Karnataka Covid Update: ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ; ಕರ್ನಾಟಕದಲ್ಲಿ ಇಂದು 25,979 ಜನರಿಗೆ ಸೋಂಕು

ಕರ್ನಾಟಕದಲ್ಲಿ ಇಂದು (ಮೇ 23) ಹೊಸದಾಗಿ 25,979 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ.

Karnataka Covid Update: ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ; ಕರ್ನಾಟಕದಲ್ಲಿ ಇಂದು 25,979 ಜನರಿಗೆ ಸೋಂಕು
ಕೋವಿಡ್​-19 ಟೆಸ್ಟಿಂಗ್
Follow us
TV9 Web
| Updated By: ganapathi bhat

Updated on:Aug 21, 2021 | 9:59 AM

ಬೆಂಗಳೂರು: ಕರ್ನಾಟಕದಲ್ಲಿ ಇಂದು (ಮೇ 23) ಹೊಸದಾಗಿ 25,979 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 19,26,615 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 626 ಜನ ಸಾವನ್ನಪ್ಪಿದ್ದಾರೆ. ತನ್ಮೂಲಕ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 25282 ಜನರ ಸಾವು ಸಂಭವಿಸಿದಂತಾಗಿದೆ. 4,72,986 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

2ನೇ ಅಲೆ ಬಳಿಕ ಇಂದು ಅತಿ ಹೆಚ್ಚು ಜನರ ಸಾವು ಬೆಂಗಳೂರಲ್ಲಿ ಇಂದು ಒಂದೇ ದಿನ 7,494 ಜನರಿಗೆ ಸೋಂಕು ದೃಢವಾಗಿದೆ. ನಗರದಲ್ಲಿ ಇಂದು ಕೊರೊನಾ ಸೋಂಕಿಗೆ 362 ಜನರ ಬಲಿಯಾಗಿದೆ. ರಾಜ್ಯದಲ್ಲಿಂದು ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಾವು ಸಂಭವಿಸಿದೆ. 2ನೇ ಅಲೆ ಆರಂಭದ ಬಳಿಕ ಇಂದು ಅತಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 362 ಜನರ ಬಲಿಯಾಗಿದೆ. ಈ ಮೂಲಕ, ಬೆಂಗಳೂರಿನಲ್ಲೂ ಇಂದು ಅತಿ ಹೆಚ್ಚು ಸೋಂಕಿತರ ಸಾವು ಸಂಭವಿಸಿದೆ. ರಾಜ್ಯದಲ್ಲಿ ಕೊರೊನಾ ಕೇಸ್​ ಇಳಿಕೆಯಾಗಿದ್ದರೆ, ಸಾವಿನ ಸಂಖ್ಯೆ ಏರಿಕೆಯಾಗಿದೆ.

ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 11,19,552ಕ್ಕೆ ಏರಿಕೆಯಾಗಿದೆ. 11,19,552 ಸೋಂಕಿತರ ಪೈಕಿ 8,52,493 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 362 ಜನರು ಸಾವನ್ನಪ್ಪಿದ್ದು, ಕೊರೊನಾದಿಂದ ಈವರೆಗೆ ಒಟ್ಟು 11,216 ಜನರ ಸಾವು ಸಂಭವಿಸಿದೆ. 2,55,842 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾವಾರು ಕೊರೊನಾ ಸೋಂಕಿತರ ವಿವರ ಬಾಗಲಕೋಟೆ 218, ಬಳ್ಳಾರಿ 1190, ಬೆಳಗಾವಿ 1066, ಬೆಂಗಳೂರು ಗ್ರಾಮಾಂತರ 400, ಬೆಂಗಳೂರು ನಗರ 7494, ಬೀದರ್ 49, ಚಾಮರಾಜನಗರ 407, ಚಿಕ್ಕಬಳ್ಳಾಪುರ 613, ಚಿಕ್ಕಮಗಳೂರು 577, ಚಿತ್ರದುರ್ಗ 365, ದಕ್ಷಿಣ ಕನ್ನಡ 899, ದಾವಣಗೆರೆ 363, ಧಾರವಾಡ 858, ಗದಗ 371, ಹಾಸನ 1618, ಹಾವೇರಿ 243, ಕಲಬುರಗಿ 234, ಕೊಡಗು 329, ಕೋಲಾರ 439, ಕೊಪ್ಪಳ 356, ಮಂಡ್ಯ 643, ಮೈಸೂರು 2222, ರಾಯಚೂರು 540, ರಾಮನಗರ 279, ಶಿವಮೊಗ್ಗ 643, ತುಮಕೂರು 1269, ಉಡುಪಿ 909, ಉತ್ತರ ಕನ್ನಡ 862, ವಿಜಯಪುರ 246, ಯಾದಗಿರಿ ಜಿಲ್ಲೆಯಲ್ಲಿ ಇಂದು 277 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಕೊವಿಡ್​ನಿಂದ ಮೃತಪಟ್ಟವರ ವಿವರ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 626 ಜನರ ಸಾವು ಸಂಭವಿಸಿದೆ. ಆ ಪೈಕಿ, ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ, 362 ಜನರು ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 30, ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 22, ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 18, ಉತ್ತರ ಕನ್ನಡ ಜಿಲ್ಲೆಯಲ್ಲಿ 17, ಕಲಬುರಗಿ ಜಿಲ್ಲೆಯಲ್ಲಿ 15, ಬೆಳಗಾವಿ, ಮಂಡ್ಯ ಜಿಲ್ಲೆಯಲ್ಲಿ ಇಂದು ತಲಾ 13, ಶಿವಮೊಗ್ಗ, ತುಮಕೂರು ಜಿಲ್ಲೆಯಲ್ಲಿ ತಲಾ 13, ಕೊಪ್ಪಳ ಜಿಲ್ಲೆಯಲ್ಲಿ 12, ಹಾಸನ ಜಿಲ್ಲೆಯಲ್ಲಿ 11, ಧಾರವಾಡ ಜಿಲ್ಲೆಯಲ್ಲಿ 9, ಹಾವೇರಿ ಜಿಲ್ಲೆಯಲ್ಲಿ 8, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ 7, ದಕ್ಷಿಣ ಕನ್ನಡ, ಕೋಲಾರ ಜಿಲ್ಲೆಯಲ್ಲಿ ತಲಾ 6, ಚಿತ್ರದುರ್ಗ, ವಿಜಯಪುರ ಜಿಲ್ಲೆಯಲ್ಲಿ ತಲಾ 5, ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ತಲಾ 4, ಚಾಮರಾಜನಗರ, ಉಡುಪಿ ಜಿಲ್ಲೆಯಲ್ಲಿ ತಲಾ 4, ಬೀದರ್​, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 3, ದಾವಣಗೆರೆ, ಕೊಡಗು ಜಿಲ್ಲೆಯಲ್ಲಿ ತಲಾ 3, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ತಲಾ 3 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 25,282 ಜನರ ಸಾವು ಸಂಭವಿಸಿದೆ.

ಇದನ್ನೂ ಓದಿ: Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ

Published On - 7:48 pm, Sun, 23 May 21