ಅಧ್ಯಕ್ಷ ಪಟ್ಟ ಬಿಟ್ಟು ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ.. ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಪಟ್ಟು ಹಿಡಿದ ನಲಪಾಡ್

ಅಧ್ಯಕ್ಷ ಪಟ್ಟ ಬಿಟ್ಟು ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ.. ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಪಟ್ಟು ಹಿಡಿದ ನಲಪಾಡ್
ಡಿಕೆ ಶಿವಕುಮಾರ್, ಮಹಮ್ಮದ್ ನಲಪಾಡ್

Karnataka Youth Congress Presidentship | ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟದ ಗೊಂದಲ ಇನ್ನೂ ಬಗೆಹರಿದಿಲ್ಲ. ಅಧ್ಯಕ್ಷ ಗಿರಿ ಬೇಕೆ ಬೇಕು ಎಂದು ನಲಪಾಡ್ ಹ್ಯಾರಿಸ್ ಪಟ್ಟು ಹಿಡಿದಿದ್ದಾರೆ. ಅಧ್ಯಕ್ಷ ಪಟ್ಟ ಬಿಟ್ಟು ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದು ತಮ್ಮ ನಿಲುವನ್ನು ತಿಳಿಸಿದ್ದಾರೆ.

Ayesha Banu

|

Feb 15, 2021 | 8:27 AM

ಬೆಂಗಳೂರು: ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟದ ಗೊಂದಲ ಇನ್ನೂ ಬಗೆಹರಿದಿಲ್ಲ. ಅಧ್ಯಕ್ಷ ಗಿರಿ ಬೇಕೆ ಬೇಕು ಎಂದು ನಲಪಾಡ್ ಹ್ಯಾರಿಸ್ ಪಟ್ಟು ಹಿಡಿದಿದ್ದಾರೆ. ಅಧ್ಯಕ್ಷ ಪಟ್ಟ ಬಿಟ್ಟು ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದು ತಮ್ಮ ನಿಲುವನ್ನು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ, ಕಡಿಮೆ ಮತಗಳು ಪಡೆದರೂ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ರಕ್ಷಾ ರಾಮಯ್ಯ ಅವರು ಈಗ ಯುವ ಕಾಂಗ್ರೆಸ್ ಚುನಾವಣೆ ಮತದಾನದಲ್ಲಿ ನಡೆದಿದ್ದ ಮತಗಳ ಮರು ಎಣಿಕೆ ನಡೆಯಲಿ. ಕಡಿಮೆ ಮತ ಪಡೆದಿದ್ದರೂ ವಿಜೇತ ಅಭ್ಯರ್ಥಿ ಎಂದು ಘೋಷಣೆಯಾದೆ. ಆದರೆ ನನಗೆ ಹೆಚ್ಚಿನ‌ ಮತ ಪಡೆದಿರುವ ವಿಶ್ವಾಸವಿದೆ. ಹಾಗಾಗಿ ಮತಗಳ ಮರು ಎಣಿಕೆ ನಡೆಯಲಿ ಎಂದು ರಕ್ಷ ರಾಮಯ್ಯ ಮನವಿ ಮಾಡಿದ್ದರು.

ಅದರಂತೆ ಫೇಮ್ ಸಂಸ್ಥೆ ಮೂಲಕ ಮರು ಮತ ಎಣಿಕೆ ನಡೆಸಲು ಎಐಸಿಸಿ ಒಪ್ಪಿಗೆ ನೀಡಿದ್ದು. ಫೆಬ್ರವರಿ 20 ಮತ್ತು 21 ರಂದು ಮರು ಮತ ಎಣಿಕೆ ನಡೆಯಲಿದೆ. ಈ ಮಧ್ಯೆ ಅಭ್ಯರ್ಥಿಗಳಾಗಿದ್ದ ರಕ್ಷಾ ರಾಮಯ್ಯ, ನಲಪಾಡ್ ಹ್ಯಾರಿಸ್ ಹಾಗೂ ಎನ್ ಎಸ್ ಮಂಜುನಾಥ್ ವಿರುದ್ಧ ಸಮರ ಶುರುವಾಗಿದೆ. ಅಧ್ಯಕ್ಷ ಗಿರಿ ಬೇಕೆ ಬೇಕು ಎಂದು ನಲಪಾಡ್ ಪಟ್ಟು ಹಿಡಿದಿದ್ದು ಆ ಸ್ಥಾನಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡಲ್ಲ ಇತಿಹಾಸದಲ್ಲಿ ಯಾರು ಪಡೆಯದಷ್ಟು ಮತ ಪಡೆದಿದ್ದೇನೆ. 64,203 ಮತ ಬಂದಿದೆ. ಮತದಾರರು ನನಗೆ ಅಧ್ಯಕ್ಷನಾಗಲೆಂದೇ ಮತ ಹಾಕಿದ್ದಾರೆ. ಕಾಂಗ್ರೆಸ್ ನನಗೆ ತಾಯಿ ಇದ್ದಂತೆ ನನಗೆ ಅನ್ಯಾಯವಾಗಲ್ಲ ಎಂದು ಭಾವಿಸಿದ್ದೇನೆ. ಅಧ್ಯಕ್ಷ ಸ್ಥಾನ ಸಿಗದಿದ್ದರೆ ಕಾರ್ಯಕರ್ತನಾಗಿರುತ್ತೇನೆ. ಯಾವುದೇ ಕಾರಣಕ್ಕೂ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡಲ್ಲ ಎಂದು ನಲಪಾಡ್ ಹ್ಯಾರಿಸ್ ತಿಳಿಸಿದ್ದಾರೆ.

ಇನ್ನು ಮತ್ತೊಂದು ಕಡೆ ರಕ್ಷ ರಾಮಯ್ಯ ಸಹ ಅಧ್ಯಕ್ಷ ಸ್ಥಾನ ಬಿಟ್ಟು ಕೊಡ್ತಿಲ್ಲ. 57,271 ಸಾವಿರ ಮತ ಪಡೆದಿರುವ ರಕ್ಷ ರಾಮಯ್ಯ ಮರು ಎಣಿಕೆ ಮಾಡಿದ್ರೆ ನನ್ನ ಜಯ ಪಕ್ಕಾ ಎಂದು ಮರು ಮತ ಎಣಿಕೆಗೆ ಒತ್ತಾಯಿಸಿದ್ದಾರೆ. ಅನರ್ಹ ಹಿನ್ನೆಲೆಯಲ್ಲಿ ನಲಪಾಡ್ ಈಗಾಗಲೇ ಮೂರು ಭಾರಿ ಡಿಕೆ ಶಿವಕುಮಾರ್​ರನ್ನು ಭೇಟಿಯಾಗಿದ್ದಾರೆ. ರಕ್ಷ ರಾಮಯ್ಯ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಾರೆ. ಮತದಾನ ವೇಳೆಯು ಪರೋಕ್ಷವಾಗಿ ಸಿದ್ದರಾಮಯ್ಯ ರಕ್ಷ ರಾಮಯ್ಯ ಪರ ಇದ್ದರು. ಹೀಗಾಗಿ ನಲಪಾಡ್ ಡಿ.ಕೆ.ಶಿವಕುಮಾರ್ ಮೊರೆ ಹೋಗಿದ್ದಾರೆ.

ಚುನಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ತೀವ್ರ ಅಸಮಾಧಾನ ರಾಹುಲ್‌ ಗಾಂಧಿಗೆ ಈಗಾಗಲೇ ಈ ಬಗ್ಗೆ ಹೇಳಿದ್ದೇನೆ. ನೀವು ಸಹ ರಾಹುಲ್‌ ಗಾಂಧಿಗೆ ಹೋಗಿ ಹೇಳಿ ಎಂದು ಅಪ್ತ ನಾಯಕರಿಗೆ ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ಒತ್ತಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲ ಅಂದ್ರೆ ಸಮಸ್ಯೆ ಬಗೆಹರಿಯುವುದಿಲ್ಲ. ನಾನು ಮೊದಲೇ ಹೇಳಿದ್ದೆ ಯುವ ಕಾಂಗ್ರೆಸ್ ಚುನಾವಣೆ ನ್ಯಾಯಯುತವಾಗಿ ನಡೆಯುವುದಿಲ್ಲ ಎಂದು. ಎಲ್ಲಾ ಚುನಾವಣೆ ಹೀಗೆ ನಡೆಸುವುದಾದ್ರೆ ಸಾರ್ವತ್ರಿಕ ಚುನಾವಣೆ ಸಹ ಇದೇ ರೀತಿಯಾಗಿ ನಡೆಯಲಿ ಎಂದು ಹಿರಿಯ ನಾಯಕರೊಬ್ಬರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಗೊಂದಲದ ಗೂಡಾದ ಕರ್ನಾಟಕ ಯುವ ಕಾಂಗ್ರೆಸ್ ಚುನಾವಣೆ: ಮರು ಮತ ಎಣಿಕೆಗೆ ಸೂಚಿಸಿದ AICC!

Follow us on

Related Stories

Most Read Stories

Click on your DTH Provider to Add TV9 Kannada