Kisan Samman Yojana | ಯೋಜನೆಯಲ್ಲಿ ಭಾರಿ ಅಕ್ರಮ, 85 ಸಾವಿರ ಖಾತೆಗಳು ಕಂಪ್ಲೀಟ್ ಬ್ಲಾಕ್, ಬೆಂಗಳೂರು ಸೈಬರ್ ಠಾಣೆಗೆ ದೂರು
Kisan Samman Yojana | ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್ ತೆರೆದು ವಂಚನೆ ಮಾಡಲಾಗುತ್ತಿದೆ ಎಂಬ ಬಗ್ಗೆ ಸುಳಿವು ಸಿಕ್ಕಿದೆ. ಕಿಸಾನ್ ಸಮ್ಮಾನ್ ಯೋಜನೆಯ ಪೋರ್ಟಲ್ನಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ರಾಜ್ಯ ಕೃಷಿ ಇಲಾಖೆ ಪತ್ತೆ ಹಚ್ಚಿದೆ.
ಬೆಂಗಳೂರು: ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್ ತೆರೆದು ವಂಚನೆ ಮಾಡಲಾಗುತ್ತಿದೆ ಎಂಬ ಬಗ್ಗೆ ಸುಳಿವು ಸಿಕ್ಕಿದೆ. ಕಿಸಾನ್ ಸಮ್ಮಾನ್ ಯೋಜನೆಯ ಪೋರ್ಟಲ್ನಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ರಾಜ್ಯ ಕೃಷಿ ಇಲಾಖೆ ಪತ್ತೆ ಹಚ್ಚಿದೆ.
ವಂಚಕರ ಅಕ್ರಮ ಬಯಲು ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್ ತೆರೆದು ಕಿಸಾನ್ ಸಮ್ಮಾನ್ ಯೋಜನೆ ಪೋರ್ಟಲ್ನಲ್ಲಿ ಅಕ್ರಮ ನಡೆಸಲಾಗುತ್ತಿದೆ. ಚಿತ್ರದುರ್ಗ, ಬೀದರ್ ವ್ಯಾಪ್ತಿಯಲ್ಲಿ ರುಬಿಯಾ ಖಾತುನ್ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಇದರ ಮೂಲಕ ಸಾವಿರಾರು ಬಾರಿ ಕೃಷಿ ಇಲಾಖೆಗೆ ಹಣಕ್ಕಾಗಿ ಮನವಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಹೊರ ರಾಜ್ಯದ ಬ್ಯಾಂಕ್ ಅಕೌಂಟ್ ಪತ್ತೆಯಾಗಿದೆ. ಪ.ಬಂಗಾಳದ ದಿನಾಜ್ಪುರ್ ಖಾತೆ, ಐಎಫ್ಎಸ್ಸಿ ಕೋಡ್, ಬಿಹಾರದ ಪೂರ್ನಿಯಾದ ಖಾತೆ, ಐಎಫ್ಎಸ್ಸಿ ಕೋಡ್ ಪತ್ತೆಯಾಗಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ 85 ಸಾವಿರ ಖಾತೆಗಳು ನಕಲಿ? ಇನ್ನು ಸುಮಾರು 85 ಸಾವಿರ ಖಾತೆಗಳ ಮೇಲೆ ಕೃಷಿ ಇಲಾಖೆಗೆ ಶಂಕೆ ವ್ಯಕ್ತವಾಗಿದೆ. ಕೂಡಲೇ ಈ ಬಗ್ಗೆ ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 85 ಸಾವಿರ ಶಂಕಿತ ಖಾತೆಗಳು ಕಂಪ್ಲೀಟ್ ಬ್ಲಾಕ್ ಮಾಡಲಾಗಿದೆ. ಬಿಹಾರ, ಉತ್ತರಪ್ರದೇಶ, ಬಂಗಾಳದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಅನುಮಾನ ಅಧಿಕಾರಿಗಳು ಹುಟ್ಟಿದೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಕೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಅರ್ಧದಷ್ಟು ರೈತರಿಗೆ ಮಾತ್ರವೇ ಕಿಸಾನ್ ‘ಸಮ್ಮಾನ್’! ಏನಾಯ್ತು ಮೋದಿ ಮಹತ್ವಾಕಾಂಕ್ಷೆ ಯೋಜನೆ?
Published On - 10:03 am, Mon, 15 February 21