ಮಡಿವಾಳ ವಿಧಿವಿಜ್ಞಾನ ಲ್ಯಾಬ್​ನಲ್ಲಿ ಸ್ಫೋಟ, 5 ವಿಜ್ಞಾನಿಗಳಿಗೆ ಗಾಯ

ಬೆಂಗಳೂರು: ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಡೆಟೋನೇಟರ್ ಸ್ಫೋಟಗೊಂಡಿದೆ. 9 ಜೀವಂತ ಡೆಟೋನೇಟರ್​ಗಳ ಪರಿಶೀಲನೆ ವೇಳೆ ಈ ಸ್ಫೋಟ ಸಂಭವಿಸಿದ್ದು, 9 ಜೀವಂತ ಡೆಟೋನೇಟರ್​ಗಳ ಪೈಕಿ 1 ಡೆಟೋನೇಟರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಎಫ್​ಎಸ್​ಎಲ್​ನಲ್ಲಿದ್ದ ಐವರು ವಿಜ್ಞಾನಿಗಳಿಗೆ ಗಾಯಗಳಾಗಿವೆ. ಗಾಯಗೊಂಡ ವಿಜ್ಞಾನಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಭೇಟಿ ನೀಡಿದ್ದು, ಮಡಿವಾಳ ಎಸಿಪಿ ಕರಿಬಸವನಗೌಡ ಹಾಗೂ ಪೊಲೀಸರು ದೌಡಾಯಿಸಿದ್ದಾರೆ. 25 ಗ್ರಾಂನಷ್ಟು ಸ್ಪೋಟಕ: […]

ಮಡಿವಾಳ ವಿಧಿವಿಜ್ಞಾನ ಲ್ಯಾಬ್​ನಲ್ಲಿ ಸ್ಫೋಟ, 5 ವಿಜ್ಞಾನಿಗಳಿಗೆ ಗಾಯ
Follow us
ಸಾಧು ಶ್ರೀನಾಥ್​
|

Updated on:Nov 29, 2019 | 5:47 PM

ಬೆಂಗಳೂರು: ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಡೆಟೋನೇಟರ್ ಸ್ಫೋಟಗೊಂಡಿದೆ. 9 ಜೀವಂತ ಡೆಟೋನೇಟರ್​ಗಳ ಪರಿಶೀಲನೆ ವೇಳೆ ಈ ಸ್ಫೋಟ ಸಂಭವಿಸಿದ್ದು, 9 ಜೀವಂತ ಡೆಟೋನೇಟರ್​ಗಳ ಪೈಕಿ 1 ಡೆಟೋನೇಟರ್ ಸ್ಫೋಟಗೊಂಡಿದೆ.

ಘಟನೆಯಲ್ಲಿ ಎಫ್​ಎಸ್​ಎಲ್​ನಲ್ಲಿದ್ದ ಐವರು ವಿಜ್ಞಾನಿಗಳಿಗೆ ಗಾಯಗಳಾಗಿವೆ. ಗಾಯಗೊಂಡ ವಿಜ್ಞಾನಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಭೇಟಿ ನೀಡಿದ್ದು, ಮಡಿವಾಳ ಎಸಿಪಿ ಕರಿಬಸವನಗೌಡ ಹಾಗೂ ಪೊಲೀಸರು ದೌಡಾಯಿಸಿದ್ದಾರೆ.

25 ಗ್ರಾಂನಷ್ಟು ಸ್ಪೋಟಕ: ಕೆಮಿಸ್ಟ್ರಿ ವಿಭಾಗದಲ್ಲಿ 25 ಗ್ರಾಂ ಸ್ಪೋಟಕ ಸಿಡಿದಿದೆ. ಇದರ ಪರಿಣಾಮ ದಲಾಯಿ ಸೇರಿದಂತೆ ಅಲ್ಲಿದ್ದವರಿಗೆ ಗಾಯಾವಾಗಿದೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಡಿಜಿಪಿ ಪರಶಿವಮೂರ್ತಿ ತಿಳಿಸಿದ್ದಾರೆ.

ಘಟನೆಯಲ್ಲಿ ಸೀನಿಯರ್ ಸೈಂಟಿಫಿಕ್ ಅಫೀಸರ್ ಬೆರಳಿಗೆ ಗಾಯ: ರಾಯಚೂರು ಪಶ್ಚಿಮ‌ವಲಯದಿಂದ ಸ್ಪೋಟಕ ಬಂದಿತ್ತು. ಕೆಮಿಸ್ಟ್ರಿ ಲ್ಯಾಬ್ ನಲ್ಲಿ ಅನಾಲಿಸಿಸ್ ಮಾಡವಾಗ ಘಟನೆ ನಡೆದಿದೆ. ವಾಣಿ, ನವ್ಯ, ವಿಶ್ವನಾಥ್, ಶ್ರೀನಾಥ್, ಆಂಥೋಣಿ ಪ್ರಭು ದಲಾಯತ್, ಐವರು ವಿಜ್ಞಾನಿಗಳು ಸೇರಿದಂತೆ 7 ಜನರಿಗೆ ಗಾಯಗಳಾಗಿವೆ. ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿದೆ.

ಸೀನಿಯರ್ ಸೈಂಟಿಫಿಕ್ ಅಫೀಸರ್ ಶ್ರೀನಾಥ್ ಬೆರಳಿಗೆ ಗಾಯವಾಗಿದೆ. ಸ್ಫೋಟಕ ಟಿಎಟಿಪಿ (ಟಾಯಸಿಟನ್ ಟ್ರಯಾಪೆರಾಸೈಟ್) ಇರಬಹುದೆಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

Published On - 3:43 pm, Fri, 29 November 19

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ