ಬೆಂಗಳೂರು: ನೂತನ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿತ್ತು. ಈಗ ಸಚಿವರ ಬೇಡಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಣಿದಿದ್ದಾರೆ. ನೂತನ ಸಚಿವರಾದ ಎಂಟಿಬಿ ನಾಗರಾಜ್ ಸೇರಿ ಅನೇಕರ ಖಾತೆ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಜೆ.ಸಿ.ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ. ಅಬಕಾರಿ ಖಾತೆ ನಿರಕಾರಿಸಿದ್ದ ಎಂಟಿಬಿ ನಾಗರಾಜ್ಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ಹಂಚಿಕೆ ಮಾಡಲಾಗಿದೆ. ಅಸಮಾಧಾನಿತ ಕೆ. ಗೋಪಾಲಯ್ಯಗೆ ಅಬಕಾರಿ ಖಾತೆ ನೀಡಲಾಗಿದೆ.
ಆರ್.ಶಂಕರ್ಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಕೆ.ಸಿ.ನಾರಾಯಣಗೌಡಗೆ ಯುವ ಸಬಲೀಕರಣ & ಕ್ರೀಡೆ, KCN-ಯೋಜನೆ, ಸಾಂಖ್ಯಿಕ & ಕಾರ್ಯಕ್ರಮ ಅನುಷ್ಠಾನ ಜವಾಬ್ದಾರಿ ನೀಡಲಾಗಿದೆ. ಅರವಿಂದ ಲಿಂಬಾವಳಿಗೆ ಅರಣ್ಯ, ಕನ್ನಡ & ಸಂಸ್ಕೃತಿ ಖಾತೆ ಹಂಚಿಕೆ ಮಾಡಲಾಗಿದೆ.
ಪಟ್ಟಿಯಲ್ಲಿ ಸಚಿವರ ಖಾತೆಗಳು ಹೀಗಿವೆ:
1. ಜೆ.ಸಿ.ಮಾಧುಸ್ವಾಮಿ -ವೈದ್ಯಕೀಯ ಶಿಕ್ಷಣ ಇಲಾಖೆ
2. ಜೆ.ಸಿ.ಮಾಧುಸ್ವಾಮಿ -ಹಜ್ ಮತ್ತು ವಕ್ಫ್ ಖಾತೆ
3. ಎಂಟಿಬಿ ನಾಗರಾಜ್ -ಪೌರಾಡಳಿತ ಮತ್ತು ಸಕ್ಕರೆ ಖಾತೆ
4. ಕೆ.ಗೋಪಾಲಯ್ಯ -ಅಬಕಾರಿ ಖಾತೆ
5. ಆರ್.ಶಂಕರ್ -ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
6. ಕೆ.ಸಿ. ನಾರಾಯಣಗೌಡ -ಯುವ ಸಬಲೀಕರಣ & ಕ್ರೀಡೆ
ಯೋಜನೆ, ಸಾಂಖ್ಯಿಕ & ಕಾರ್ಯಕ್ರಮ ಅನುಷ್ಠಾನ
7. ಅರವಿಂದ ಲಿಂಬಾವಳಿ -ಅರಣ್ಯ, ಕನ್ನಡ & ಸಂಸ್ಕೃತಿ ಖಾತೆ
ಅಬಕಾರಿಯಲ್ಲಿ ಮಾಡೋಕೆ ಏನಿದೆ?: ಚಿಯರ್ಸ್ ಹೇಳದೆ.. ಅಸಮಾಧಾನದ ಬುಗ್ಗೆ ಚಿಮ್ಮಿಸಿದ MTB ನಾಗರಾಜ್
Published On - 2:13 pm, Fri, 22 January 21