ಮುಂದಿನ 2 ರಿಂದ 3 ದಿನಗಳಲ್ಲಿ ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್​ ಸೋಂಕಿನ ಔಷಧ ಬರಲಿದೆ: ಸಚಿವ ಡಾ.ಸುಧಾಕರ್

|

Updated on: May 21, 2021 | 4:06 PM

Black Fungus Treatment in Karnataka: ಬ್ಲ್ಯಾಕ್ ಫಂಗಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕು ಅಲ್ಲ. ಹೀಗಾಗಿ, ಈ ಸೋಂಕಿನ ಬಗ್ಗೆ ಯಾವುದೇ ಆತಂಕ, ಅಪಪ್ರಚಾರ ಬೇಡ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮುಂದಿನ 2 ರಿಂದ 3 ದಿನಗಳಲ್ಲಿ ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್​ ಸೋಂಕಿನ ಔಷಧ ಬರಲಿದೆ: ಸಚಿವ ಡಾ.ಸುಧಾಕರ್
ಡಾ.ಕೆ.ಸುಧಾಕರ್ (ಸಂಗ್ರಹ ಚಿತ್ರ)
Follow us on

ದಾವಣಗೆರೆ: ಬ್ಲ್ಯಾಕ್ ಫಂಗಸ್ ಸೋಂಕಿಗೆ ರಾಜ್ಯದಲ್ಲಿ ಔಷಧ ಕೊರತೆ ಇದೆ. ಆದರೆ, ಮುಂದಿನ 2-ರಿಂದ3 ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿನ ಔಷಧ ಕರ್ನಾಟಕಕ್ಕೆ ಬರಲಿದೆ. ಔಷಧ ಬರುವ ತನಕ ಇಎನ್‌ಟಿ ಸರ್ಜನ್‌ಗಳಿಂದ ಚಿಕಿತ್ಸೆ ನೀಡಲಾಗುತ್ತದೆ. ಬ್ಲ್ಯಾಕ್ ಫಂಗಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕು ಅಲ್ಲ. ಹೀಗಾಗಿ, ಈ ಸೋಂಕಿನ ಬಗ್ಗೆ ಯಾವುದೇ ಆತಂಕ, ಅಪಪ್ರಚಾರ ಬೇಡ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಜತೆಗೆ, ಮೀನುಗಾರರಿಗೆ ಆರ್ಥಿಕ ನೆರವು ಘೋಷಿಸುವಂತೆ ಸಿಎಂ ಯಡಿಯೂರಪ್ಪರಿಗೆ ಭಟ್ಕಳ ಶಾಸಕ ಸುನೀಲ್ ನಾಯ್ಕ್ ಮತ್ತು ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಪತ್ರ ಬರೆದಿದ್ದಾರೆ.

ಅನಾಥ ಶವಗಳ ಅಸ್ಥಿ ಸರ್ಕಾರದಿಂದಲೇ ವಿಸರ್ಜನೆ
ಬೆಂಗಳೂರಿನಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಸದ್ಯ ಒಂದು ಸಾವಿರ ಅನಾಥ ಶವಗಳ ಅಸ್ಥಿ ಇದ್ದು, ಮೃತಪಟ್ಟವರ ಸಂಬಂಧಿಕರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಸರ್ಕಾರದಿಂದಲೇ ಗೌರವಯುತವಾದ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಹೀಗಾಗಿ ಸರ್ಕಾರವೇ ಬಡವ ಬಲ್ಲಿದ ಎಂದು ಭೇದ ಭಾವ ಮಾಡದೇ ಅಸ್ಥಿಯನ್ನು ಪಂಚಭೂತಗಳಲ್ಲಿ ಲೀನವಾಗುವಂತೆ ನೀರಿನಲ್ಲಿ ಹಿಂದೂ ಸಂಪ್ರದಾಯಬದ್ಧವಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಅಂತ್ಯಕ್ರಿಯೆಗೆ ಹೋಗುವ ಆ್ಯಂಬುಲೆನ್ಸ್‌ ಸೇವೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸುತ್ತೇವೆ. ಮೃತರ ಸಂಬಂಧಿಕರಿಂದ ಹಣ ವಸೂಲಿ ಮಾಡಬಾರದು. ಒಂದು ಚಿತಾಗಾರದಲ್ಲಿ 15ಕ್ಕಿಂತ ಹೆಚ್ಚು ಶವ ಸುಡುವಂತಿಲ್ಲ. ಶವ ಸಾಗಿಸುವ ಆ್ಯಂಬುಲೆನ್ಸ್ ಹೆಚ್ಚು ಹಣ ವಸೂಲಿ ಮಾಡಿದರೆ ಅವರಿಗೆ ನೀಡಲಾಗಿರುವ ಮೂರು ವರ್ಣ ಪರವಾನಗಿಯನ್ನು ರದ್ದುಗೊಳಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಧ್ಯಮಗಳಿಗೆ ತಿಳಿಸಿದರು.

ಶವಾಗಾರಕ್ಕೆ ಹೋಗುವವರು ಕೆಲವರು ಇದೇ ಶವಾಗಾರ ಬೇಕು ಅಂತ ಡಿಮ್ಯಾಂಡ್ ಮಾಡ್ತಿದ್ದಾರೆ. ಒಂದು ಚಿತಾಗಾರದಲ್ಲಿ 15ಕ್ಕಿಂತ ಹೆಚ್ಚು ಶವಗಳನ್ನು ಸುಡುವಂತಿಲ್ಲ. 15ಕ್ಕಿಂತ ಹೆಚ್ಚು ಶವ ಸಂಸ್ಕಾರ ನಡೆದ ಬಳಿಕ ಬೇರೆ ಶವಾಗಾರ, ಚಿತಾಗಾರಕ್ಕೆ ಕಳುಹಿಸಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಚಿಪ್ಕೊ ಚಳವಳಿಯ ರೂವಾರಿ ಸುಂದರ್​ಲಾಲ್ ಬಹುಗುಣ ಕೊವಿಡ್​ಗೆ ಬಲಿ

Rajiv Gandhi Death Anniversary 2021: ಪೈಲಟ್​ನಿಂದ ಪ್ರಧಾನಿ, ಸೋನಿಯಾರ ಜತೆ ವಿವಾಹ, ಪಕ್ಷಾಂತರ ತಡೆ ಕಾಯ್ದೆ..ಇಲ್ಲಿವೆ ರಾಜೀವ್ ಗಾಂಧಿ ವ್ಯಕ್ತಿತ್ವದ ವೈವಿಧ್ಯಮಯ ಮುಖಗಳು

(Black fungus infection will come to the Karnataka within 2 to 3 days says health minister Dr K Sudhakar)