ವಿಜಯಪುರ: ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಕೊನೆಗೂ ಕಾಲ ಕೂಡಿಬಂದಿದ್ದು, ಇಂದು (ಫೆಬ್ರವರಿ 15) ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ತಾಲೂಕಿನ ಬುರಣಾಪುರ ಮದಬಾವಿ ಗ್ರಾಮಗಳ ಮಧ್ಯೆ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಯಡಿಯೂರಪ್ಪರವರು ಚಾಲನೆ ನೀಡುತ್ತಾರೆ.
2010ರಲ್ಲಿ ಅಂದಿನ ಸಿಎಂ ಆಗಿದ್ದ ವೇಳೆ ಯಡಿಯೂರಪ್ಪರವರೇ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ಮಾಡಿದ್ದರು. ಸದ್ಯ ಹನ್ನೊಂದು ವರ್ಷಗಳ ನಂತರ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗುತ್ತಿದೆ. ಕಾಮಗಾರಿ ತ್ವರಿತ ಗತಿಯಲ್ಲಿ ಮಾಡಿ ಲೋಹದ ಹಕ್ಕಿಗಳು ಹಾರುವಂತೆ ಮಾಡಬೇಕೆಂದು ಜಿಲ್ಲೆಯ ಜನರು ಒತ್ತಾಯಿಸುತ್ತಿದ್ದಾರೆ. ಚಾಲನೆ ವೇಳೆ ಡಿಸಿಎಂ ಗೋವಿಂದ ಕಾರಕೋಳ, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಇತರರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಅಧ್ಯಕ್ಷ ಪಟ್ಟ ಬಿಟ್ಟು ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ.. ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಪಟ್ಟು ಹಿಡಿದ ನಲಪಾಡ್