5 ವರ್ಷ ಪ್ರೀತಿಸಿ, ವಿವಾಹವಾಗಿ ನಾಪತ್ತೆಯಾದ ಗಂಡ!
5 ವರ್ಷ ಪ್ರೀತಿಸಿ ವಿವಾಹವಾಗಿ ನಂತರ ಸಂಬಂಧಿಕರ ಮನೆಯಲ್ಲಿಯೇ ಪತ್ನಿಯನ್ನು ಬಿಟ್ಟು ನಾಪತ್ತೆಯಾದ ಪತಿ(ತೇಜಸ್ವಿ) ವಿರುದ್ಧ ಪತ್ನಿ(ಶ್ರುತಿ) ಆರೋಪಿಸಿದ್ದಾರೆ.

ಮಂಡ್ಯ: ಐದು ವರ್ಷ ಕಾಲ ಪ್ರೀತಿಸಿ, ವಿವಾಹವಾಗಿ ನಂತರ ಸಂಬಂಧಿಕರ ಮನೆಯಲ್ಲಿ ತನ್ನನ್ನು ಬಿಟ್ಟು ಪತಿರಾಯ ನಾಪತ್ತೆಯಾಗಿದ್ದಾರೆ. ತನ್ನ ಪತಿ ತೇಜಸ್ವಿ 8 ತಿಂಗಳ ಹಿಂದೆಯೇ ಮತ್ತೋರ್ವಳನ್ನು ಮದುವೆಯಾಗಿರುವುದಾಗಿ ತಿಳಿದು ಬಂದಿದೆ ಎಂದು ಪತ್ನಿ ಶ್ರುತಿ ಆರೋಪಿಸಿದ್ದಾರೆ.
ತೇಜಸ್ವಿ, ಮದ್ದೂರು ತಾಲೂಕಿನ ಹುಲಿಗೆರೆಪುರದವರು. ಅದೇ ಗ್ರಾಮದ ಶ್ರುತಿ ಎಂಬಾಕೆಯನ್ನು 5 ವರ್ಷದಿಂದ ಪ್ರೀತಿಸುತ್ತಿದ್ದ. 1 ವರ್ಷದ ಹಿಂದೆ ಮೋಸ ಮಾಡಲು ಹೊರಟಿದ್ದು, ಶ್ರುತಿ ತೇಜಸ್ವಿಯ ವಿರುದ್ಧ ಪ್ರೀತಿಸಿ ಅತ್ಯಾಚಾರ, ವಂಚನೆ ದೂರು ದಾಖಲಿಸಿದ್ದರು.
ಈ ಕುರಿತಂತೆ, ಮದ್ದೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಹೀಗಾಗಿ, ಮದುವೆಯಾಗುವಂತೆ ನಾಟಕವಾಡಿ 2020ರ ನ. 8ರಂದು ಶ್ರುತಿಯನ್ನು ವಿವಾಹವಾಗಿದ್ದರು.

ತೇಜಸ್ವಿ ಮತ್ತು ಶ್ರುತಿ ಮದುವೆಯ ವಿವಾಹ ಪತ್ರ
ವಿವಾಹದ ರಿಜಿಸ್ಟರ್ ಮಾಡಿಸಲು ಹೋದಾಗ 8 ತಿಂಗಳ ಹಿಂದೆ ಮತ್ತೊಂದು ಯುವತಿಯನ್ನು ಮದುವೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಮೊದಲ ಹೆಂಡತಿಯ ಮನೆಯಲ್ಲಿ ತೇಜಸ್ವಿ ಇರುವುದು ತಿಳಿದು ಬಂದಿದ್ದು, ಶ್ರುತಿ ಹೋಗುವಷ್ಟರಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರೆದುರು ಶ್ರುತಿ ಕಣ್ಣಿರು ತೋಡಿಕೊಂಡಿದ್ದಾರೆ. ನ್ಯಾಯ ಕೊಡಿಸುವಂತೆ ಪೊಲೀಸರೆದುರು ಮನವಿ ಮಾಡಿಕೊಂಡಿದ್ದಾರೆ.
ಪ್ರೀತಿಸಿ ಮದುವೆಯಾದ ಪತ್ನಿಗೆ ವರದಕ್ಷಿಣೆ ಕಿರುಕುಳ.. 3ನೆ ಮಹಡಿಯಿಂದ ನೂಕಿ ಕೊಲೆಗೈದೇಬಿಟ್ಟ ಪಾಪಿ ಪತಿ