ಕೊರೊನಾಗೆ ಆನಂದಯ್ಯ ಔಷಧಿ: ಕರ್ನಾಟಕದಲ್ಲಿಯೂ ವಿತರಣೆಗೆ ಅನುಮತಿ ನೀಡಲು ಮನವಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 29, 2021 | 4:13 PM

ಈಗಾಗಲೇ 2500 ಕುಟುಂಬಗಳ 15,000 ಜನರಿಗೆ ಔಷಧಿ ವಿತರಿಸಲಾಗಿದೆ. ಸರ್ಕಾರವು ಒಂದು ವೇಳೆ ಅನುಮತಿ ನೀಡಿದರೆ ನಾವು ಕರ್ನಾಟಕ ರಾಜ್ಯಾದ್ಯಂತ ಉಚಿತವಾಗಿ ಔಷಧಿ ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಕೊರೊನಾಗೆ ಆನಂದಯ್ಯ ಔಷಧಿ: ಕರ್ನಾಟಕದಲ್ಲಿಯೂ ವಿತರಣೆಗೆ ಅನುಮತಿ ನೀಡಲು ಮನವಿ
ಆನಂದಯ್ಯ ಔಷಧಿ ಪಡೆಯಲು ಸೇರಿರುವ ಜನ (ಸಂಗ್ರಹ ಚಿತ್ರ)
Follow us on

ಹೈದರಾಬಾದ್: ಕೊರೊನಾ ವಿರುದ್ಧ ಪರಿಣಾಮಕಾರಿ ಔಷಧಿ ಎಂದೇ ಆಂಧ್ರ ಪ್ರದೇಶದಲ್ಲಿ ಜನಜನಿತವಾಗಿರುವ ಆನಂದಯ್ಯ ಔಷಧಿಯನ್ನು ಕರ್ನಾಟಕದಲ್ಲಿ ಉಚಿತವಾಗಿ ವಿತರಿಸಲು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಹಂಪಿ ಸ್ವರ್ಣ ಪೀಠದ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ನಮ್ಮ ಪತ್ರಕ್ಕೆ ಮುಖ್ಯಮಂತ್ರಿ ಕಚೇರಿಯು ಈವರೆಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ 2500 ಕುಟುಂಬಗಳ 15,000 ಜನರಿಗೆ ಔಷಧಿ ವಿತರಿಸಲಾಗಿದೆ. ಸರ್ಕಾರವು ಒಂದು ವೇಳೆ ಅನುಮತಿ ನೀಡಿದರೆ ನಾವು ಕರ್ನಾಟಕ ರಾಜ್ಯಾದ್ಯಂತ ಉಚಿತವಾಗಿ ಔಷಧಿ ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಜನಪ್ರಿಯವಾಗಿರುವ ಔಷಧಿಯನ್ನು ಕರ್ನಾಟಕದಲ್ಲಿಯೂ ವಿತರಿಸಲು ವಿಜಯನಗರ ಜಿಲ್ಲೆ ಹಂಪಿ ಸ್ವರ್ಣ ಪೀಠದ ಗೋವಿಂದಾನಂದ ಸ್ವಾಮೀಜಿ ಮುಂದಾಗಿದ್ದಾರೆ. ಶ್ವಾಸಕೋಶಗಳನ್ನು ಶುದ್ಧಪಡಿಸುತ್ತದೆ ಎಂದು ನಂಬಲಾಗಿರುವ ಔಷಧಿಯ ಸಣ್ಣ ಗುಳಿಗೆಯನ್ನು ಸೇವಿಸುವುದರಿಂದ ದೇಹವು ಶುದ್ಧವಾಗುತ್ತದೆ. ವಿಷದ ಅಂಶಗಳು ಹೊರಹೋಗುತ್ತವೆ. ಪಿತ್ತಜನಕಾಂಗದ ಬಲವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ. ಬೋರಿಗೆ ಆನಂದಯ್ಯ ರೂಪಿಸಿರುವ ಈ ಆಯುರ್ವೇದ ಔಷಧಕ್ಕೆ ‘ಬೋರಿಗೆ ಆನಂದಯ್ಯ ಆಯುರ್ವೇದ ಸೂತ್ರ’ ಸೂತ್ರ ಎಂದಷ್ಟೇ ಕರೆಯಲಾಗುತ್ತದೆ. ಔಷಧಿಯನ್ನು ಹಂಪಿಯಲ್ಲಿ ಈವರೆಗೆ ಸುಮಾರು 6000 ಮಂದಿಗೆ ನೀಡಲಾಗಿದೆ.

‘ಬೋರಿಗೆ ಆನಂದಯ್ಯ ಆಯುರ್ವೇದ ಸೂತ್ರವು ಆಂಧ್ರ ಪ್ರದೇಶದಲ್ಲಿ ಜನಪ್ರಿಯವಾಗಿದೆ. ಆಂದ್ರ ಸರ್ಕಾರ ಮತ್ತು ಆಂಧ್ರ ಹೈಕೋರ್ಟ್​ ಔಷಧ ವಿತರಣೆಗೆ ಅನುಮತಿ ನೀಡಿದೆ. ಈಚೆಗಷ್ಟೇ ಈ ಔಷಧಿಯ ವಿತರಣೆಗೆ ಆಯುಶ್ ಇಲಾಖೆಯು ಅನುಮತಿ ನೀಡಿತ್ತು. ಈ ಔಷಧಿಯು ಜನರಿಗೆ ಹಲವು ರೀತಿಯಲ್ಲಿ ನೆರವಾಗಿದೆ’ ಎಂದು ಸ್ವಾಮೀಜಿ ಈ ಹಿಂದೆ ಹೇಳಿದ್ದರು.

‘ನನಗೆ ಈ ಔಷಧಿಯನ್ನು ಉಚಿತವಾಗಿ ನೀಡಿದ್ದಾರೆ. ಹೀಗಾಗಿ ನಾನೂ ಉಚಿತವಾಗಿಯೇ ಕೊಡುತ್ತಿದ್ದೇನೆ. ಹಲವು ರೋಗಿಗಳು ಇದರಿಂದ ಗುಣಕಂಡಿದ್ದಾರೆ. ಯಾವುದೇ ಅಡ್ಡಪರಿಣಾಮಗಳು ಕಂಡು ಬಂದಿಲ್ಲ’ ಎಂದು ಅವರು ತಿಳಿಸಿದರು.

(Borige Anandayya Ayurvedic Formula Medicine Destribution in Karnataka)

ಇದನ್ನೂ ಓದಿ: ಕೊಪ್ಪಳದ ಆನೆಗುಂದಿಯಲ್ಲೂ ಆನಂದಯ್ಯನ ಕೊರೊನಾ ಔಷಧ ವಿತರಣೆ

ಇದನ್ನೂ ಓದಿ: ಆನಂದಯ್ಯ ನಾಟಿ ಔಷಧ ತಯಾರಿಕೆ ಇಂದಿನಿಂದ‌ ಮತ್ತೆ ಆರಂಭ; ಆನ್​ಲೈನ್​ ಮೂಲಕವೂ ಔಷಧ ವಿತರಣೆ