Sun Halo ಬೆಂಗಳೂರಿನ ತಿಳಿ ಆಗಸದಲ್ಲಿ ಸೂರ್ಯನ ಸುತ್ತ ಬೆಳಕಿನ ಉಂಗುರ, ಏನಿದು ಸೌರಪ್ರಭೆ?
Sun Halo in Bengaluru: ಸೂರ್ಯನ ಸುತ್ತಲೂ ಗೋಚರಿಸಿದ ಈ ಉಂಗುರಾಕೃತಿಯೇ ಸೌರಪ್ರಭೆ (Sun Halo). ತಿಳಿ ಆಗಸದಲ್ಲಿ ಗೋಚರಿಸಿದ ಈ ವಿದ್ಯಮಾನವನ್ನು ಹಲವಾರು ಮಂದಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ
ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ಸರಿ ಸುಮಾರು 11ಗಂಟೆಯ ವೇಳೆಗೆ ಸೂರ್ಯನ ಸುತ್ತ ಸಂಪೂರ್ಣ ಕಾಮನಬಿಲ್ಲು ಗೋಚರಿಸಿದೆ. ಸೂರ್ಯನ ಸುತ್ತಲೂ ಗೋಚರಿಸಿದ ಈ ಉಂಗುರಾಕೃತಿಯೇ ಸೌರಪ್ರಭೆ (Sun Halo). ತಿಳಿ ಆಗಸದಲ್ಲಿ ಗೋಚರಿಸಿದ ಈ ವಿದ್ಯಮಾನವನ್ನು ಹಲವಾರು ಮಂದಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ.
ಏನಿದು ಸೌರಪ್ರಭೆ? ಇದು ಅನೇಕ ಜನರಿಗೆ ಅತ್ಯಂತ ವಿಶಿಷ್ಟವಾದರೂ, ಈ ವಿದ್ಯಮಾನವು ಅಪರೂಪವಲ್ಲ. ‘ಸನ್ ಹ್ಯಾಲೊ’ ಅಥವಾ ಸೌರಪ್ರಭೆ ಎಂದು ಕರೆಯಲ್ಪಡುವ ಇದು ಮೋಡಗಳೊಳಗೆ ಇರುವ ಮಂಜುಗಡ್ಡೆಯ ಹರಳುಗಳಿಗೆ ಸೂರ್ಯನ ಬೆಳಕು ಪ್ರತಿಫಲಿಸಿದಾಗ ಉಂಟಾಗುವ ವಿದ್ಯಮಾನವಾಗಿದೆ. ಸೂರ್ಯನ ಸುತ್ತಲಿನ ತ್ರಿಜ್ಯದಿಂದಾಗಿ ಇದನ್ನು ’22 ಡಿಗ್ರಿ ಹ್ಯಾಲೊ ಎಂದೂ ಕರೆಯುತ್ತಾರೆ.
22-ಡಿಗ್ರಿ ಸೌರಪ್ರಭೆ ಆಪ್ಟಿಕಲ್ ವಿದ್ಯಮಾನವಾಗಿದ್ದು ಅದು ಮಂಜುಗಡ್ಡೆಯ ಹರಳುಳೆಡಿಯಲ್ಲಿ ಸೂರ್ಯರಶ್ಮಿಯ ಪ್ರತಿಫಲನವಾಗಿದೆ. ಸೂರ್ಯನ ಪ್ರಭಾವಲಯ ಅಥವಾ ಸಾಂದರ್ಭಿಕವಾಗಿ ಚಂದ್ರನನ್ನು (ಚಂದ್ರನ ಉಂಗುರ ಅಥವಾ ಚಳಿಗಾಲದ ಪ್ರಭಾವಲಯ ಎಂದೂ ಕರೆಯುತ್ತಾರೆ), ಸಿರಸ್ ಮೋಡಗಳಲ್ಲಿ (ಚದುರಿರುವ ಕೂದಲಿನಂತಿರುವ ಚಿಕ್ಕ ಮೋಡಗಳು) ಇರುವ ಷಟ್ಬುಜಾಕೃತಿಯ ಹಿಮದ ಹರಳುಗಳ ಮೂಲಕ ಸೂರ್ಯನ ಅಥವಾ ಚಂದ್ರನ ಕಿರಣಗಳು ಹಾಯ್ದು ವಕ್ರೀಭವನಗೊಂಡಾಗ ಇದು ಸಂಭವಿಸುತ್ತದೆ. ಈ ಮೋಡಗಳು ಲಕ್ಷಾಂತರ ಸಣ್ಣ ಮಂಜುಗಡ್ಡೆಯ ಹರಳುಗಳನನು ಒಳಗೊಂಡಿರುತ್ತವೆ. ಇಲ್ಲಿ ಬೆಳಕು ಬೆಳಕನ್ನು ವಕ್ರೀಭವನಕ್ಕೊಳಗಾಗ, ವಿಭಜಿಸಿ ಮತ್ತು ಪ್ರತಿಫಲಿಸುವಾಗ ವೃತ್ತಾಕಾರದ ಮಳೆಬಿಲ್ಲು ರೂಪುಗೊಳ್ಳುತ್ತದೆ.
ಸೂರ್ಯ ಅಥವಾ ಚಂದ್ರನ ಸುತ್ತ ಒಂದು ಉಂಗುರ ರಚನೆಗೆ ಕಾರಣವಾಗುವ ಮತ್ತೊಂದು ವಿದ್ಯಮಾನವೇ -ಕರೋನಾ. ಆದಾಗ್ಯೂ, 22-ಡಿಗ್ರಿ ಪ್ರಭಾವಲಯಕ್ಕಿಂತ ಭಿನ್ನವಾಗಿದ್ದು ಇದು ಮಂಜುಗಡ್ಡೆಯ ಹರಳುಗಳಿಗೆ ಬದಲಾಗಿ ನೀರಿನ ಹನಿಗಳಿಂದ ಉತ್ಪತ್ತಿಯಾಗುತ್ತದೆ. ಇದು ತುಂಬಾ ಚಿಕ್ಕದಾಗಿದೆ ಮತ್ತು ಹೆಚ್ಚು ವರ್ಣಮಯವಾಗಿರುತ್ತದೆ.
ANOTHER SPECTACULAR EXPERIENCE! Bangalore experiences spectacular sun halo! #Trending #Bangalore #sunhalo pic.twitter.com/fFqZvZkHXN
— Deeksha Sharma (@Deeksha39839614) May 24, 2021
A rainbow-like halo has encircled the sun in a perfect circle right now. Call it magic, call it true 🙂
The phenomenon is called a halo n happens because of light interacting with ice crystals in the atmosphere. Owing to its radius around the sun ☀️ ? ⛅️ ?#Bangalore #Sun ? pic.twitter.com/QVnM44y1rS
— Samyukta Hornad (@samyuktahornad) May 24, 2021
22 degree Sun Halo! It’s beautiful? #Bangalore pic.twitter.com/EyLcdjqu6S
— Ashwin Deshpande (@trollpwnde) May 24, 2021
One of the most beautiful things in recent times#sunhalo #Bangalore pic.twitter.com/qN1mZXddqF
— Nimish Sunil (@_Nimishsunil) May 24, 2021
ಇದನ್ನೂ ಓದಿ: Cyclone Yaas: 4 ದಿನ ಮುಂಚೆಯೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ; ಇದು ಪ್ರಚಂಡ ಮಾರುತ ಯಾಸ್ ಪರಿಣಾಮ: ಏನಿದರ ಪ್ರಕೋಪ?
Published On - 2:13 pm, Mon, 24 May 21