ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ (Queen Elizabeth II) ಅವರು ನಿನ್ನೆ (ಸೆಪ್ಟೆಂಬರ್ 8) ನಿಧನ ಹೊಂದಿದ್ದಾರೆ. ಇಂಗ್ಲೆಂಡಿನ ರಾಣಿ ಎಲಿಜಬೆತ್-II, 1950 ರ ದಶಕದ ಉತ್ತರಾರ್ಧದಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ, ಅಂದಿನ ರಾಜ್ಯಪಾಲರು ಮತ್ತು ಮೈಸೂರು ರಾಜ್ಯದ ಮಾಜಿ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಬೇಟಿ ಮಾಡಿದ್ದರು.
ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ (Queen Elizabeth II) ಅವರು ನಿನ್ನೆ ನಿಧನ ಹೊಂದಿದ ಬಳಿಕ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಾಪ ಸೂಚಿಸಿದ್ದಾರೆ. ಜೊತೆಗೆ ರಾಣಿ ಎರಡನೇ ಎಲಿಜಬೆತ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದು, ನನ್ನ ಅಜ್ಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ರೊಂದಿಗೆ ಸುತ್ತಾಡಿದ್ದು ನಮಗೆ ನೆನಪಿದೆ ಎಂದು ಸಾಮಾಜಿಕ ಜಾಲಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
Published On - 11:29 am, Fri, 9 September 22