Kannada News Live | ರೈತರ ಗಲಾಟೆ ಪ್ರಕರಣ: 84 ಜನ ಆರೋಪಿಗಳ ಬಂಧನ
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
LIVE NEWS & UPDATES
-
ರಾಜ್ಯದಲ್ಲಿಂದು ಹೊಸದಾಗಿ 464 ಜನರಿಗೆ ಕೊರೊನಾ ದೃಢ
07:37 pm ರಾಜ್ಯದಲ್ಲಿಂದು ಹೊಸದಾಗಿ 464 ಜನರಿಗೆ ಕೊರೊನಾ ದೃಢವಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,38,865ಕ್ಕೇರಿಕೆ ಆಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಇಬ್ಬರ ಸಾವನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,213 ಜನರ ಸಾವನಪ್ಪಿದ್ದಾರೆ. ಸೋಂಕಿತರ ಪೈಕಿ 9,20,657 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
-
ಜ.26ರ ಹಿಂಸಾಚಾರದಲ್ಲಿ ಗಾಯಗೊಂಡ ಪೊಲೀಸರಿಂದ ಪ್ರತಿಭಟನೆ
07:14 pm ಜನವರಿ 26ರಂದು ರೈತ ಪ್ರತಿಭಟನೆಯ ಹೆಸರಲ್ಲಿ ನಡೆದ ಹಿಂಸಾಚಾರದಲ್ಲಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಹಲವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಹಾಗೆ, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮರಳಿದ ಪೊಲೀಸ್ ಸಿಬ್ಬಂದಿ ತಮ್ಮ ಮೇಲೆ ನಡೆದ ದಾಳಿಯನ್ನು ಖಂಡಿಸಿ ಇಂದು ಶಹೀದಿ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು.
-
ದೆಹಲಿ ರೈತರ ದೊಂಬಿ ಘಟನೆ ಸಂಬಂಧ 84 ಜನ ಆರೋಪಿಗಳ ಬಂಧನ
06:54 pm ದೆಹಲಿಯಲ್ಲಿ 26ರ ರೈತರ ದೊಂಬಿ ಘಟನೆ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಒಟ್ಟು 38ಪ್ರಕರಣ ದಾಖಲಾಗಿದೆ. 84 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಡಿಎ ನಿವೇಶನ ಚದರ ಮೀಟರ್ಗೆ ₹1.67 ಲಕ್ಷಕ್ಕೆ ಮಾರಾಟ
06:18 pm ಬಿಡಿಎ ನಿವೇಶನ ಚದರ ಮೀಟರ್ಗೆ ₹1.67 ಲಕ್ಷಕ್ಕೆ ಮಾರಾಟವಾಗಿದೆ. ಸರ್ ಎಂ.ವಿ.ಲೇಔಟ್ 3ನೇ ಹಂತದಲ್ಲಿ ನಿವೇಶನ ಮಾರಾಟವಾಗಿದೆ. ಪ್ರತಿ ಚದರ ಮೀಟರ್ಗೆ ಬಿಡಿಎ ₹39,000 ನಿಗದಿ ಮಾಡಿತ್ತು. ಆದರೆ ಪ್ರತಿ ಚದರ ಮೀಟರ್ಗೆ 1.67 ಲಕ್ಷ ರೂ.ಗೆ ಮಾರಾಟವಾಗಿದೆ. 6ನೇ ಹಂತದ ಇ ಹರಾಜಿನಲ್ಲಿ 255 ಕೋಟಿ ರೂ. ಆದಾಯ ಬಂದಿದೆ. ಇ-ಹರಾಜು ಪ್ರಕ್ರಿಯೆಯಲ್ಲಿ 1,614 ಜನ ಭಾಗವಹಿಸಿದ್ದರು.
ರಾಮ ಭಕ್ತರ ಮೇಲೆ ಹಲ್ಲೆ ಪ್ರಕರಣ; ಐವರು ಬಂಧನ
ನಿನ್ನೆ ಮಧ್ಯಾಹ್ನ ಸುದ್ದಗುಂಟೆ ಪಾಳ್ಯ ಬಿಸ್ಮಿಲ್ಲಾ ನಗರದಲ್ಲಿ ರಾಮ ಮಂದಿರ ನಿಧಿ ಸಂಗ್ರಹಣೆ ಮಾಡುತ್ತಿದ್ದ ವೇಳೆ ರಾಮ ರಥ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇರಾನಿ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟಕ್ಕೆ ಸಂಬಂಧಿಸಿ ದೆಹಲಿಯ ವಿಶೇಷ ಪೊಲೀಸ್ ತಂಡ ಇಬ್ಬರು ಇರಾನಿ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಕೆಂಪುಕೋಟೆಗೆ ಎಫ್ಎಸ್ಎಲ್ ತಂಡ ಭೇಟಿ
ದೆಹಲಿಯಲ್ಲಿ ಜನವರಿ 26 ರಂದು ಟ್ರ್ಯಾಕ್ಟರ್ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೆಂಪುಕೋಟೆಗೆ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಗ್ಲೂಕೋಸ್ ಸೇವಿಸಿ ಉಪವಾಸ ಅಂತ್ಯಗೊಳಿಸಿದ ರೈತರು
ಬೆಂಗಳೂರಿನಲ್ಲಿ ರೈತರು ಗ್ಲೂಕೋಸ್ ಸೇವಿಸಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.
ಆಸ್ಪತ್ರೆಯಿಂದ ಶಶಿಕಲಾ ನಟರಾಜನ್ ಬಿಡುಗಡೆ
ಅನಾರೋಗ್ಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಶಶಿಕಲಾ ನಟರಾಜನ್ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆ ಆಸ್ಪತ್ರೆಯಿಂದ ನಾಳೆ ಬಿಡುಗಡೆಯಾಗಲಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಲೋಕ ಜನಶಕ್ತಿ ಪಕ್ಷ ನಿರ್ಧಾರ
ಮುಂಬರುವ ಅಸ್ಸಾಂ, ಪಶ್ಚಿಮಬಂಗಾಳದ ಚುನಾವಣೆಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಲೋಕ ಜನಶಕ್ತಿ ಪಕ್ಷ ನಿರ್ಧರಿಸಿದೆ ಎಂದು ಎಲ್‌ಜೆಪಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಲೀಕ್ ಹೇಳಿದ್ದಾರೆ.
ರಾಯಭಾರ ಕಚೇರಿ ಬಳಿ ಎನ್‌ಎಸ್‌ಜಿ ತಂಡ ಭೇಟಿ
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಬಳಿ ಸ್ಫೋಟ ನಡೆದಿದ್ದು, ಘಟನಾ ಸ್ಥಳಕ್ಕೆ ಎನ್‌ಎಸ್‌ಜಿ ತಂಡ ಭೇಟಿನೀಡಿ ಪರಿಶೀಲನೆ ನಡೆಸಿದರು.
ದೆಹಲಿ ಸ್ಫೋಟ ಹೊಣೆ ಹೊತ್ತುಕೊಂಡ ಜೈಷ್-ಉಲ್-ಹಿಂದ್
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಸ್ಫೋಟದ ಹೊಣೆಯನ್ನು ಜೈಷ್-ಉಲ್-ಹಿಂದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಗೋವಾ ಸಿಎಂ ಹೇಳಿಕೆಗೆ ಡಿ.ವಿ.ಸದಾನಂದಗೌಡ ಪ್ರತಿಕ್ರಿಯೆ
ಮಹದಾಯಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ. ನಾವು ಕೂಡ ನೀರನ್ನು ಕುಡಿಯುವುದಕ್ಕೆ ಕೇಳುತ್ತಿದ್ದೇವೆ. ಯಾರೂ ಕುಡಿಯುವ ನೀರಿಗೆ ತೊಂದರೆ ಮಾಡಬಾರದು. ಗೋವಾ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ. ಗೋವಾ ಮುಖ್ಯಮಂತ್ರಿಗಳನ್ನ ಕರೆದು ಮಾತನಾಡುತ್ತೇವೆ ಎಂದು ಕೇಂದ್ರ ಸಚಿವ ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.
ನೈಜೀರಿಯನ್ ಮೂಲದ ಪೆಡ್ಲರ್ಗಳ ಬಂಧನ
ನೈಜೀರಿಯನ್ ಮೂಲದ ಇಬ್ಬರು ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು,ಬಂಧಿತರಿಂದ 75 ಲಕ್ಷ ಮೌಲ್ಯದ 1 ಕೆ.ಜಿ ವಿವಿಧ ಮಾದರಿಯ ಎಂಡಿಎಂಎ, 1 ಬೈಕ್ ಜಪ್ತಿ ಮಾಡಿದ್ದಾರೆ.
ಶುಲ್ಕ ಕಡಿತದ ಬಗ್ಗೆ ಅಧಿಕೃತ ಆದೇಶ ಪ್ರಕಟಿಸಿದ ಸರ್ಕಾರ
ನಿನ್ನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ ಶುಲ್ಕ ಕಡಿತದ ಬಗ್ಗೆ ಮಾಹಿತಿ ನೀಡಿದ್ದರು. ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಎಸ್. ಶಿವಕುಮಾರ್ ಶುಲ್ಕ ಕಡಿತದ ಬಗ್ಗೆ ಅಧಿಕೃತ ಆದೇಶ ಪ್ರಕಟಿಸಿದ್ದಾರೆ.
ಸರ್ವಪಕ್ಷ ಸಭೆ ಅಂತ್ಯ
ಬಜೆಟ್ ಅಧಿವೇಶನ ಹಿನ್ನೆಲೆ ಮೋದಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಅಂತ್ಯವಾಯಿತು.
ದೇವರ ಮೊರೆ ಹೋದ ನಟಿ ರಾಗಿಣಿ
ಜೈಲಿನಿಂದ ಬಂದ ಬಳಿಕ ನಟಿ ರಾಗಿಣಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಸಾಮಾಜಿಕ ಜಾಲತಾಣದಲ್ಲಿ ಫ್ಯಾಮಿಲಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡ ನಟಿ ರಾಗಿಣಿ ದ್ವಿವೇದಿ ಮನದಾಳದ ಮಾತನ್ನು ಹೊರ ಹಾಕಿದ್ದಾರೆ.
ಪೊಲೀಸರ ಕುಟುಂಬ ಸದಸ್ಯರಿಂದ ಪ್ರತಿಭಟನೆ
ಜನವರಿ 26 ರಂದು ರೈತರು- ಪೊಲೀಸರ ನಡುವೆ ನಡೆದ ಘರ್ಷಣೆ ಹಿನ್ನಲೆ ಘರ್ಷಣೆಯಲ್ಲಿ ಗಾಯಗೊಂಡ ಪೊಲೀಸರ ಕುಟುಂಬದ ಸದಸ್ಯರಿಂದ ದೆಹಲಿಯ ಶಹೀದಿ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಸರ್ಕಾರದ ಆಫರ್ ಇನ್ನೂ ಚಾಲ್ತಿಯಲ್ಲಿದೆ; ಮೋದಿ
ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನಾನಿರತ ರೈತರಿಗೆ ಕೇಂದ್ರ ಸರ್ಕಾರ ನೀಡಿದ ಆಫರ್ ಈಗಲೂ ಚಾಲ್ತಿಯಲ್ಲಿದೆ. ರೈತರು ನನಗೆ ಪೋನ್ ಕಾಲ್ ಮಾಡಿ ಮಾತನಾಡಬಹುದು. ನಾವು ದೇಶದ ಬಗ್ಗೆ ಆಲೋಚನೆ ಮಾಡಬೇಕು ಎಂದು ಹೇಳಿದರು.
ಉಪವಾಸ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳು ಸಾಥ್
ದೆಹಲಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲಿಸಿ ಶಿವಮೊಗ್ಗ ನಗರದ ಗಾಂಧಿ ಪಾರ್ಕ್ನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಉಪವಾಸ ಸತ್ಯಾಗ್ರಹ ಬೆಳಿಗ್ಗೆ 10 ರಿಂದ ಸಂಜೆ 6 ಘಂಟೆ ವರೆಗೆ ನಡೆಯುತ್ತದೆ.
ರೈತರ ಪ್ರತಿಭಟನೆ; ಇಂಟರ್ನೆಟ್ ಸೇವೆ ಸ್ಥಗಿತ
ಸಿಂಘು, ಗಾಜಿಪುರ, ಟಿಕ್ರಿ ಗಡಿಯಲ್ಲಿ ರೈತರ ಪ್ರತಿಭಟನೆ ಹಿನ್ನೆಲೆ ತಾತ್ಕಾಲಿಕವಾಗಿ ಜನವರಿ 31ರ ರಾತ್ರಿ 11ಗಂಟೆ ವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿ ಕೇಂದ್ರ ಗೃಹ ಇಲಾಖೆ ಆದೇಶ ನೀಡಿದೆ.
ಕೃಷಿ ಕಾಯ್ದೆ ವಿರುದ್ಧ ಧರಣಿ, ಉಪವಾಸ ಸತ್ಯಾಗ್ರಹ
ಮಹಾತ್ಮ ಗಾಂಧಿ ಹುತಾತ್ಮ ದಿನ ಹಿನ್ನೆಲೆ ರೈತ ಸಂಘದಿಂದ ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ರೈತ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.
ಹುಣಸೋಡು ಸ್ಫೋಟ ಪ್ರಕರಣ; ಕ್ರಷರ್‌ಗೆ ನೀಡಿದ್ದ ಅನುಮತಿ ರದ್ದು
ಶಿವಮೊಗ್ಗ ತಾಲೂಕಿನ ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜಮೀನು ಲೀಸ್‌ಗೆ ಪಡೆದು ಕ್ರಷರ್ ನಡೆಸುತ್ತಿದ್ದ ಆರೋಪಿ ಸುಧಾಕರ್‌ಗೆ ನೀಡಿದ್ದ ಅನುಮತಿಯನ್ನು ರದ್ದು ಮಾಡಿ ಕೆ.ಬಿ.ಶಿವಕುಮಾರ್ ಆದೇಶ ನೀಡಿದ್ದಾರೆ.
ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ; ಬ್ಯಾಟರಿ ವಶ
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ತನಿಖಾಧಿಕಾರಿಗಳು ಬ್ಯಾಟರಿಯನ್ನು ವಶಕ್ಕೆ ಪಡೆದಿದ್ದಾರೆ.
ಗೋವಾ ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ನೀಡಿದ ಹೇಳಿಕೆಗೆ ಕೇಸ್ ಸುಪ್ರೀಂ ಕೋರ್ಟ್ ಮುಂದಿದೆ. ಈ ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಏನೂ ಗೊತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಒಳ್ಳೆಯ ಗುಣಮಟ್ಟದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ; ಯಡಿಯೂರಪ್ಪ
4 ಕಾಮಗಾರಿ ಮುಕ್ತಾಯವಾಗಿದೆ. 25 ಕಾಮಗಾರಿ ಪ್ರಗತಿಯಲ್ಲಿದೆ. ಈವರೆಗೂ ಕಾಮಗಾರಿಗೆ ₹135 ಕೋಟಿ ಬಳಸಲಾಗಿದೆ. ಎಲ್ಲ ರಸ್ತೆಗಳನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಒಳ್ಳೆಯ ಗುಣಮಟ್ಟದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಮತ್ತೊಮ್ಮೆ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡುತ್ತೇನೆ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಟಿ ಸಂಜನಾ ರಾಗಿಣಿ ಮುಖಾಮುಖಿ
ಸಿಟಿ ಸಿವಿಲ್ ಕೋರ್ಟ್ನ ಎನ್ ಡಿಪಿಎಸ್ ಕೋರ್ಟ್ ಮುಂದೆ ನಟಿ ಸಂಜನಾ ರಾಗಿಣಿ ಮುಖಾಮುಖಿಯಾಗಿದ್ದು, ವಿಚಾರಣೆ ಮುಗಿದ ನಂತರ ನಟಿ ರಾಗಿಣಿ ಹಾಗೂ ಸಂಜನಾ ಭೇಟಿ ಮಾಡಿದರು.
ವಿಚಾರಣೆ ಮುಗಿಸಿ ಹೊರಟ ಸಂಜನಾ ಗಲ್ರಾನಿ
ವಿಚಾರಣೆಗಾಗಿ ಎನ್.ಡಿ.ಪಿ ಕೋರ್ಟ್ಗೆ ಆಗಮಿಸಿದ ನಟಿ ಸಂಜನಾ ಗಲ್ರಾನಿ ವಿಚಾರಣೆ ಮುಗಿಸಿ ವಾಪಸ್ಸಾಗಿದ್ದಾರೆ.
ಸಿಎಂ ನಗರ ಪ್ರದಕ್ಷಿಣೆ ಮುಕ್ತಾಯ
3 ಕಡೆ ಬಸ್ನಿಂದ ಇಳಿದು ಸುಮಾರು ಒಂದೂ ಕಾಲು ಗಂಟೆ ಕಾಲ ನಗರ ಪರಿಶೀಲನೆ ನಡೆಸಿದ ಸಿಎಂ ಬಿ.ಎಸ್.ಯಡಿಯೂರಪ್ಪನವರು ವಿಧಾನಸೌಧಕ್ಕೆ ಆಗಮಿಸಿದರು.
ಗಾಂಧಿ ಹುತಾತ್ಮ ದಿನಾಚರಣೆ ಅಂಗವಾಗಿ ರೈತರ ಉಪವಾಸ ಸತ್ಯಾಗ್ರಹ
ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯದ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ನಗರ ಹಾಗೂ ಗ್ರಂಥಾಲಯ ಬಳಿ ವಿವಿಧ ರೈತಪರ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.
ಕೊರೊನಾ ಲಸಿಕೆ ಸಂಪೂರ್ಣ ಸುರಕ್ಷಿತ; ಟ್ವಿಟ್ಟರ್ನಲ್ಲಿ ಡಾ.ಕೆ.ಸುಧಾಕರ್ ಮನವಿ
ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಯಾವುದೇ ಹಿಂಜರಿಕೆ ಇಲ್ಲದೆ ಲಸಿಕೆ ತೆಗೆದುಕೊಳ್ಳಬಹುದು. ಲಸಿಕೆಯ ಬಗ್ಗೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಲಸಿಕೆ ಪಡೆಯಬಹುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಈ ಲಸಿಕೆಗಳನ್ನು ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ತೆಗೆದುಕೊಳ್ಳಬಹುದು. ಕೊರೊನಾ ಲಸಿಕೆಯ ಬಗ್ಗೆ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಕೇವಲ ಸರ್ಕಾರದ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ. (2/2)
— Dr Sudhakar K (@mla_sudhakar) January 30, 2021
ಕೊರೊನಾ ಲಸಿಕೆಯ ಮೊದಲನೇ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಪಡೆಯಬೇಕಿದ್ದು, ಎರಡನೇ ಡೋಸ್ ಪಡೆದ 14-15 ದಿನಗಳ ನಂತರ, ಅಂದರೆ, ಮೊದಲನೇ ಡೋಸ್ ಪಡೆದ ಸುಮಾರು 45 ದಿನಗಳ ನಂತರವಷ್ಟೇ ರೋಗ ನಿರೋಧಕ ಶಕ್ತಿ ಬರಲಿದೆ. ಈ ನಡುವೆ ಲಸಿಕೆ ಪಡೆದ ವ್ಯಕ್ತಿ ವೈರಾಣುವಿನ ಸಂಪರ್ಕಕ್ಕೆ ಬಂದಿದ್ದರೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. (1/2)
— Dr Sudhakar K (@mla_sudhakar) January 30, 2021
ನಾಳೆ ಭಾನುವಾರ, ಜನವರಿ 31ರಂದು ರಾಜ್ಯಾದ್ಯಂತ ಪೋಲಿಯೋ ಲಸಿಕೆ ಅಭಿಯಾನ ನಡೆಯಲಿದ್ದು, ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡುತ್ತೇನೆ.
ನಿಮ್ಮ ಹತ್ತಿರದ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯಲು ಈ ಆಪ್ ಬಳಸಿ.https://t.co/mVqLuXBMDx
— Dr Sudhakar K (@mla_sudhakar) January 30, 2021
ಮಡಿಕೇರಿಯಲ್ಲಿ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯ ಖಜಾನೆಯಲ್ಲಿರುವ ಗಾಂಧಿ ಚಿತಾ ಭಸ್ಮಕ್ಕೆ ಗೌರವ ಸಮರ್ಪಣೆ ಮಾಡಿ, ಗಾಂಧಿ ಮಂಟಪದಲ್ಲಿ ಸರ್ವಧರ್ಮ ಪ್ರಾರ್ಥನೆ ಮಾಡಿದರು. ಸರ್ವೋದಯ ಸಮಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ತಂಡದಿಂದಲೂ ವಿಶೇಷ ಗೌರವ ಸಲ್ಲಿಸಲಾಯಿತು.
ಗಾಂಧೀಜಿ ಪುಣ್ಯಸ್ಮರಣೆ; 2 ನಿಮಿಷ ಮೌನಾಚರಣೆ
ಕಾಫಿನಾಡು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಾಂಧೀಜಿ ಪುಣ್ಯಸ್ಮರಣೆ ಹಿನ್ನೆಲೆ ಗಾಂಧಿ ಪ್ರತಿಮೆ ಎದುರು ಜಿಲ್ಲಾಧಿಕಾರಿ ಮೌನಾಚರಣೆ ಆಚರಿಸಿದರು. ಮೌನಾಚರಣೆಯಲ್ಲಿ ಎಸಿ, ಎಸ್ಪಿ, ತಹಶೀಲ್ದಾರ್ ಸೇರಿ ಅಧಿಕಾರಿಗಳು ಭಾಗಿಯಾಗಿದ್ದರು.
ಕೋರ್ಟ್ಗೆ ಸಂಜನಾ ಗಲ್ರಾನಿ ಆಗಮನ
ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನು ಪಡೆದ ನಟಿ ಸಂಜನಾ ಗಲ್ರಾನಿ ಎನ್.ಡಿ.ಪಿ. ಕೋರ್ಟ್ಗೆ ಆಗಮಿಸಿದ್ದಾರೆ.
ಹೊಸಬರಿಂದಲೂ ತುಂಬಾ ಕಲಿಯೋದಿದೆ; ಸುದೀಪ್
ಇಂಡಸ್ಟ್ರಿ ಬಗ್ಗೆ ಮಾತನಾಡಿದ ನಟ ಸುದೀಪ್ 20- 25 ವರ್ಷ ದಾಟುತ್ತೀವಿ ಎಂದು ನಂಬಿಕೆ ಇರಲಿಲ್ಲ. ಅವತ್ತು ಹಿರಿಯರು ಕಟ್ಟಿಕೊಂಡು ಬಂದಿರುವ ಇಂಡಸ್ಟ್ರಿಯಿಂದ ಎಲ್ಲವನ್ನೂ ಕಲಿಯುತ್ತಾ ಇದ್ದೀವಿ. ಹೊಸ ಕಲಾವಿದರು ಬರುತ್ತಿದ್ದಾರೆ. ಅವರಿಂದಲೂ ಬಹಳಷ್ಟು ವಿಚಾರಗಳು ಕಲಿಯುವುದು ಇದೆ ಎಂದು ಹೇಳಿದರು.
ವೀಕ್ಷಣೆ ಮಧ್ಯೆ ಕಾಫಿ ಸೇವನೆಗೆ ತೆರಳಿದ ಸಿಎಂ
ಎಸ್ ಬಿಐ ಜಂಕ್ಷನ್ನಲ್ಲಿ ಕಾಮಗಾರಿ ವೀಕ್ಷಣೆ ವೇಳೆ ಸಿಎಂ ಯಡಿಯೂರಪ್ಪ ಎಂಜಿ ರೋಡ್ ಕುಂಬ್ಳೆ ಸರ್ಕಲ್ ಬಳಿ ಕೋಶಿಸ್ ಕೆಫೆಯಲ್ಲಿ ಕಾಫಿ ಸೇವನೆಗೆ ತೆರಳಿದರು.
ಪೆಟ್ರೋಲ್ ಬಂಕ್ ತೆರವು; ಅಧಿಕಾರಗಳ ಮತ್ತು ಮಾಲೀಕರ ನಡುವೆ ಮಾತಿನ ಚಕಮಕಿ
ಕೋಲಾರದ ಟೀಕಲ್ ರಸ್ತೆ ಬಳಿ ಸರ್ಕಾರಿ ಜಾಗದಲ್ಲಿದ್ದ ಪೆಟ್ರೋಲ್ ಬಂಕ್ನನ್ನು ತೆರವುಗೊಳಿಸುತ್ತಿದ್ದು, ಅಧಿಕಾರಗಳ ಮತ್ತು ಪೆಟ್ರೋಲ್ ಬಂಕ್ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜೀವಂತ ಕಾಡಾನೆಗೆ ಬೆಂಕಿ ಇಟ್ಟು ಕೊಂದ ಪ್ರಕರಣ ಖಂಡಿಸಿ ಪ್ರತಿಭಟನೆ
ಮೈಸೂರಿನ ಕನ್ನಡ ವೇದಿಕೆಯಿಂದ ತಮಿಳುನಾಡಿನಲ್ಲಿ ಜೀವಂತ ಕಾಡಾನೆಗೆ ಬೆಂಕಿ ಇಟ್ಟು ಕೊಂದ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಜೀವಂತ ಆನೆಯನ್ನು ಬೆಂಕಿ ಇಟ್ಟು ಸುಟ್ಟಿರುವುದು ಖಂಡನೀಯ. ರಾಜ್ಯ,ಕೇಂದ್ರ ಸರ್ಕಾರಗಳು ಕಾಡು ಪ್ರಾಣಿಗಳ ಸಂರಕ್ಷಣೆ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾಗಿದವರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ.
ಸಿನಿಮಾ ಜೀವನ ಕಷ್ಟಕರವಾಗಿತ್ತು; ಸುದೀಪ್
‘ಮೈ ಆಟೋಗ್ರಾಫ್’ ಸಿನಿಮಾಗೂ ಮುಂಚೆ ಕಷ್ಟವಾಗಿತ್ತು ಎಂದು ಮಾತನಾಡಿದ ನಟ ಸುದೀಪ್ ಸಿನಿಮಾ ಮಾಡಲು ನನ್ನ ಮನೆ ಪತ್ರಗಳನ್ನು ಅಡ ಇಟ್ಟಿದ್ದೆ. ಆ ಚಿತ್ರ ಸಕ್ಸಸ್ ಆಗಿಲ್ಲ ಅಂದಿದ್ದರೆ ಜೀವನ ಕಷ್ಟವಾಗುತ್ತಿತ್ತು ಎಂದರು.
ದೇಶದಲ್ಲಿ ಇನ್ನೂ ಸಾಮರಸ್ಯ ನೆಲೆಸಿಲ್ಲ; ಸಿದ್ದರಾಮಯ್ಯ
ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧೀಜಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಥೂರಾಮ್ ಗೋಡ್ಸೆ ಪೂಜಿಸುವ ಕೆಲಸವಾಗುತ್ತಿದೆ. ಇದಕ್ಕಿಂತ ದೇಶದ್ರೋಹದ ಕೆಲಸ ಮತ್ತೊಂದಿಲ್ಲ ದೇಶದಲ್ಲಿ ಜಾತಿ ಜಾತಿ ನಡುವೆ ಸಂಘರ್ಷ ಹೆಚ್ಚಿಸಿ ಸಾಮರಸ್ಯವನ್ನು ಬಿಜೆಪಿ ಹಾಳು ಮಾಡುತ್ತಿದೆ ಎಂದು ಹೇಳಿದರು.
ದುಬೈನಿಂದ ನಟ ಕಿಚ್ಚ ಸುದೀಪ್ ಸುದ್ದಿಗೋಷ್ಠಿ
ಕನ್ನಡ ಚಿತ್ರರಂಗಕ್ಕೆ ಬಂದು 25 ವರ್ಷವಾದ ಹಿನ್ನೆಲೆ ತನ್ನ ಸಿನಿ ಜರ್ನಿಯ ಬಗ್ಗೆ ನಟ ಸುದೀಪ್ ಮಾತನಾಡುತ್ತಿದ್ದಾರೆ.
ವಿದ್ಯಾರ್ಥಿಗಳಿಂದ ಸಿಎಂಗೆ ಮನವಿ
ರೇಸ್ ಕೋರ್ಸ್ ರಸ್ತೆಯಲ್ಲಿ ಪರಿಶೀಲನೆ ವೇಳೆ ಸಿಎಂ ಯಡಿಯೂರಪ್ಪಗೆ ಸರ್ಕಾರಿ ರಾಮ್ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಸ್ಕೈ ವಾಕರ್ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು.
ಬೆಂಗಳೂರು ವಿವಿ 55ನೇ ಘಟಿಕೋತ್ಸವ: ಇಸ್ರೋ ಚೇರ್ಮನ್ ಕೆ ಶಿವನ್ ಭಾಗಿ
ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿವಿ 55ನೇ ಘಟಿಕೋತ್ಸವ ನಡೆಯುತ್ತಿದೆ. ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಇಸ್ರೋ ಚೇರ್ಮನ್ ಕೆ.ಶಿವನ್ ಭಾಗಿಯಾಗಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಘಟಿಕೋತ್ಸವ ನಡೆಯುತ್ತಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪರಿಂದ ಸಿಟಿ ರೌಂಡ್ಸ್
ವಿಧಾನಸೌಧದಿಂದ ಬಸ್ ಮೂಲಕ ತೆರಳಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಸ್ಮಾರ್ಟ್ ಕಾಮಗಾರಿ ವೀಕ್ಷಣೆ ಆರಂಭಿಸಿದ್ದಾರೆ.
11.30ರ ನಂತರ ದುಬೈನಿಂದಲೇ ಕಿಚ್ಚನ ಮಾತು
11 ಭಾಷೆಗಳಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗಲಿದ್ದು, 11.30ರ ನಂತರ ದುಬೈನಿಂದಲೇ ಕಿಚ್ಚ ಸುದೀಪ್ ಮಾತನಾಡುತ್ತಾರೆ. ಜೊತೆಗೆ ನಾಳೆಯ ಕಾರ್ಯಕ್ರಮದ ಬಗ್ಗೆ ಸುದೀಪ್ ಮಾಹಿತಿ ನೀಡಲಿದ್ದಾರೆ.
ಠಾಕ್ರೆ ಹೇಳಿಕೆಗೆ ಖಂಡನೆ; ಕನ್ನಡ ಚಳವಳಿ ಸಮಿತಿಯಿಂದ ಪ್ರತಿಭಟನೆ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಿ ಮೈಸೂರಿನಲ್ಲಿ ಕನ್ನಡ ಚಳವಳಿ ಸಮಿತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಾಂಧೀಜಿ ದೇಶದ ಐಕ್ಯತೆಗೆ ಪ್ರಾಣ ಕೊಟ್ಟವರು: ಮಲ್ಲಿಕಾರ್ಜುನ ಖರ್ಗೆ
ಕೆಪಿಸಿಸಿ ಕಚೇರಿಯಲ್ಲಿ ಗಾಂಧೀಜಿ ಪುಣ್ಯತಿಥಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಗಾಂಧೀಜಿಗೆ ಅಧಿಕಾರದ ಬಗ್ಗೆ ಕಿಂಚಿತ್ತು ಆಸಕ್ತಿ ಇರಲಿಲ್ಲ. ಜನರ ಹಿತ, ದೇಶದ ಹಿತವನ್ನು ಮುಖ್ಯವಾಗಿಸಿಕೊಂಡಿದ್ದರು. ಅಂತಹವರು ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರು ಎಂದು ಹೇಳಿದರು.
ತೀವ್ರ ಸ್ವರೂಪ ಪಡೆದ ಪಂಚಮಸಾಲಿ ಪಾದಯಾತ್ರೆ
ಪಂಚಾಯತಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ಆಗ್ರಹಿಸಿ ಜಯಮೃತ್ಯುಂಜಯ ಸ್ಬಾಮೀಜಿ ಸಮ್ಮುಖದಲ್ಲಿಯೇ ದಾವಣಗೆರೆ ನಗರದ ಗಾಂಧಿ ಸರ್ಕಲ್ನಲ್ಲಿ ಸಿಎಂ ಯಡಿಯೂರಪ್ಪ ಪ್ರತಿಕೃತಿ ದಹಿಸಲಾಗಿದೆ. ಜೊತೆಗೆ ಬಾರುಕೋಲುಗಳಿಂದ ಸಿಎಂ ಪ್ರತಿಕೃತಿಗೆ ಏಟು ನೀಡಿದರು.
ಮರಾಠ ಅಭಿವೃದ್ಧಿ ನಿಗಮ ರದ್ದು ಮಾಡಲು ಆಗ್ರಹ
ಮಹಾರಾಷ್ಟ್ರ ಸಿಎಂ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ‘ಬೆಳಗಾವಿ ನಮ್ಮದು’ ಎಂಬ ಘೋಷಣೆ ಕೇಳಿಬರುತ್ತಿದೆ.
ಹುತಾತ್ಮರಿಗೆ ಗೌರವ ಸಮರ್ಪಣೆ
ದೇಶದಾದ್ಯಂತ ಹುತಾತ್ಮರ ದಿನಾಚರಣೆ ಹಿನ್ನೆಲೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಅಧಿಕಾರಿಗಳು ಹುತಾತ್ಮರಿಗೆ ಗೌರವ ಸಮರ್ಪಣೆ ಮಾಡಿದರು. ಎರಡು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು.
ಶಾರ್ಟ್ ಸರ್ಕ್ಯೂಟ್ನಿಂದಾಗಿ ಬಟ್ಟೆ ಅಂಗಡಿಗೆ ಬೆಂಕಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬಟ್ಟೆ ಅಂಗಡಿ ಹೊತ್ತಿ ಉರಿದಿದ್ದು, ಸುಮಾರು 12-15 ಲಕ್ಷ ರೂ. ಹಾನಿಯಾಗಿದೆ.
ಸ್ವಾವಲಂಭನೆ ಜೀವನ ತೋರಿಸಿ ಕೊಟ್ಟವರು ಗಾಂಧಿ; ಬಿಎಸ್ವೈ
ಇಂದು ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಿಕೊಳ್ಳುವ ಕಾರ್ಯಕ್ರಮ. ಗಾಂಧೀಜಿಯವರು ಪ್ರತಿಪಾಧಿಸಿದ ತತ್ವ ಸಿದ್ಧಾಂತಗಳನ್ನು ಪಾಲನೆ ಮಾಡಬೇಕು. ಗಾಂಧಿ ದೇಶವನ್ನು ರಾಜಕೀಯ ದಾಸ್ಯದಿಂದ ಓಡಿಸಿದವರು. ಅಲ್ಲದೇ ಸ್ವಾವಲಂಭನೆ ಜೀವನ ತೋರಿಸಿ ಕೊಟ್ಟವರು ಎಂದು ಸಿಎಂ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಹಾತ್ಮ ಗಾಂಧೀಜಿ ಸಮಾಧಿಗೆ ಪ್ರಧಾನಿ ಮೋದಿ ನಮನ
ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯತಿಥಿ ಹಿನ್ನೆಲೆ ದೆಹಲಿಯ ರಾಜ್ಘಾಟ್ನಲ್ಲಿರುವ ಗಾಂಧೀಜಿ ಸಮಾಧಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಮನ ಸಲ್ಲಿಸಿದರು.
ದೌರ್ಜನ್ಯ ಖಂಡಿಸಿ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ
ದೆಹಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಐಕ್ಯ ಹೋರಾಟ ಸಮಿತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್ ಸೇರಿ ಹಲವು ಮುಖಂಡರು ಭಾಗಿಯಾಗಿದ್ದಾರೆ.
ಸರ್ವೋದಯ ದಿನದ ಪ್ರಯುಕ್ತ ಮಾಂಸ ವ್ಯಾಪಾರ ಬಂದ್
ಸರ್ವೋದಯ ದಿನದ ಪ್ರಯುಕ್ತ ಮೈಸೂರಿನಲ್ಲಿ ಇಂದು ಮಾಂಸ ವ್ಯಾಪಾರ ಬಂದ್ ಮಾಡಿ, ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮಹಾನಗರ ಪಾಲಿಕೆ ಆಯುಕ್ತರು ಆದೇಶ ನೀಡಿದ್ದಾರೆ.
ಗಾಜಿಪುರ್ ಗಡಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ
ಹರಿಯಾಣ, ಪಂಜಾಬ್ನ 17 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತವಾಗಿದೆ.
ರೈತ ಸಂಘಟನೆಗಳಿಂದ ಮಧ್ಯಾಹ್ನ 12ಕ್ಕೆ ಸುದ್ದಿಗೋಷ್ಠಿ
ಸಿಂಘು ಗಡಿಯಲ್ಲಿ ರೈತರ ಮೇಲೆ ದಾಳಿ ನಡೆದ ಹಿನ್ನೆಲೆ ರೈತ ಸಂಘಟನೆಗಳಿಂದ ಮಧ್ಯಾಹ್ನ 12ಕ್ಕೆ ಸುದ್ದಿಗೋಷ್ಠಿ ನಡೆಯುತ್ತದೆ. ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಮುಖಂಡರು ಮಾಹಿತಿ ನೀಡಲಿದ್ದಾರೆ.
ದುಬೈನಲ್ಲಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ್
ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ಅನಾವರಣ ಆಗಲಿದ್ದು, ದುಬೈನಲ್ಲಿ ಕಿಚ್ಚ ಸುದೀಪ್ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಾರೆ.
ರೈತರ ಪ್ರತಿಭಟನೆ; ಭದ್ರತೆಗಾಗಿ ಪೊಲೀಸರ ನಿಯೋಜನೆ
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿ-ಹರಿಯಾಣ ಗಡಿ ಸಿಂಘುನಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದು, ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಟ್ವೀಟ್ ಮೂಲಕ ಗಾಂಧೀಜಿಯನ್ನು ಸ್ಮರಿಸಿದ ಪ್ರಧಾನಿ ಮೋದಿ
ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮ ದಿನವಾಗಿದ್ದು, ಗಾಂಧೀಜಿ ಆದರ್ಶಗಳು ಕೋಟ್ಯಂತರ ಜನರಿಗೆ ಪ್ರೇರಣೆ ಎಂದು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಗಾಂಧೀಜಿಯನ್ನು ಸ್ಮರಿಸಿದರು.
Tributes to the great Bapu on his Punya Tithi. His ideals continue to motivate millions.
On Martyrs’ Day we recall the heroic sacrifices of all those great women and men who devoted themselves towards India’s freedom and the well-being of every Indian.
— Narendra Modi (@narendramodi) January 30, 2021
ಜಿಲ್ಲಾಸ್ಪತ್ರೆ ವೈದ್ಯರಿಗೆ ಕೊರೊನಾ ಸೋಂಕು
ಕೊವಿಡ್ ಲಸಿಕೆ ಪಡೆದ ನಾಲ್ಕು ವೈದ್ಯರು ಸೇರಿ ಚಾಮರಾಜನಗರ ಜಿಲ್ಲಾಸ್ಪತ್ರೆಯ ಒಟ್ಟು 7 ವೈದ್ಯರಿಗೆ ಕೊರೊನಾ ಸೋಂಕು ದೃಢವಾಗಿದೆ.
66ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿ-ಹರಿಯಾಣ ಗಡಿ ಟಿಕ್ರಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ.
ಭೀಕರ ಅಪಘಾತದಲ್ಲಿ 10 ಜನ ಸಾವು
ಮೊರಾದಾಬಾದ್-ಆಗ್ರಾ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 10 ಜನ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಷೋಷಣೆ ಮಾಡಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 13,083 ಜನರಿಗೆ ಕೊರೊನಾ
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 13,083 ಜನರಿಗೆ ಕೊರೊನಾ ಪತ್ತೆಯಾಗಿದ್ದು, 24 ಗಂಟೆಯಲ್ಲಿ 137 ಜನರು ಬಲಿಯಾಗಿದ್ದಾರೆ.
ರೈಲ್ ಬರೋ ಚಳುವಳಿ; ಬಿಗಿ ಪೊಲೀಸ್ ಬಂದೋಬಸ್ತ್
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುವ ರೈಲ್ ಬರೋ ಚಳುವಳಿ ಹಿನ್ನಲೆ ಬೆಂಗಳೂರಿನ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗಡಿ ವಿವಾದ ಕೆಣಕುತ್ತಿದ್ದ ಉದ್ಧವ್ಗೆ ಪ್ರತ್ಯುತ್ತರ
ಮರಾಠಿಗರು ಕರ್ನಾಟಕದಲ್ಲಿ ಇದ್ದಿದ್ದು ದೇವರ ಆಶೀರ್ವಾದ. ಮೊದಲು ಮಹಾರಾಷ್ಟ್ರದ ಮೂಲಸೌಕರ್ಯ ಸಮಸ್ಯೆ ಬಗೆಹರಿಸಿ. ಗಡಿ ಸಮಸ್ಯೆಗಿಂತ ಜ್ವಲಂತ ಸಮಸ್ಯೆಗಳು ಮಹಾರಾಷ್ಟ್ರದಲ್ಲಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಿ, ಮೂಲಸೌಕರ್ಯ ಕಲ್ಪಿಸಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ಗೆ ಮರಾಠಿಗರು ಪ್ರತ್ಯುತ್ತರ ನೀಡಿದ್ದಾರೆ.
ಮಾರ್ಚ್ 26ಕ್ಕೆ ಪ್ರಧಾನಿ ಬಾಂಗ್ಲಾ ಪ್ರವಾಸ
ಕೊರೊನಾ ನಂತರ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 26ಕ್ಕೆ ಬಾಂಗ್ಲಾ ಪ್ರವಾಸ ಕೈಗೊಂಡಿದ್ದಾರೆ. ಬಾಂಗ್ಲಾ, ನೇಪಾಳದ ಜೊತೆ ಸಾರಿಗೆ ಒಪ್ಪಂದವಾಗುವ ಸಾಧ್ಯತೆಯಿದೆ.
ಪೋಷಕರು ಕರೆ ನೀಡಿದ್ದ ಪ್ರತಿಭಟನೆ ರದ್ದು
ಖಾಸಗಿ ಶಾಲೆಗಳ ಶುಲ್ಕ ಕಡಿತಕ್ಕೆ ಆಗ್ರಹಿಸಿ ಭಾನುವಾರ ಸರ್ಕಾರದ ವಿರುದ್ಧ ಪೋಷಕರು ಪ್ರತಿಭಟನೆಗೆ ನಿರ್ಧರಿಸಿದ್ದರು. ಸರ್ಕಾರ ಶುಲ್ಕ ಕಡಿತ ಮಾಡಿದ ಹಿನ್ನೆಲೆ ಪ್ರತಿಭಟನೆ ರದ್ದು ಮಾಡಿದ್ದಾರೆ. ಈ ಕುರಿತು ಪೋಷಕರ ಸಂಘಟನೆಯ ಸದಸ್ಯರು ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಅಧ್ಯಕ್ಷರ ಆಯ್ಕೆ: ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗೀಜಿಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆ ವೇಳೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಿಂದ ಶಶಿಕಲಾ ಡಿಸ್ಚಾರ್ಜ್ ಸಾಧ್ಯತೆ
ಸದ್ಯ ಶಶಿಕಲಾ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.
ಲಂಚ ಕೇಳಿದ ಆರೋಪದಡಿ ಗಂಗಾಧರ್ ವಿರುದ್ಧ FIR
ಕಂದಾಯ ಸಚಿವ R.ಅಶೋಕ್ ಪಿಎ ಆಗಿದ್ದ ಗಂಗಾಧರ್ ಮೇಲೆ ಲಂಚ ಕೇಳಿದ ಆರೋಪದಡಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಹಾರಾಷ್ಟ್ರ ಸಿಎಂ ಹೇಳಿಕೆ ಖಂಡಿಸಿ ರೈಲ್ ಬಂದ್ ಚಳುವಳಿ
ಮಹಾರಾಷ್ಟ್ರ ಸಿಎಂ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಬೆಳಗ್ಗೆ 10 ರಿಂದ ರಾತ್ರಿ 10ರವರೆಗೆ ರೈಲು ಬಂದ್ ಚಳುವಳಿಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳಗ್ಗೆ 10.30ಕ್ಕೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯುತ್ತದೆ.
ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಕಿಡಿ
ಶೇ.30ರಷ್ಟು ಶಾಲಾ ಶುಲ್ಕ ಕಡಿತ ಒಪ್ಪುವಂತಹದ್ದಲ್ಲ. ಶೇಕಡಾ 15 ರಿಂದ 25ರಷ್ಟು ಶುಲ್ಕ ಕಡಿತ ಮಾಡಬಹುದಿತ್ತು. ಕಳೆದ ವರ್ಷದ ಫೀಸ್ ಕಟ್ಟಿಲ್ಲ, ಈ ವರ್ಷ ದಾಖಲಾತಿ ಇಲ್ಲ. ಈ ಧೋರಣೆ ಸಂಪೂರ್ಣವಾಗಿ ಒಪ್ಪುವಂತಹದ್ದಲ್ಲ. ಈ ಬಗ್ಗೆ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಕ್ಯಾಮ್ಸ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಟಿವಿ9ಗೆ ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಕಾರ್ಯಸೂಚಿ ಮಂಡಿಸುವ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವಪಕ್ಷ ಸಭೆ ನಡೆಯಲಿದ್ದು, ಬಜೆಟ್ ಅಧಿವೇಶನದ ಕಾರ್ಯಸೂಚಿಯನ್ನು ಮಂಡಿಸುತ್ತಾರೆ.
ರಾಯಭಾರ ಕಚೇರಿ ಬಳಿ ಸ್ಫೋಟ; ಪತ್ರ ಪತ್ತೆ
ಸ್ಪೋಟಗೊಂಡ ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ‘ಇದು ಕೇವಲ ಟ್ರೈಲರ್ ಅಷ್ಟೇ’ ಬರಹವಿರುವ ಪತ್ರ ಪತ್ತೆಯಾಗಿದೆ.
ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ; ಮಹತ್ವದ ಮಾಹಿತಿ ಲಭ್ಯ
ದೆಹಲಿ ವಿಶೇಷ ಪೊಲೀಸರ ತಂಡಕ್ಕೆ ಸಿಸಿ ಟಿವಿ ದೃಶ್ಯದಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಜನವರಿ 29 ರಂದು ಕಾರಿನಲ್ಲಿ ಬಂದಿಳಿದ ಇಬ್ಬರಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ವಿಶೇಷ ಪೊಲೀಸರ ತಂಡ ಇಬ್ಬರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಬಾಗಲಕೋಟೆಗೆ ನಾಳೆ ಮಾಜಿ ಸಿಎಂ ಹೆಚ್ಡಿಕೆ ಭೇಟಿ
ಬಾಗಲಕೋಟೆಯಲ್ಲಿ ನಾಳೆ ನಡೆಯಲಿರುವ ಜೆಡಿಎಸ್ ಪಕ್ಷ ಸಂಘಟನಾ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಸಮಾವೇಶ ಹಿನ್ನೆಲೆ ಬೃಹತ್ ವೇದಿಕೆಗೆ ಸಿದ್ಧತೆಯಾಗುತ್ತಿದೆ.
ಜುಲೈ 16 ವಿಶ್ವದಾದ್ಯಂತ ಕೆಜಿಎಫ್ ಹಬ್ಬ
ಕೆಜಿಎಫ್ 2 ರಿಲೀಸ್ ಡೇಟ್ ಪ್ರಕಟವಾದ ಬೆನ್ನಲ್ಲೇ ಬಹುಭಾಷೆಯಿಂದಲೂ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕೆಜಿಎಫ್2 ಮೇ ತಿಂಗಳೊಳಗೆ ಫೈನಲ್ ಕಾಪಿ ರೆಡಿಯಾಗಲಿದೆ.
ಕೊರೊನಾ ಆತಂಕದ ನಡುವೆ ಗವಿಸಿದ್ದೇಶ್ವರ ಜಾತ್ರೆ
ದಕ್ಷಿಣ ಭಾರತದ ಕುಂಭಮೇಳ ಗವಿಸಿದ್ದೇಶ್ವರ ಜಾತ್ರೆ ಕೊರೊನಾ ಆತಂಕದ ನಡುವೆ ನೆರವೇರುತ್ತದೆ. ನಿರ್ಬಂಧವಿದ್ದರೂ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
ನಂಜುಂಡೇಶ್ವರ ದೇವಾಲಯದ ಹುಂಡಿಗಳ ಕಾಣಿಕೆ ಎಣಿಕೆ
ಮೈಸೂರು ಜಿಲ್ಲೆಯ ನಂಜುಂಡೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ 1 ಕೋಟಿ 1 ಲಕ್ಷ 71 ಸಾವಿರದ 910 ರೂಪಾಯಿ ಸಂಗ್ರಹವಾಗಿದೆ. 70 ಗ್ರಾಂ ಚಿನ್ನ, 3 ಕೆಜಿ 50 ಗ್ರಾಂಮನಷ್ಟು ಬೆಳ್ಳಿ ಹಾಗೂ 13 ನಿಷೇಧಿತ ನೋಟುಗಳು, 2 ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ದೆಹಲಿಯಲ್ಲಿ ಮತ್ತಷ್ಟು ತೀವ್ರಗೊಳ್ಳುತ್ತಿರುವ ರೈತರ ಪ್ರತಿಭಟನೆ
ಗಾಜೀಪುರ್ ಗಡಿಗೆ ಇಂದು 5 ಸಾವಿರಕ್ಕೂ ಹೆಚ್ಚು ರೈತರು ಆಗಮಿಸಿ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಾರೆ.
ಅಡಕೆ ಗೊನೆಗಳನ್ನು ಕದ್ದಿದ್ದ 6 ಆರೋಪಿಗಳ ಸೆರೆ
ಒಂದು ಲಕ್ಷ ಮೌಲ್ಯದ ಅಡಕೆಯನ್ನು ಕದ್ದಿದ್ದ 6 ಆರೋಪಿಗಳನ್ನು ತುಮಕೂರು ಜಿಲ್ಲೆಯ ಕೊರಟಗೆರೆ ಪೊಲೀಸರು ಬಂಧಿಸಿ, ಒಂದು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ರಷ್ಯಾ, ಫ್ರಾನ್ಸ್ನಲ್ಲಿರುವ ಕಚೇರಿಗಳ ಮೇಲೆ ದಾಳಿ ಸಾಧ್ಯತೆ
ರಷ್ಯಾ, ಫ್ರಾನ್ಸ್ನಲ್ಲಿರುವ ಕಚೇರಿಗಳ ಮೇಲೆ ದಾಳಿಯಾಗುವ ಸಾಧ್ಯತೆಯಿದ್ದು, ಪ್ಯಾರಿಸ್ನಲ್ಲಿ ಇಸ್ರೇಲ್ ರಾಯಭಾರ ಕಚೇರಿ ಬಳಿ ಕಾರು ಪತ್ತೆಯಾಗಿದೆ. ಕಾರು ಬಳಿಯಿದ್ದ ಅನುಮಾನಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.
ಒಂದೇ ದಿನಕ್ಕೆ 3.19 ಕೋಟಿ ರೂ. ಕಾಣಿಕೆ ಸಂಗ್ರಹ
ಆಂಧ್ರದ ಚಿತ್ತೂರು ಜಿಲ್ಲೆಯ ತಿರುಮಲ ತಿರುಪತಿ ದೇವಸ್ಥಾನದ ಹುಂಡಿಗೆ ಕಳೆದ 24 ಗಂಟೆಗಳಲ್ಲಿ 3.19 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.
ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಕೆ ಪತ್ತೆ
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಕೆಯಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹಲವು ಕಡೆ ಸ್ಫೋಟ ನಡೆಸಲು ಸಂಚು ಶಂಕೆ
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ನಿನ್ನೆ ಸಂಜೆ ಹೊತ್ತಿಗೆ ಸ್ಫೋಟಗೊಂಡಿದ್ದು, ಭಾರತದಲ್ಲಿ ಮತ್ತಷ್ಟು ಕಡೆ ದೊಡ್ಡ ಮಟ್ಟದ ಸ್ಫೋಟ ನಡೆಸಲು ಸಂಚು ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಭಾರತಕ್ಕೆ ಆಗಮಿಸಲಿರುವ ಇಸ್ರೇಲ್ನ ಮೊಸಾದ್ ಟೀಮ್
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟವಾದ ಹಿನ್ನೆಲೆ ಇಸ್ರೇಲ್ನ ಗುಪ್ತಚರ ಇಲಾಖೆಯ ತಂಡ ಮೊಸಾದ್ ಟೀಮ್ ಭಾರತಕ್ಕೆ ಆಗಮಿಸುತ್ತದೆ.
ದೌರ್ಜನ್ಯವನ್ನು ಖಂಡಿಸಿ ಕರಾಳ ದಿನಾಚರಣೆ
ದೆಹಲಿಯಲ್ಲಿ ನಡೆದ ರೈತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಇಂದು ಬೆಳಗ್ಗೆ 11.30ಕ್ಕೆ ಫ್ರೀಡಂ ಪಾರ್ಕ್ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿ ರೈತರ ಕರಾಳ ದಿನ ಆಚರಣೆ ಮಾಡಲಾಗುತ್ತದೆ.
ಗಾಂಧೀಜಿ ಹುತಾತ್ಮ ದಿನವನ್ನು ರೈತರ ಕರಾಳ ದಿನವಾಗಿ ಆಚರಣೆ
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಇಂದು ಗಾಂಧೀಜಿ ಹುತಾತ್ಮ ದಿನವನ್ನು ರೈತರ ಕರಾಳ ದಿನವಾಗಿ ಆಚರಣೆ ಮಾಡಲು ನಿರ್ಧರಿಸಿದ್ದು, ಎಡಗೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಬೆಂಬಲಿಸಲು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಕುರುಬ ಸಮುದಾಯಕ್ಕೆ ST ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ
ಕುರುಬ ಸಮುದಾಯಕ್ಕೆ ST ಮೀಸಲಾತಿಗೆ ಆಗ್ರಹಿಸಿ ಕುರುಬ ಸಮುದಾಯದ ಪಾದಯಾತ್ರೆ 16ನೇ ದಿನಕ್ಕೆ ಬಂದು ತಲುಪಿದೆ. ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸೀಬಿಯಿಂದ ತುಮಕೂರು ನಗರದವರೆಗೆ ಪಾದಯಾತ್ರೆ ನಡೆಯುತ್ತದೆ.
ಫ್ರಂಟ್ ಲೈನ್ ವರ್ಕರ್ಸ್ಗೆ ಲಸಿಕೆ ನೀಡಲು ಕೇಂದ್ರ ಸೂಚನೆ
ಫೆಬ್ರವರಿ ಮೊದಲ ವಾರದಲ್ಲಿ ಫ್ರಂಟ್ ಲೈನ್ ವರ್ಕರ್ಸ್ಗೆ ಲಸಿಕೆ ನೀಡಲು ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಉಪವಾಸ ಸತ್ಯಾಗ್ರಹ ನಿರ್ಧಾರ ಹಿಂಪಡೆದ ಅಣ್ಣಾ ಹಜಾರೆ
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರಿಗೆ ಬೆಂಬಲಿಸಲು ನಿರ್ಧರಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಒಂದೇ ದಿನದಲ್ಲಿ ತಮ್ಮ ನಿಲುವು ಬದಲಿಸಿ ಉಪವಾಸ ಸತ್ಯಾಗ್ರಹ ನಿರ್ಧಾರವನ್ನು ಹಿಂಪಡೆದಿದ್ದಾರೆ.
ಬಿಬಿಎಂಪಿ ಚುನಾವಣೆ 1 ವರ್ಷ ಮುಂದೂಡಿಕೆ ಸಾಧ್ಯತೆ
ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಬಿಬಿಎಂಪಿ ಚುನಾವಣೆಯನ್ನು 1 ವರ್ಷ ಮುಂದೂಡುವ ಸಾಧ್ಯತೆಯಿದೆ.
ಹರಿದ್ವಾರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಹಿನ್ನೆಲೆ ಹರಿದ್ವಾರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ
ಪಶ್ಚಿಮ ಬಂಗಾಳ ಪ್ರವಾಸ ರದ್ದುಪಡಿಸಿದ ಅಮಿತ್ ಶಾ
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟಗೊಂಡ ಹಿನ್ನೆಲೆ 2 ದಿನ ಪಶ್ಚಿಮ ಬಂಗಾಳ ಪ್ರವಾಸಕ್ಕೆ ತೆರಳಬೇಕಿದ್ದ ಗೃಹ ಸಚಿವ ಅಮಿತ್ ಶಾ ಇದೀಗ ರದ್ದುಪಡಿಸಿದ್ದಾರೆ.
ಮೀಸಲಾತಿಗೆ ಒತ್ತಾಯ; ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತಿದ್ದು, ದಾವಣಗೆರೆಯಿಂದ ವಚನಾನಂದಶ್ರೀ ಪಾದಯಾತ್ರೆಗೆ ಸಾಥ್ ನೀಡಿದ್ದಾರೆ.
Published On - Jan 30,2021 7:38 PM