnataka amid Covid pandemic)

ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ