AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ಮನೆಯ ಶೌಚ ಗುಂಡಿಯಲ್ಲಿ ವ್ಯಕ್ತಿಯ ಶವ ಪತ್ತೆ

42 ವರ್ಷದ ರಾಜಶೇಖರ ಮೂರ್ತಿ ಕಳೆದ ಗುರುವಾರ ನಾಪತ್ತೆಯಾಗಿದ್ದರು. ಈ ಬಗ್ಗೆ ರಾಜಶೇಖರ ತಂದೆ ದೂರು ನೀಡಿದ್ದರು. ಸೋಮವಾರ ಸಂಜೆಯ ವೇಳೆಗೆ ಮನೆಯ ಶೌಚಾಲಯದ ಕಡೆಯಿಂದ ದುರ್ವಾಸನೆ ಬಂದಿದೆ. ಪೊಲೀಸರು ಪರಿಶೀಲನೆ ಮಾಡಿದ ವೇಳೆ ರಾಜಶೇಖರ ಮೂರ್ತಿಯ ಶವ ಪತ್ತೆಯಾಗಿದೆ.

ಚಾಮರಾಜನಗರ: ಮನೆಯ ಶೌಚ ಗುಂಡಿಯಲ್ಲಿ ವ್ಯಕ್ತಿಯ ಶವ ಪತ್ತೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 29, 2021 | 4:15 PM

Share

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದಲ್ಲಿ ಮನೆಯ ಶೌಚ ಗುಂಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ರಾಜಶೇಖರ ಮೂರ್ತಿ ಎಂಬುವವರ ಶವ ಶೌಚ ಗುಂಡಿಯಲ್ಲಿ ಪತ್ತೆಯಾಗಿದೆ. ಕಳೆದ ಗುರುವಾರ ರಾಜಶೇಖರ ಮೂರ್ತಿ ನಾಪತ್ತೆಯಾಗಿದ್ದರು. ಮೃತನ ತಂದೆ ಮಹದೇವಸ್ವಾಮಿ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಮನೆಯ ಶೌಚ ಗುಂಡಿಯಲ್ಲೇ ಶವ ಪತ್ತೆಯಾಗಿದೆ.

42 ವರ್ಷದ ರಾಜಶೇಖರ ಮೂರ್ತಿ ಕಳೆದ ಗುರುವಾರ ನಾಪತ್ತೆಯಾಗಿದ್ದರು. ಈ ಬಗ್ಗೆ ರಾಜಶೇಖರ ತಂದೆ ದೂರು ನೀಡಿದ್ದರು. ಸೋಮವಾರ ಸಂಜೆಯ ವೇಳೆಗೆ ಮನೆಯ ಶೌಚಾಲಯದ ಕಡೆಯಿಂದ ದುರ್ವಾಸನೆ ಬಂದಿದೆ. ಪೊಲೀಸರು ಪರಿಶೀಲನೆ ಮಾಡಿದ ವೇಳೆ ರಾಜಶೇಖರ ಮೂರ್ತಿಯ ಶವ ಪತ್ತೆಯಾಗಿದೆ. ರಾಜಶೇಖರ ಮೂರ್ತಿಯ ಸಾವಿನ ಹಿಂದೆ ಆತನ ಪತ್ನಿಯ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮೃತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜಶೇಖರ ಮೂರ್ತಿ

ದಂಪತಿ ನಡುವೆ ಜಗಳ, ಪತಿ ಕೊಲೆಯಲ್ಲಿ ಅಂತ್ಯ ಮೈಸೂರು: ಗಂಡ ಹೆಂಡತಿ ನಡುವಿನ ಜಗಳ ಪತಿ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಕೂರ್ಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಕೆಂಪ ಶೆಟ್ಟಿ(40) ಕೊಲೆಯಾದ ವ್ಯಕ್ತಿ. ಪತ್ನಿಯ ತಮ್ಮ ಕೆಂಡಗಣ್ಣ ಶೆಟ್ಟಿ ಕೊಲೆ ಮಾಡಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 10 ವರ್ಷದ ಹಿಂದೆ ಕೆಂಪ ಶೆಟ್ಟಿ ಶಶಿರೇಖಾಳನ್ನು ವಿವಾಹವಾಗಿದ್ದ.

ಪ್ರತಿದಿನ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಸಾಕಷ್ಟು ಬಾರಿ ರಾಜಿ ಪಂಚಾಯತಿ ನಡೆದಿತ್ತು. ಆದರೂ ಗಂಡ ಹೆಂಡತಿ ಜಗಳ ಮುಂದುವರಿದಿತ್ತು. ಇದರಿಂದ ಕೆಂಡಗಣ್ಣ ಶೆಟ್ಟಿ ಚಾಕುವಿನಿಂದ ಇರಿದು ಭಾವನನ್ನು ಕೊಲೆ ಮಾಡಿದ್ದಾನೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಪೊಲೀಸ್​​ ತಪಾಸಣೆ ವೇಳೆ ಗೂಡ್ಸ್ ಗಾಡಿ ಡಿಕ್ಕಿ; ತಾಯಿಯ ಎದುರೇ ಯುವಕನ ಸಾವು: ಪೊಲೀಸ್ ಚೆಕ್ ಪಾಯಿಂಟ್ ಧ್ವಂಸ

ಕಣ್ಮುಚ್ಚಿ ಬಿಡುವಷ್ಟರಲ್ಲಿ ಭೀಕರ ಅಪಘಾತ; ಪ್ರಯಾಣಿಕ ಸ್ಥಳದಲ್ಲೇ ಸಾವು

(Chamarajanagar man dead body found in toilet)

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ