‘ಅಲೋಪಥಿ ಬಗ್ಗೆ ನೀವಾಡಿದ ಮಾತುಗಳು ಸರಿಯಲ್ಲ..ಕೊವಿಡ್ ವಾರಿಯರ್ಸ್​ಗೆ ಅಗೌರವ ತೋರಿದ್ದೀರಿ’-ಬಾಬಾ ರಾಮ್​ದೇವ್​ಗೆ ಡಾ.ಹರ್ಷವರ್ಧನ್ ಪತ್ರ

ಅಲೋಪಥಿಕ್​ ವೈದ್ಯಕೀಯ ಪದ್ಧತಿ ಒಳ್ಳೆಯದಲ್ಲ. ಇದೊಂದು ಅವಿವೇಕತನದ ವೈದ್ಯಕೀಯ ಪದ್ಧತಿ. ಅಲೋಪಥಿಕ್​ ಔಷಧಿಗಳಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಾಬಾ ರಾಮ್​ದೇವ್​ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.

‘ಅಲೋಪಥಿ ಬಗ್ಗೆ ನೀವಾಡಿದ ಮಾತುಗಳು ಸರಿಯಲ್ಲ..ಕೊವಿಡ್ ವಾರಿಯರ್ಸ್​ಗೆ ಅಗೌರವ ತೋರಿದ್ದೀರಿ’-ಬಾಬಾ ರಾಮ್​ದೇವ್​ಗೆ ಡಾ.ಹರ್ಷವರ್ಧನ್ ಪತ್ರ
ಸಚಿವ ಡಾ. ಹರ್ಷವರ್ಧನ್‘
Follow us
Lakshmi Hegde
|

Updated on: May 23, 2021 | 8:04 PM

ಯೋಗ ಗುರು ಬಾಬಾ ರಾಮ್​ದೇವ್ ಅವರು ಅಲೋಪಥಿ ವೈದ್ಯಕೀಯ ವಿಜ್ಞಾನವನ್ನು ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದೆ. ಇದರ ಬೆನ್ನಲ್ಲೇ ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಬಾಬಾ ರಾಮ್​ದೇವ್​ಗೆ ಪತ್ರ ಬರೆದಿದ್ದಾರೆ. ಅಲೋಪಥಿ ಬಗ್ಗೆ ನಿಮ್ಮ ಹೇಳಿಕೆಯನ್ನು ವಾಪಸ್ ಪಡೆಯಿರಿ. ಇದರಿಂದಾಗಿ ದೇಶದ ಭಾವನೆಗೇ ನೋವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಅನೇಕಾನೇಕ ಆರೋಗ್ಯ ಸಿಬ್ಬಂದಿ ಕೊವಿಡ್​ 19 ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದೀಗ ನೀವು​ ನೀಡಿರುವ ಹೇಳಿಕೆಯಿಂದಾಗಿ ದೇಶದ ಕೋಟ್ಯಂತರ ಜನರ ಭಾವನೆಗೆ ಘಾಸಿಯಾಗಿದೆ. ಅಲ್ಲದೆ, ಮುಂಚೂಣಿಯಲ್ಲಿ ನಿಂತು ಕೊವಿಡ್ 19 ವಿರುದ್ಧ ಹೋರಾಡುತ್ತಿರುವ ಅಲೋಪಥಿಕ್​ ವೈದ್ಯಕೀಯ ಸಿಬ್ಬಂದಿಗೆ ಅಗೌರವ ತೋರಿಸಿದಂತಾಗಿದೆ ಎಂದು ಹರ್ಷವರ್ಧನ್​ ಬಾಬಾ ರಾಮ್​ದೇವ್​ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜನರ ಪಾಲಿಗೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ದೇವರಂತೆ ಇದ್ದಾರೆ. ಈಗಂತೂ ವೈದ್ಯರು, ಆರೋಗ್ಯ ಸಿಬ್ಬಂದಿ ಜನರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟಿದ್ದಾರೆ. ಹೀಗಿರುವಾಗ ನೀವು ಅಲೋಪಥಿ ಚಿಕಿತ್ಸೆ, ಔಷಧಿಯಿಂದ ಲಕ್ಷಾಂತರ ಜನರು ಪ್ರಾಣಕಳೆದುಕೊಂಡಿದ್ದಾರೆ. ಅದೊಂದು ಅವಿವೇಕತನದ ವೈದ್ಯಕೀಯ ಪದ್ಧತಿ ಎಂಬಂಥ ಹೇಳಿಕೆ ನೀಡಿದ್ದು ಸರಿಯಲ್ಲ. ಅದಾದ ಬಳಿಕ ನೀವು ನೀಡಿರುವ ಸ್ಪಷ್ಟನೆ, ಸಮರ್ಥನೆ ಕೂಡ ಸಾಕಾಗುತ್ತಿಲ್ಲ ಎಂದು ಹರ್ಷವರ್ಧನ್​ ತಿಳಿಸಿದ್ದಾರೆ.

ಏನಾಗಿತ್ತು? ಅಲೋಪಥಿಕ್​ ವೈದ್ಯಕೀಯ ಪದ್ಧತಿ ಒಳ್ಳೆಯದಲ್ಲ. ಇದೊಂದು ಅವಿವೇಕತನದ ವೈದ್ಯಕೀಯ ಪದ್ಧತಿ. ಅಲೋಪಥಿಕ್​ ಔಷಧಿಗಳಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಾಬಾ ರಾಮ್​ದೇವ್​ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅಲೋಪಥಿ ವೈದ್ಯಕೀಯ ಪದ್ಧತಿಗೆ ಅವಮಾನ ಮಾಡಿದ ಬಾಬಾ ರಾಮ್​ದೇವ್ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (IMA) ಕೇಂದ್ರ ಆರೋಗ್ಯ ಇಲಾಖೆಗೆ ಆಗ್ರಹಿಸಿತ್ತು. ಅದಾದ ಬಳಿಕ ಸ್ಪಷ್ಟನೆ ನೀಡಿದ್ದ ಹರಿದ್ವಾರದ ಪತಂಜಲಿ ಟ್ರಸ್ಟ್​, ಬಾಬಾ ರಾಮ್​ದೇವ್​ ಅವರಿಗೆ ಅಲೋಪಥಿಕ್​ ಬಗ್ಗೆ ಅಗೌರವ ಇಲ್ಲ. ಅವರು ವಾಟ್ಸ್​ಆ್ಯಪ್​​ನಲ್ಲಿ ಬಂದಿದ್ದ ಸಂದೇಶವೊಂದನ್ನು ಓದುತ್ತಿದ್ದರು ಎಂದು ಹೇಳಿತ್ತು.

ಇದನ್ನೂ ಓದಿ: Karnataka Covid Update: ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ; ಕರ್ನಾಟಕದಲ್ಲಿ ಇಂದು 25,979 ಜನರಿಗೆ ಸೋಂಕು

ಆಕ್ಸಿಜನ್ ಮಟ್ಟ ಅಳೆಯಲು ಆಕ್ಸಿಮೀಟರ್ ಬೇಕಿಲ್ಲ, ಮೊಬೈಲ್​ನಲ್ಲಿ ಈ ಆ್ಯಪ್ ಇದ್ದರೆ ಸಾಕು!

Health Minister Harsh Vardhan writes letter To Yoga Guru Baba Ramdev Over Allopathy Row

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು