Blue Flag ಬ್ಲೂ ಫ್ಲ್ಯಾಗ್‌ ಪಟ್ಟಿ ಸೇರಲಿರುವ ಉತ್ತರ ಕನ್ನಡ ಜಿಲ್ಲೆಯ ಮತ್ತಷ್ಟು ಬೀಚ್‌ಗಳು

| Updated By: ಸಾಧು ಶ್ರೀನಾಥ್​

Updated on: Feb 04, 2021 | 12:02 PM

ಹೊನ್ನಾವರ ತಾಲೂಕಿನ ಕಾಸರಕೋಡ ಬೀಚ್‌ಗೆ ಅಂತಾರಾಷ್ಟ್ರೀಯ ಮಟ್ಟದ ಬ್ಲೂ ಫ್ಲ್ಯಾಗ್‌ ಬೀಚ್‌ ಸ್ಟೇಟಸ್‌ ಸಿಕ್ಕ ಬಳಿಕ ಭಾರೀ ಪ್ರಮಾಣದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಇತರ ಬೀಚ್‌ಗಳು ಬ್ಲ್ಯೂ ಫ್ಲಾಗ್ ಮಾನ್ಯತೆ ಪಡೆಯುವ ನಿರೀಕ್ಷೆಯಲ್ಲಿವೆ.

Blue Flag ಬ್ಲೂ ಫ್ಲ್ಯಾಗ್‌ ಪಟ್ಟಿ ಸೇರಲಿರುವ ಉತ್ತರ ಕನ್ನಡ ಜಿಲ್ಲೆಯ ಮತ್ತಷ್ಟು ಬೀಚ್‌ಗಳು
ಹೊನ್ನಾವರದ ಕಾಸರಕೋಡ ಬೀಚ್
Follow us on

ಉತ್ತರ ಕನ್ನಡ: ಹೊನ್ನಾವರ ತಾಲೂಕಿನ ಕಾಸರಕೋಡ ಬೀಚ್‌ಗೆ ಅಂತಾರಾಷ್ಟ್ರೀಯ ಮಟ್ಟದ ಬ್ಲೂ ಫ್ಲ್ಯಾಗ್‌ ಬೀಚ್‌ ಸ್ಟೇಟಸ್‌ ಸಿಕ್ಕ ಬಳಿಕ ಭಾರೀ ಪ್ರಮಾಣದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದಾದ ನಂತರ ಉತ್ತರ ಕನ್ನಡ ಜಿಲ್ಲೆಯ ಮತ್ತಷ್ಟು ಬೀಚ್‌ಗಳು ಬ್ಲ್ಯೂ ಫ್ಲ್ಯಾಗ್‌ ಮಾನ್ಯತೆ ಪಡೆಯುವ ನಿರೀಕ್ಷೆಯಲ್ಲಿವೆ.

ಪ್ರವಾಸಿಗರ ತವರೂರು:
ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರ ತವರೂರು. ಇಲ್ಲಿನ ಬೀಚ್, ಬೋಟಿಂಗ್, ಸ್ಕೂಬಾ ಡೈವ್, ಕ್ಯಾನನ್‌ ರೆಸಾರ್ಟ್ ಹೀಗೆ ಎಲ್ಲವೂ ಪ್ರವಾಸಿಗರಿಗೆ ಅಚ್ಚುಮೆಚ್ಚು. ಅದರಲ್ಲೂ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್‌ಗೆ ಅಂತಾರಾಷ್ಟ್ರೀಯ ಮಟ್ಟದ ಬ್ಲೂ ಫ್ಲ್ಯಾಗ್ ಗರಿ ಸಿಕ್ಕಿದ್ದೇ ತಡ, ದೇಶ ವಿದೇಶಗಳ ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುತ್ತಿದೆ.

ಈ ನಡುವೆ ಜಿಲ್ಲೆಯ ಮತ್ತಷ್ಟು ಬೀಚ್‌ಗಳು ಅಂತಾರಾಷ್ಟ್ರೀಯ ಮಟ್ಟದ ಬ್ಲೂ ಫ್ಲ್ಯಾಗ್‌‌ ಮಾನ್ಯತೆ ಪಡೆಯುವ ಸಾಧ್ಯತೆ ಇದೆ. ಜಿಲ್ಲೆಯ ತದಡಿ, ಗೋಕರ್ಣ, ಕಾರವಾರದ ರವೀಂದ್ರನಾಥ್ ಕಡಲತೀರ, ದೇವಭಾಗ್‌ ಕಡಲು ಹೀಗೆ ಏಳೆಂಟು ಬೀಚ್‌ಗಳು ಈ ಭಾರೀ ಬ್ಲೂ ಫ್ಲ್ಯಾಗ್‌‌ ಮಾನ್ಯತೆಯ ನಿರೀಕ್ಷೆಯಲ್ಲಿವೆ.

ಇನ್ನು ಬೀಚ್‌ಗಳ ಮೂಲಕವೇ ಪ್ರಸಿದ್ಧವಾದ ಉತ್ತರಕನ್ನಡ ಜಿಲ್ಲೆಯ ಕರಾವಳಿಯನ್ನ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಬೀಚ್‌ಗಳಿಗೆ ಬ್ಲೂ ಫ್ಲ್ಯಾಗ್‌‌ ಗರಿ ಪಡೆಯಲು ಜಿಲ್ಲಾಡಳಿತ ಭಾರೀ ಪ್ರಯತ್ನ ಪಡುತ್ತಿದೆ. ಕೊವಿಡ್ ನಂತರವಂತೂ ಜಿಲ್ಲೆಯ ಹೊನ್ನಾವರ, ಕಾಸರಕೋಡ, ಗೋಕರ್ಣ, ಕಾರವಾರ, ಮುರುಡೇಶ್ವರ ಎಲ್ಲಾ ಬೀಚ್‌ಗಳಲ್ಲೂ ಪ್ರವಾಸಿಗರ ದಂಡೇ ತುಂಬಿದೆ. ಇದು ಸ್ಥಳೀಯರಿಗೂ ಖುಷಿ ತಂದಿದೆ.

ಅದರಲ್ಲೂ ಅತೀ ಸೇಫ್ ಎನ್ನಿಸುವ ಬ್ಲೂ ಫ್ಲ್ಯಾಗ್‌‌ ಬೀಚ್‌ನಲ್ಲಂತೂ ಸ್ವಚ್ಚತೆ, ಭದ್ರತೆ, ಮೂಲಭೂತ ಸೌಕರ್ಯ ಎಲ್ಲದಕ್ಕೂ ಸೂಕ್ತ ವ್ಯವಸ್ಥೆ ಮಾಡಿರುವುದರಿಂದ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಈ ಬಾರೀ ಕೊವಿಡ್ ಇದ್ದರೂ ಕೂಡ ಶೇ.50 ರಷ್ಟು ಹೆಚ್ಚು ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾಡಳಿತ ಈಗ ಮತ್ತಷ್ಟು ಬೀಚ್‌ಗಳಿಗೆ ಬ್ಲೂ ಫ್ಲ್ಯಾಗ್‌‌ ಗರಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಇನ್ನಷ್ಟು ಬೀಚ್‌ಗಳಿಗೆ ಮಾನ್ಯತೆ ಸಿಕ್ಕಿದ್ದೇ ಆದಲ್ಲಿ ಕರಾವಳಿ ಭಾಗಲ್ಲೇ ಉತ್ತರಕನ್ನಡ ಜಿಲ್ಲೆ ನಂಬರ್ ಒನ್ ಪ್ರವಾಸೋದ್ಯಮ ಕೇಂದ್ರವಾಗಲಿದೆ.

ಗೋಕರ್ಣ ಬೀಚ್​ನಲ್ಲಿ ಪುನೀತ್ ‘ಪವರ್​’ಫುಲ್​ ಬ್ಯಾಕ್ ಫ್ಲಿಪ್​ಗೆ ಫ್ಯಾನ್ಸ್ ಫುಲ್​ ಫಿದಾ!