ಬೋರ್ಡ್​ ಪರೀಕ್ಷೆಗಳು ಜನವರಿ- ಫೆಬ್ರವರಿ ತಿಂಗಳಲ್ಲಿ ನಡೆಯುವುದಿಲ್ಲ: ಕೇಂದ್ರ ಸಚಿವ ರಮೇಶ್​ ಪೋಕ್ರಿಯಾಲ್

|

Updated on: Dec 22, 2020 | 7:36 PM

JEE 2020 ಪರೀಕ್ಷೆಯನ್ನು ಆನ್​ಲೈನ್​ನಲ್ಲೇ ನಡೆಸಲಾಗಿತ್ತು. ಹೀಗಾಗಿ, ಎಲ್ಲಾ ಪರೀಕ್ಷೆಗಳನ್ನು ಆನ್​ಲೈನ್​ನಲ್ಲಿ ಮಾಡಿ ಎನ್ನುವ ಆಗ್ರಹ ಕೇಳಿ ಬಂದಿತ್ತು. ಇದಕ್ಕೂ ರಮೇಶ್​ ಪೋಕ್ರಿಯಾಲ್ ಸ್ಪಷ್ಟನೆ ನೀಡಿದ್ದಾರೆ.

ಬೋರ್ಡ್​ ಪರೀಕ್ಷೆಗಳು ಜನವರಿ- ಫೆಬ್ರವರಿ ತಿಂಗಳಲ್ಲಿ ನಡೆಯುವುದಿಲ್ಲ: ಕೇಂದ್ರ ಸಚಿವ ರಮೇಶ್​ ಪೋಕ್ರಿಯಾಲ್
ಸಚಿವ ರಮೇಶ್​ ಪೋಖ್ರಿಯಾಲ್
Follow us on

ನವದೆಹಲಿ: ಯಾವುದೇ ಬೋರ್ಡ್​ ಪರೀಕ್ಷೆಗಳು ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ನಡೆಯುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಕ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಕರ ಜೊತೆ ಆನ್​ಲೈನ್ ಸಂವಾದ ನಡೆಸಿದ ರಮೇಶ್​ ಪೋಕ್ರಿಯಾಲ್ ಈ ಸ್ಪಷ್ಟನೆ ನೀಡಿದ್ದಾರೆ. 10 ಹಾಗೂ 12ನೇ ತರಗತಿ ಸಿಬಿಎಸ್​ಇ ಬೋರ್ಡ್​ ಪರೀಕ್ಷೆ ಯಾವುದೇ ಕಾರಣಕ್ಕೂ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ನಡೆಯುವುದಿಲ್ಲ. ಪರೀಕ್ಷೆ ಯಾವಾಗ ನಡೆಸಬೇಕು ಎನ್ನುವ ಬಗ್ಗೆ ನಂತರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರಮೇಶ್​ ಹೇಳಿದ್ದಾರೆ.

JEE 2020 ಪರೀಕ್ಷೆಯನ್ನು ಆನ್​ಲೈನ್​ನಲ್ಲೇ ನಡೆಸಲಾಗಿತ್ತು. ಹೀಗಾಗಿ, ಎಲ್ಲಾ ಪರೀಕ್ಷೆಗಳನ್ನು ಆನ್​ಲೈನ್​ನಲ್ಲಿ ಮಾಡಿ ಎನ್ನುವ ಆಗ್ರಹ ಕೇಳಿ ಬಂದಿತ್ತು. ಇದಕ್ಕೂ ಉತ್ತರಿಸಿರುವ ಅವರು, ಯಾವುದೇ ಕಾರಣಕ್ಕೂ 10 ಹಾಗೂ 12ನೇ ತರಗತಿ ಪರೀಕ್ಷೆಗಳು ಆನ್​ಲೈನ್​ನಲ್ಲಿ ನಡೆಯುವುದಿಲ್ಲ. ಎಲ್ಲ ಬೋರ್ಡ್​ ಪರೀಕ್ಷೆಗಳು ಲಿಖಿತ ರೂಪದಲ್ಲೇ ನಡೆಯಲಿದೆ ಎಂದರು.

ಈ ಮೊದಲು ವಿದ್ಯಾರ್ಥಿಗಳ ಜೊತೆ ಆನ್​ಲೈನ್ ಸಂವಾದ ನಡೆಸಿದ್ದ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಕ್ರಿಯಾಲ್, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. 2021ರ ನೀಟ್​ ಪರೀಕ್ಷೆ ರದ್ದಾಗಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಸರ್ಕಾರ ಆ ರೀತಿ ನಿರ್ಧಾರ ಕೈಗೊಳ್ಳುತ್ತಿಲ್ಲ. ಮುಂದಿನ ವರ್ಷ ನೀಟ್​ ಪರೀಕ್ಷೆ ನಡೆಯುತ್ತದೆ. ಇದನ್ನು ರದ್ದು ಮಾಡಿದರೆ ವಿದ್ಯಾರ್ಥಿ ಸಮುದಾಯ ಹಾಗೂ ದೇಶಕ್ಕೆ ಭಾರೀ ನಷ್ಟ ಉಂಟಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

 

NEET 2021 ಪರೀಕ್ಷೆ ರದ್ದಾಗುವುದಿಲ್ಲ; ಕೇಂದ್ರ ಸರ್ಕಾರದ ಸ್ಪಷ್ಟನೆ