ಬೇರೆ ಹುಡುಗನ ಜೊತೆ ವಿವಾಹ ನಿಶ್ಚಯ.. ಪ್ರೇಮಿಗಳ ದಿನದಂದೇ ನೇಣಿಗೆ ಕೊರಳೊಡ್ಡಿ ಯುವ ಪ್ರೇಮಿಗಳು ಆತ್ಮಹತ್ಯೆ

ಬೇರೆ ಹುಡುಗನ ಜೊತೆ ವಿವಾಹ ನಿಶ್ಚಯ.. ಪ್ರೇಮಿಗಳ ದಿನದಂದೇ ನೇಣಿಗೆ ಕೊರಳೊಡ್ಡಿ ಯುವ ಪ್ರೇಮಿಗಳು ಆತ್ಮಹತ್ಯೆ
ಅತ್ತೆ ಸೊಸೆ ಕಿತ್ತಾಟ: ಸೊಸೆಗೆ ಚಾಕುವಿನಿಂದ ಚುಚ್ಚಿದ್ದ ಅತ್ತೆ, ಸೊಸೆ ಸತ್ತಳೆಂದು ಅಂಜಿ ನೇಣಿಗೆ ಶರಣು

ಮಾರ್ಚ್ 8ರಂದು ಬೇರೆ ಹುಡುಗ ಜೊತೆ ಮಾಸಾಬಿಗೆ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಇದನ್ನು ತಡೆಯಲು ಅಥವಾ ವಿರೋಧಿಸಲಾಗದ ಪ್ರೇಮಿಗಳು ಸಾಯುವ ನಿರ್ಧಾರ ಮಾಡಿದ್ದಾರೆ. ಕುಟುಂಬಸ್ಥರ ನಿರ್ಧಾರಕ್ಕೆ ಮನನೊಂದ ಆಸೀಫ್, ಮಾಸಾಬಿ ಪ್ರೇಮಿಗಳ ದಿನದಂದೇ ನೇಣಿಗೆ ಕೊರಳೊಡ್ಡಿ ಸಾವಿನಲ್ಲಿ ಜೊತೆಯಾಗಿದ್ದಾರೆ.

Ayesha Banu

| Edited By: Rashmi Kallakatta

Feb 15, 2021 | 11:05 AM

ಬೆಳಗಾವಿ: ಪ್ರೇಮಿಗಳ ದಿನದಂದೇ ಪ್ರೇಮಿಗಳಿಬ್ಬರು ನೇಣಿಗೆ ಕೊರಳೊಡ್ಡಿ ಸಾವಲ್ಲಿ ಒಂದಾದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಟ್ರ್ಯಾಕ್ಟರ್ ಶೆಡ್‌ನಲ್ಲಿ ನಡೆದಿದೆ. ಆಸೀಫ್ ಜವಳಿ(21), ಮಾಸಾಬಿ(19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಯುವ ಪ್ರೇಮಿಗಳ ಪ್ರೀತಿಗೆ ಕುಟುಂಬದಲ್ಲಿ ವಿರೋಧವಿದ್ದ ಕಾರಣ ಆಸೀಫ್ ಮತ್ತು ಮಾಸಾಬಿ ಟ್ರ್ಯಾಕ್ಟರ್ ಶೆಡ್​ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ಸಂಜೆಯೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಕೆಲ ದಿನಗಳಿಂದ ಆಸೀಫ್ ಮತ್ತು ಮಾಸಾಬಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಒಬ್ಬರನೊಬ್ಬರು ಬಿಟ್ಟು ಇರಲಾರದಷ್ಟು ಹಚ್ಚಿಕೊಂಡಿದ್ದರು. ಆದ್ರೆ ಮಾಸಾಬಿ ಮನೆಯಲ್ಲಿ ಇವರ ಪ್ರೀತಿ ಒಪ್ಪಿಕೊಳ್ಳುವ ಪರಿಸ್ಥಿತಿ ಇರಲಿಲ್ಲ. ಇವರಿಬ್ಬರ ಪ್ರೀತಿ ವಿಷಯ ತಿಳಿಯುತ್ತಿದ್ದಂತೆ ಮಾಸಾಬಿ ಮನೆಯವರು ಆಕೆಯನ್ನು ಬೇರೆ ಹುಡುಗನ ಜೊತೆ ಮದುವೆ ಮಾಡಲು ಮುಂದಾಗಿದ್ದರು. ಮಾಸಾಬಿಗೆ ಬೇರೆ ಹುಡುಗನ ಜೊತೆ ವಿವಾಹ ನಿಶ್ಚಯ ಮಾಡಿದ್ರು.

ಮಾರ್ಚ್ 8ರಂದು ಬೇರೆ ಹುಡುಗ ಜೊತೆ ಮಾಸಾಬಿಗೆ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಇದನ್ನು ತಡೆಯಲು ಅಥವಾ ವಿರೋಧಿಸಲಾಗದ ಪ್ರೇಮಿಗಳು ಸಾಯುವ ನಿರ್ಧಾರ ಮಾಡಿದ್ದಾರೆ. ಕುಟುಂಬಸ್ಥರ ನಿರ್ಧಾರಕ್ಕೆ ಮನನೊಂದ ಆಸೀಫ್, ಮಾಸಾಬಿ ಪ್ರೇಮಿಗಳ ದಿನದಂದೇ ನೇಣಿಗೆ ಕೊರಳೊಡ್ಡಿ ಸಾವಿನಲ್ಲಿ ಜೊತೆಯಾಗಿದ್ದಾರೆ.

ಪ್ರೀತಿ ಇದ್ದ ಕಡೆ ಅದಕ್ಕೆ ವಿರೋಧ ಸಹ ಇರುತ್ತೆ. ಆದ್ರೆ ಒಮ್ಮೆ ಪ್ರೀತಿ ಮಾಡಿದ ಮೇಲೆ ಎಲ್ಲವನ್ನು ಹಿಮ್ಮೆಟ್ಟಿ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಬೇಕು. ಅದನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಏನೂ ಪ್ರಯೋಜನವಾಗಲ್ಲ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Follow us on

Related Stories

Most Read Stories

Click on your DTH Provider to Add TV9 Kannada