ಪರೀಕ್ಷೆಗೆ ಸಿದ್ಧತೆ: ಹಾಜರಾತಿ ಇಲ್ಲ ಅಂದ್ರೂ SSLC ಸ್ಟೂಡೆಂಟ್ಸ್ ಪರೀಕ್ಷೆ ಬರೆಯಬಹುದು..
ಪರೀಕ್ಷೆ ಬರೆಯಲು ಪ್ರತಿವರ್ಷ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿತ್ತು. ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆ ಹಾಜರಾತಿ ವಿನಾಯಿತಿ ನೀಡಲಾಗಿದೆ. ಹಾಜರಾತಿ ಕಡಿಮೆ ಇದ್ದ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಬಹುದಾಗಿದೆ.
ಬೆಂಗಳೂರು: ಪ್ರಸಕ್ತ ವರ್ಷ SSLC ಪರೀಕ್ಷೆಗೆ ಕನಿಷ್ಠ ಹಾಜರಾತಿ ಇಲ್ಲ ಎನ್ನುವ ಮೂಲಕ ಸರ್ಕಾರ SSLC ವಿದ್ಯಾರ್ಥಿಗಳಿಗೆ ಭಾರಿ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಶಾಲೆ-ಕಾಲೇಜುಗಳಿಗೆ ಹೋಗದೆ ವಿದ್ಯಾರ್ಥಿಗಳ ಬದುಕು ತಂತ್ರವಾಗಿತ್ತು. ಸದ್ಯ ಶಾಲಾ-ಕಾಲೇಜು ತೆರೆದು ಎಂದಿನಂತೆ ತರಗತಿಗಳು ಆರಂಭವಾಗಿದೆ. ಆದರೆ ಕೆಲ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಪ್ರಸಕ್ತ ಪರಿಸ್ಥಿತಿ ಗಮನಿಸಿ SSLC ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳಿಗೆ ಕೆಲ ವಿನಾಯಿತಿಗಳನ್ನು ಕೊಟ್ಟಿದೆ. SSLC ವಿದ್ಯಾರ್ಥಿಗಳಿಗೆ ಭಾರಿ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗಿದೆ. ಪರೀಕ್ಷೆ ಬರೆಯಲು ಪ್ರತಿವರ್ಷ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿತ್ತು. ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆ ಹಾಜರಾತಿ ವಿನಾಯಿತಿ ನೀಡಲಾಗಿದೆ. ಹಾಜರಾತಿ ಕಡಿಮೆ ಇದ್ದ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಬಹುದಾಗಿದೆ.
ಪ್ರೌಢಶಿಕ್ಷಣ ಮಂಡಳಿಯಿಂದ ಪರೀಕ್ಷೆಗೆ ಮಾರ್ಗಸೂಚಿ – ಈ ವರ್ಷ ಪರೀಕ್ಷೆಗೆ ಕನಿಷ್ಠ ಹಾಜರಾತಿ ಇಲ್ಲ -ಎಲ್ಲಾ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆಯಬಹುದು -ಫೆ.1ರಿಂದ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭ -ಫೆ.15ರವರೆಗೆ ವಿದ್ಯಾರ್ಥಿಗಳ ಮಾಹಿತಿ ಅಪ್‌ಲೋಡ್ -ಫೆ.17ರಿಂದ ಫೆ.22ರವರೆಗೆ ಶುಲ್ಕ ಪಾವತಿಗೆ ಅವಕಾಶ