Hyderabad: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳ ಸಾವು
swimming students death: ಕೆರೆಯಲ್ಲಿ ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆಮುಡುಗುಂಟ ಗ್ರಾಮದ ಬಳಿ ಸಂಭವಿಸಿದೆ. ಮೃತರು ರಾಜೇಶ್(13), ಸಾಯಿ(13) ಮತ್ತು ಹಲೀಮ್(13) ಎಂದು ಗುರುತಿಸಲಾಗಿದೆ.
ಹೈದರಾಬಾದ್: ಕೆರೆಯಲ್ಲಿ ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆಮುಡುಗುಂಟ ಗ್ರಾಮದ ಬಳಿ ಸಂಭವಿಸಿದೆ. ಮೃತರು ರಾಜೇಶ್(13), ಸಾಯಿ(13) ಮತ್ತು ಹಲೀಮ್(13) ಎಂದು ಗುರುತಿಸಲಾಗಿದೆ. ವಾರಾಂತ್ಯ ಭಾನುವಾರ ಸಂಜೆ ಸೈಕಲ್ ತುಳಿದುಕೊಂಡು ಕೆರೆಗೆ ಈಜಲೆಂದು ಹೋಗಿದ್ದರು. ಈಜಲೆಂದು ಕೆರೆಯಲ್ಲಿ ಇಳಿದಾಗ ನೀರಲ್ಲಿ ಮುಳುಗಿ ಮೂವರೂ ಕಣ್ಮರೆಯಾಗಿದ್ದರು. ಇಂದು ಬೆಳಗ್ಗೆ ಮೂವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಮೃತ ದೇಹಗಳನ್ನು ಈಜುಗಾರರು ಪತ್ತೆ ಮಾಡಿ ದಡಕ್ಕೆ ತಂದಿದ್ದಾರೆ.
ಇದನ್ನೂ ಓದಿ: Firing ಬೇಗೂರಿನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಚೇಸ್ ಮಾಡಿ.. ರೌಡಿಶೀಟರ್ ಮೇಲೆ ಖಾಕಿ ಫೈರಿಂಗ್
Published On - 10:15 am, Mon, 15 February 21