ನೆಗೆಟಿವ್ ಎನರ್ಜಿಯಿಂದ ಪಾರಾಗಲು ಡ್ರೆಸ್ ಕೋಡ್ ಮೊರೆ ಹೋದ್ರಾ ಆನಂದ್ ಸಿಂಗ್?

ಬಳ್ಳಾರಿ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಜ್ಯೋತಿಷಿ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ನವೆಂಬರ್ 16ರಿಂದ ಒಂದೇ ರೀತಿಯ ಕಲರ್ ಶರ್ಟ್ ಧರಿಸುತ್ತಿರುವುದು ಇದಕ್ಕೆ  ಪುಷ್ಟಿ ನೀಡುತ್ತಿದೆ. ನೆಗೆಟಿವ್ ಎನರ್ಜಿಯಿಂದ ಪಾರಾಗಲು ಡ್ರೆಸ್ ಕೋಡ್? ಪ್ರತಿದಿನ ತಿಳಿ ಕೇಸರಿ ಬಣ್ಣದ ಶರ್ಟ್ ಹಾಗೂ ಬಿಳಿ ಪ್ಯಾಂಟ್ ಧರಿಸುತ್ತಿದ್ದಾರೆ. ಆನಂದ್ ಸಿಂಗ್ ಡ್ರೆಸ್ ಕೋಡ್​ಗೆ ಕಾರ್ಯಕರ್ತರೇ ಅಚ್ಚರಿಗೊಂಡಿದ್ದಾರೆ. ಜ್ಯೋತಿಷಿ ಸಲಹೆ ಮೇರೆಗೆ ನೆಗೆಟಿವ್ ಎನರ್ಜಿಯಿಂದ ಪಾರಾಗಲು ಒಂದೇ ರೀತಿಯ ಡ್ರೆಸ್ ಕೋಡ್​ನಲ್ಲಿ ಆನಂದ್ ಸಿಂಗ್ […]

ನೆಗೆಟಿವ್ ಎನರ್ಜಿಯಿಂದ ಪಾರಾಗಲು ಡ್ರೆಸ್ ಕೋಡ್ ಮೊರೆ ಹೋದ್ರಾ ಆನಂದ್ ಸಿಂಗ್?
Follow us
ಸಾಧು ಶ್ರೀನಾಥ್​
|

Updated on:Nov 29, 2019 | 4:29 PM

ಬಳ್ಳಾರಿ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಜ್ಯೋತಿಷಿ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ನವೆಂಬರ್ 16ರಿಂದ ಒಂದೇ ರೀತಿಯ ಕಲರ್ ಶರ್ಟ್ ಧರಿಸುತ್ತಿರುವುದು ಇದಕ್ಕೆ  ಪುಷ್ಟಿ ನೀಡುತ್ತಿದೆ.

ನೆಗೆಟಿವ್ ಎನರ್ಜಿಯಿಂದ ಪಾರಾಗಲು ಡ್ರೆಸ್ ಕೋಡ್? ಪ್ರತಿದಿನ ತಿಳಿ ಕೇಸರಿ ಬಣ್ಣದ ಶರ್ಟ್ ಹಾಗೂ ಬಿಳಿ ಪ್ಯಾಂಟ್ ಧರಿಸುತ್ತಿದ್ದಾರೆ. ಆನಂದ್ ಸಿಂಗ್ ಡ್ರೆಸ್ ಕೋಡ್​ಗೆ ಕಾರ್ಯಕರ್ತರೇ ಅಚ್ಚರಿಗೊಂಡಿದ್ದಾರೆ. ಜ್ಯೋತಿಷಿ ಸಲಹೆ ಮೇರೆಗೆ ನೆಗೆಟಿವ್ ಎನರ್ಜಿಯಿಂದ ಪಾರಾಗಲು ಒಂದೇ ರೀತಿಯ ಡ್ರೆಸ್ ಕೋಡ್​ನಲ್ಲಿ ಆನಂದ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಒಂದೇ ರೀತಿಯ 20ಕ್ಕೂ ಹೆಚ್ಚು ಶರ್ಟ್​ ಖರೀದಿ: ಡ್ರೆಸ್ ಕೋಡ್ ಬಗ್ಗೆ ಹೆಚ್ಚು ಗಮನಕೊಡುವ ಆನಂದ್ ಸಿಂಗ್, ಉಪ ಚುನಾವಣೆ ವೇಳೆ ಒಂದೇ ಡ್ರೆಸ್ ಧರಿಸುತ್ತಿರುವುದು ಗಮನಾರ್ಹವಾಗಿದೆ. ಅಲ್ಲದೆ, ಆನಂದ್ ಸಿಂಗ್ ಒಂದೇ ರೀತಿಯ 20ಕ್ಕೂ ಹೆಚ್ಚು ಶರ್ಟ್​ ಖರೀದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆನಂದ್ ಸಿಂಗ್, ನನಗೆ ಬಹಳ ಡ್ರೆಸ್ ಸೆನ್ಸ್ ಇದೆ. ಈ ಕಲರ್​ ಶರ್ಟ್ ಇಷ್ಟ ಆಯ್ತು. ಅದಕ್ಕೆ ಅಂಗಡಿಯಲ್ಲಿ ಖರೀದಿಸಿ ಹಾಕಿಕೊಳ್ಳುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.

Published On - 4:12 pm, Fri, 29 November 19