ದೆಹಲಿ ರೈತರ ಹೋರಾಟ ಬೆಂಬಲಿಸಿ ಮೇ 26ರಂದು ರಾಜ್ಯದಲ್ಲಿ ಕರಾಳ ದಿನ ಆಚರಣೆ

|

Updated on: May 24, 2021 | 2:36 PM

ದೆಹಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ ಕರಾಳ ದಿನ ಆಚರಿಸಲು ನಿರ್ಧರಿಸಲಾಗಿದೆ. ಮೇ 26ರಂದು ಎಲ್ಲ ರೈತರ ಮನೆ ಮೇಲೆ ಕಪ್ಪು ಬಾವುಟ, ಎಲ್ಲ ರೈತರು ಕಪ್ಪು ಬಣ್ಣದ ಮಾಸ್ಕ್ ಧರಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರದ ಪ್ರತಿಕೃತಿ ದಹನ ಮಾಡಲಾಗುತ್ತೆ ಎಂದು ನಾಗೇಂದ್ರ ತಿಳಿಸಿದ್ದಾರೆ.

ದೆಹಲಿ ರೈತರ ಹೋರಾಟ ಬೆಂಬಲಿಸಿ ಮೇ 26ರಂದು ರಾಜ್ಯದಲ್ಲಿ ಕರಾಳ ದಿನ ಆಚರಣೆ
ಮುಷ್ಕರನಿರತ ರೈತರು
Follow us on

ಮೈಸೂರು: ರಾಜ್ಯದಲ್ಲಿ ಮತ್ತೆ ರೈತರ ಹೋರಾಟ ಕಾವು ಪಡೆದುಕೊಂಡಿದೆ. ಮೇ 26ರಂದು ರಾಜ್ಯದಲ್ಲಿ ಕರಾಳ ದಿನ ಆಚರಣೆಗೆ ಕರೆ ನೀಡಲಾಗಿದೆ. ಮೈಸೂರಿನಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ ಕರಾಳ ದಿನ ಆಚರಿಸಲು ನಿರ್ಧರಿಸಲಾಗಿದೆ. ಮೇ 26ರಂದು ಎಲ್ಲ ರೈತರ ಮನೆ ಮೇಲೆ ಕಪ್ಪು ಬಾವುಟ, ಎಲ್ಲ ರೈತರು ಕಪ್ಪು ಬಣ್ಣದ ಮಾಸ್ಕ್ ಧರಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರದ ಪ್ರತಿಕೃತಿ ದಹನ ಮಾಡಲಾಗುತ್ತೆ ಎಂದು ನಾಗೇಂದ್ರ ತಿಳಿಸಿದ್ದಾರೆ.

ಇದೊಂದು ದುಷ್ಟ ಸರ್ಕಾರ, ಮೇ ತಿಂಗಳಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷವಾಗಿದೆ. ಇಂತಹ ದುಷ್ಟ ಸರ್ಕಾರವನ್ನು ಎಂದು ಕಂಡಿಲ್ಲ. ಈ ದುಷ್ಟ ಸರ್ಕಾರ ತೊಲಗಿಸುವವರೆಗೆ ನಮ್ಮ ಹೋರಾಟ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: 60 ದಿನ ಚಳುವಳಿ ಮಾಡೋಕೆ ರೈತರಿಗೆ ಹುಚ್ಚು ಹಿಡಿದಿದೆಯಾ?; ಮೋದಿಗೆ ಅಧಿಕಾರ ನೆತ್ತಿಗೇರಿದೆ -ಸಿದ್ದರಾಮಯ್ಯ