ಮೈಸೂರು: ಮಾನವ ಹಕ್ಕುಗಳು ಮತ್ತು ಮಾಧ್ಯಮದ ಹೆಸರಲ್ಲಿ ವೈದ್ಯರಿಗೆ ಬ್ಲ್ಯಾಕ್‌ಮೇಲ್ ಒಡ್ಡಿ ಕೆ.ಆರ್.ಆಸ್ಪತ್ರೆ ವೈದ್ಯರಿಂದ ಹಣ ವಸೂಲಿ ಮಾಡಲು ಹೊರಟ ಆರೋಪಿಗಳನ್ನು ಬಂಧಿಸಲಾಗಿದೆ.
ಕೆ.ಆರ್ ಆಸ್ಪತ್ರೆಯ ವೈದ್ಯರಾದ ಡಾ.ರಾಜೇಶ್ ಎಂಬವರಿಗೆ ಮಾಧ್ಯಮದ ಹೆಸರಿನಲ್ಲಿ, ಸುವರ್ಣ ಕಾವೇರಿ ಎಕ್ಸ್‌ಪ್ರೆಸ್ ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರ್ತಿ ಆಯಿಷಾ ಬಾಯಿ ಮತ್ತು ಕ್ರೈಂ ವರದಿಗಾರ್ತಿ ಅಮ್ರೀನ್ ಹಾಗೂ ಶಹೀನಾ ನವೀದ್ಎಂದು ನಕಲಿ ಗುರುತಿನ ಚೀಟಿಯನ್ನು ಸಿದ್ಧಪಡಿಸಿಕೊಂಡು ಬೆದರಿಕೆ ಒಡ್ಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ನೀವು ರೋಗಿಗಳಿಂದ ಹಣ ಪಡೆದುಕೊಂಡಿದ್ದೀರಿ. ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷ್ಯಗಳು ನಮ್ಮ ಬಳಿ ಇವೆ ಎಂದು ಯುವತಿಯರು ಹೆದರಿಸಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಮುಚ್ಚಿ ಹಾಕಬೇಕೆಂದರೆ, 5 ಲಕ್ಷ ರೂ. ಅಡ್ವಾನ್ಸ್ ನೀಡುವಂತೆ ಡಿಮಾಂಡ್ ಒಡ್ಡಿ ವೈದ್ಯರಿಂದ ಹಣ ಪಡೆದು ತೆರಳಿದ್ದರು. ನಂತರ ಉಳಿದ ಹಣವನ್ನು ನೀಡುವುದಾಗಿ ಒತ್ತಾಯಿಸಿ ಮಂಡಿ ಮೊಹಲ್ಲಾದ ಸಂಜೀವಿನಿ ಆಸ್ಪತ್ರೆ ಎದುರು ಗಲಾಟೆ ಮಾಡಿದ್ದಾರೆ.
ಈ ಕುರಿತಂತೆ, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯುವತಿಯರನ್ನು ಬಂಧಿಸಲಾಗಿದೆ. ಸುವರ್ಣ ಕಾವೇರಿ ಎಕ್ಸ್‌ಪ್ರೆಸ್ ಎನ್ನುವ ಮಾಧ್ಯಮ ಸಂಸ್ಥೆಯೇ ಇಲ್ಲ. ಸಿಟಿಜನ್ ಲೇಬರ್ ವೆಲ್‌ಫೇರ್ ಎನ್ನುವ ಸಾಂವಿಧಾನಿಕ ಸಂಸ್ಥೆಯೂ ಇಲ್ಲ. ಮೋಸ ಮಾಡುವ ಉದ್ದೇಶದಿಂದ ನಕಲಿ ಐಡಿ ಕಾರ್ಡ್‌ಗಳ ಬಳಕೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ತಿಳಿಸಿದ್ದಾರೆ.
Published On - 10:38 am, Thu, 21 January 21