ಮಂಗಳೂರು ಬಾಲಕನ ಕೊಲೆಗೆ ಕಾರಣವಾಯ್ತು ಪಬ್ ಜೀ ಗೇಮ್

| Updated By: ganapathi bhat

Updated on: Apr 04, 2021 | 4:49 PM

ಕೆಲ ತಿಂಗಳುಗಳಿಂದ ಆಕೀಫ್ ಮತ್ತು ಆರೋಪಿ ಒಟ್ಟಿಗೆ ಪಬ್ ಜೀ ಆಡುತ್ತಿದ್ದರು. ಆಟದಲ್ಲಿ ಪ್ರತಿಬಾರಿ ಆಕೀಫ್ ಗೆಲುವನ್ನು ಸಾಧಿಸುತ್ತಿದ್ದ. ಆಟದಲ್ಲಿ ಮೋಸವಾಗುತ್ತಿದೆ ಅಂತಾ ಇಬ್ಬರ ನಡುವೆ ಗಲಾಟೆಯಾಗುತಿತ್ತು. ನಿನ್ನೆ ರಾತ್ರಿ ಇಬ್ಬರು ಮೈದಾನದಲ್ಲಿ ಜೊತೆಯಾಗಿ ಆಡಿದ್ದರು. ಈ ವೇಳೆ ಆಟದಲ್ಲಿ ಮೊದಲ ಬಾರಿ ಆಕೀಫ್ ಸೋಲನ್ನು ಅನುಭವಿಸಿತ್ತಾನೆ.

ಮಂಗಳೂರು ಬಾಲಕನ ಕೊಲೆಗೆ ಕಾರಣವಾಯ್ತು ಪಬ್ ಜೀ ಗೇಮ್
ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು
Follow us on

ಮಂಗಳೂರು: ಮನರಂಜನೆಗಾಗಿ ಆಡುವ ಆಟದಿಂದ ಜೀವವೇ ಹೋಗುತ್ತದೆ ಎಂದರೆ ಅದು ದುಃಖದ ಸಂಗತಿಯೇ ಹೌದು. ಆಧುನಿಕತೆ ಬೆಳೆದಂತೆ ಒಂದಲ್ಲ ಒಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಎಷ್ಟು ಅನುಕೂಲ ಇರುತ್ತದೆಯೋ ಅದಕ್ಕೆ ಸಮನಾಗಿ ಅಪಾಯವೂ ಇರುತ್ತದೆ. ಇದಕ್ಕೆ ಉದಾಹಾರಣೆ ಎಂಬಂತೆ ಮಂಗಳೂರಿನಲ್ಲಿ ಭೀಕರ ಹತ್ಯೆಯೊಂದು ನಡೆದಿದೆ.

ಪಬ್ ಜೀ ಆಟಕ್ಕಾಗಿ 12 ವರ್ಷದ ಬಾಲಕನ ಭೀಕರ ಹತ್ಯೆಯಾಗಿರುವ ಘಟನೆ ಮಂಗಳೂರು ನಗರ ಹೊರವಲಯದ ಉಳ್ಳಾಲದ ಕೆ.ಸಿ.ರೋಡ್ ಬಳಿ ನಡೆದಿದೆ. 12 ವರ್ಷದ ಆಕೀಫ್ ಭೀಕರವಾಗಿ ಕೊಲೆಯಾಗಿರುವ ಬಾಲಕ.

ಕೆಲ ತಿಂಗಳುಗಳಿಂದ ಆಕೀಫ್ ಮತ್ತು ಅಪ್ರಾಪ್ತ ಆರೋಪಿ ಒಟ್ಟಿಗೆ ಪಬ್ ಜೀ ಆಡುತ್ತಿದ್ದರು. ಆಟದಲ್ಲಿ ಪ್ರತಿಬಾರಿ ಆಕೀಫ್ ಗೆಲುವನ್ನು ಸಾಧಿಸುತ್ತಿದ್ದ. ಆಟದಲ್ಲಿ ಮೋಸವಾಗುತ್ತಿದೆ ಅಂತಾ ಇಬ್ಬರ ನಡುವೆ ಗಲಾಟೆಯಾಗುತಿತ್ತು. ನಿನ್ನೆ (ಏಪ್ರಿಲ್ 3) ರಾತ್ರಿ ಇಬ್ಬರು ಮೈದಾನದಲ್ಲಿ ಜೊತೆಯಾಗಿ ಆಡಿದ್ದರು. ಈ ವೇಳೆ ಆಟದಲ್ಲಿ ಮೊದಲ ಬಾರಿ ಆಕೀಫ್ ಸೋಲನ್ನು ಅನುಭವಿಸಿತ್ತಾನೆ. ಈ ವೇಳೆ ಆಕೀಫ್ ಮತ್ತು ಆರೋಪಿ ನಡುವೆ ಗಲಾಟೆ ನಡೆಯಿತು. ಇಬ್ಬರೂ ಕಲ್ಲಿನಲ್ಲಿ ಹೊಡೆದಾಡಿಕೊಂಡಿದ್ದರು. ಸಿಟ್ಟಿನಿಂದ ಆರೋಪಿ ಕಲ್ಲನ್ನು ಎತ್ತಿ ಆಕೀಫ್ ಮೇಲೆ ಹಾಕಿದ್ದಾನೆ. ಇದರ ಪರಿಣಾಮ ಆಕೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಆಕೀಫ್ ಸಾವನ್ನಪ್ಪುತ್ತಿದ್ದಂತೆ ಮೈದಾನದ ಬದಿಯಲ್ಲಿ ಶವವನ್ನು ಹಾಕಿ ಅಪ್ರಾಪ್ತ ಆರೋಪಿ ಪರಾರಿಯಾಗಿದ್ದಾನೆ. ಬಾಲಕ ಆಕೀಫ್ ಬೆಳಗಿನ ಜಾವ ಶವವಾಗಿ ಪತ್ತೆಯಾಗಿದ್ದು, ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲು
ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಬಳಿ ಕಟ್ಟಿಕೆರೆಯಲ್ಲಿ ಸಂಭವಿಸಿದೆ. ಅಖ್ತರ್ ರಜಾ ಯಳವಟ್ಟಿ(16), ಸಾಹಿಲ್ ಡೊಂಗ್ರಿ(17) ಮತ್ತು ಅಹ್ಮದ್ ರಜಾ ಅಂಚಿ(16) ಮೃತಪಟ್ಟ ಬಾಲಕರು ಎಂದು ತಿಳಿದುಬಂದಿದೆ. ಮೃತ ದೇಹವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಈ ಪ್ರಕರಣ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(boy was murdered by a young man for playing game of Pubg Game in Mangaluru)

ಇದನ್ನೂ ಓದಿ

ದ್ವೇಷದ ಆಟ, ಉಡಾಫೆ ಮಾತಿನಿಂದ ಮೆರೆಯುತ್ತಿದ್ದ ಮಂಜು​ಗೆ ಕ್ಲಾಸ್​ ತೆಗೆದುಕೊಂಡ ಸುದೀಪ್​!

ಸಾಕ್ಷ್ಯ ನಾಶ ಮಾಡಿ, ನನ್ನ ಚಾರಿತ್ರ್ಯವಧೆ ನಡೆಸಲಾಗುತ್ತಿದೆ, ಆರೋಪಿ ರಕ್ಷಣೆಗೆ ಸರ್ಕಾರ ಮುಂದಾಗಿದೆ: ಸಂತ್ರಸ್ತ ಯುವತಿ ಗಂಭೀರ ಆರೋಪ