ನಿಯಮ ಉಲ್ಲಂಘನೆ ಆಗಿಲ್ಲ, ಥ್ಯಾಂಕ್ಸ್ ಕುಮಾರಸ್ವಾಮಿ: ಸಿಎಂ ಯಡಿಯೂರಪ್ಪ!

ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಲಾಕ್​ಡೌನ್ 2.0 ಜಾರಿಯಲ್ಲಿರುವಾಗ ಸೋಮವಾರದಿಂದ ರಾಜ್ಯದಲ್ಲಿ ಏನೆಲ್ಲ ಸೇವೆಗಳು ಇರುತ್ತವೆ. ಯಾವ ಕ್ಷೇತ್ರಗಳು ಕಾರ್ಯಗತವಾಗಬಹುದು ಎಂಬುದರ ಬಗ್ಗೆ ಸರ್ಕಾರದ ನಿರ್ಧಾರವನ್ನು ತಿಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಇದೀಗತಾನೆ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪುತ್ರನ ವಿವಾಹ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ ಯಡಿಯೂರಪ್ಪ, ಅವರ ಕುಟುಂಬ ಅತ್ಯಂತ ದೊಡ್ಡ ಕುಟುಂಬ. ಸರ್ಕಾರದಿಂದ ಅನುಮತಿ‌ ಪಡೆದು ಮದುವೆ ಮಾಡಿದ್ದಾರೆ. ಅನುಮತಿಯಂತೆ ಅತ್ಯಂತ ಕಡಿಮೆ ಜನರು ಭಾಗವಹಿಸಿದ್ದರು. ಯಾವುದೇ ನಿಯಮ […]

ನಿಯಮ ಉಲ್ಲಂಘನೆ ಆಗಿಲ್ಲ, ಥ್ಯಾಂಕ್ಸ್ ಕುಮಾರಸ್ವಾಮಿ: ಸಿಎಂ ಯಡಿಯೂರಪ್ಪ!

Updated on: Apr 18, 2020 | 3:17 PM

ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಲಾಕ್​ಡೌನ್ 2.0 ಜಾರಿಯಲ್ಲಿರುವಾಗ ಸೋಮವಾರದಿಂದ ರಾಜ್ಯದಲ್ಲಿ ಏನೆಲ್ಲ ಸೇವೆಗಳು ಇರುತ್ತವೆ. ಯಾವ ಕ್ಷೇತ್ರಗಳು ಕಾರ್ಯಗತವಾಗಬಹುದು ಎಂಬುದರ ಬಗ್ಗೆ ಸರ್ಕಾರದ ನಿರ್ಧಾರವನ್ನು ತಿಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಇದೀಗತಾನೆ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ, ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪುತ್ರನ ವಿವಾಹ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ ಯಡಿಯೂರಪ್ಪ, ಅವರ ಕುಟುಂಬ ಅತ್ಯಂತ ದೊಡ್ಡ ಕುಟುಂಬ. ಸರ್ಕಾರದಿಂದ ಅನುಮತಿ‌ ಪಡೆದು ಮದುವೆ ಮಾಡಿದ್ದಾರೆ. ಅನುಮತಿಯಂತೆ ಅತ್ಯಂತ ಕಡಿಮೆ ಜನರು ಭಾಗವಹಿಸಿದ್ದರು. ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಲಾಕ್‌ಡೌನ್ ಪಾಲಿಸಿದ್ದಕ್ಕೆ ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.

Published On - 3:15 pm, Sat, 18 April 20