ಶಾಲೆಗೆ ಬರುವ ವಿದ್ಯಾರ್ಥಿಗಳು ಹಳೆಯ ಪಾಸ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು

| Updated By: ಸಾಧು ಶ್ರೀನಾಥ್​

Updated on: Jan 01, 2021 | 1:16 PM

ಶಾಲೆಗೆ ಬರುವ ವಿದ್ಯಾರ್ಥಿಗಳು ಹಳೆಯ ಪಾಸ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿಬಹುದುದಾಗಿದೆ. ಈ ಬಗ್ಗೆ ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಾಲೆಗೆ ಬರುವ ವಿದ್ಯಾರ್ಥಿಗಳು ಹಳೆಯ ಪಾಸ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು
ಸಚಿವ ಎಸ್. ಸುರೇಶ್ ಕುಮಾರ್
Follow us on

ಬೆಂಗಳೂರು: ಹೊಸ ವರ್ಷದ ಮೊದಲ ದಿನವಾದ ಇಂದಿನಿಂದ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಆರಂಭವಾಗಿವೆ. ಈ ನಿಟ್ಟಿನಲ್ಲಿ ಶಾಲೆಗೆ ಬರುವ ವಿದ್ಯಾರ್ಥಿಗಳು ಹಳೆಯ ಪಾಸ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದುದಾಗಿದೆ. ಈ ಬಗ್ಗೆ ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮೂಲಕವೇ ಸೇವೆ ನೀಡಲು ಮುಂದುವರೆಸಲಾಗುತ್ತೆ. ಈ ಬಗ್ಗೆ BMTC ಮತ್ತು KSRTCಗೆ ಸೂಚನೆ ನೀಡಲಾಗಿದೆ. ಇಂದು ಶೇಕಡಾ 40% ರಷ್ಟು ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ.

ನೆನ್ನೆ ಹೊಸ ವರ್ಷಾಚರಣೆ ಮಾಡಿದ್ದರಿಂದ ಕಡಿಮೆ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ಬಹುತೇಕ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ರು. ಇನ್ನು ಶಾಲೆಗಳಿಗೆ ಜೀವ ಕಳೆ ಬಂದಿದೆ.

ಇವತ್ತು ಶುಕ್ರವಾರ. ಸೋಮವಾರದಿಂದ ಶಾಲೆಗೆ ಹೋಗೋಣ ಅಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರದೇ ಇರಬಹುದು ಎಂದು ಅವರು ಚಂದಾಪುರದಲ್ಲಿ ತಿಳಿಸಿದ್ರು.

ಮಾರ್ಚ್ ತಿಂಗಳಲ್ಲಿ SSLC ಮತ್ತು PUC ಪರೀಕ್ಷೆ ಮಾಡಲ್ಲ: ಸಚಿವ ಸುರೇಶ್ ಕುಮಾರ್