Petrol Price: ಶತಕದ ಹಾದಿಯತ್ತ ಪೆಟ್ರೋಲ್ ದರ.. 26 ಪೈಸೆ ಹೆಚ್ಚಳ

Petrol Diesel Rate: ಇಂದು ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 26 ಪೈಸೆ ಏರಿಕೆ ಹಾಗೂ ಲೀಟರ್ ಡೀಸೆಲ್ ಬೆಲೆ 29 ಪೈಸೆಯಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ ಲೀ. ಪೆಟ್ರೋಲ್​ ಬೆಲೆ ₹ 91.95 ಹಾಗೂ ಡೀಸೆಲ್ ₹84.10 ಆಗಿದೆ.

Petrol Price: ಶತಕದ ಹಾದಿಯತ್ತ ಪೆಟ್ರೋಲ್ ದರ.. 26 ಪೈಸೆ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
| Updated By: Digi Tech Desk

Updated on:Feb 17, 2021 | 8:55 AM

ಬೆಂಗಳೂರು: ಸತತ 7ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯತ್ತ ಮುಖಮಾಡಿದೆ. ದೆಹಲಿಯಲ್ಲಿ ಇಂದು ಲೀಟರ್ ಪೆಟ್ರೋಲ್ ಬೆಲೆ 26 ಪೈಸೆ ಏರಿಕೆ ಕಂಡಿದೆ. ಲೀಟರ್ ಡೀಸೆಲ್ ಬೆಲೆ 29 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ಹಲವು ದಿನಗಳಿಂದ ಬೆಲೆ ಏರಿಕೆಯತ್ತ ಸಾಗುತ್ತಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ನಿಲ್ಲದ ಬೆಲೆ ಏರಿಕೆಯಿಂದ ದರ ಶತಕ ಬಾರಿಸುವ ನಿರೀಕ್ಷೆಗೆ ಸಂದೇಹವೇ ಇಲ್ಲ ಎಂಬುದಾಗಿ ಜನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ದೆಹಲಿಯಲ್ಲಿ ಪ್ರತಿ ಲೀ. ಪೆಟ್ರೋಲ್​ ಬೆಲೆ ₹88.99 ಹಾಗೂ ಡೀಸೆಲ್ ದರ ಪ್ರತಿ ಲೀ.ಗೆ ₹79.35.

ಬೆಂಗಳೂರಿನಲ್ಲೂ ಪೆಟ್ರೋಲ್​ ಬೆಲೆ ಏರಿಕೆ ಕಂಡಿದ್ದು, ಇಂದಿನ ಪೆಟ್ರೋಲ್​ ಬೆಲೆ ₹ 91.95 ಹಾಗೂ ಡೀಸೆಲ್ ₹84.10 ಆಗಿದೆ. ಸತತ ತೈಲ ಬೆಲೆ ಏರಿಕೆ ಜನರ ನಿದ್ದೆ ಕೆಡಿಸುತ್ತಿದೆ. ಮುಂಬೈನಲ್ಲೂ ಕೂಡಾ ದರ ಹೆಚ್ಚಳವಾಗಿದ್ದು, ಪ್ರತಿ ಲೀ. ಪೆಟ್ರೋಲ್​ ₹95.44 ಹಾಗೂ ಡೀಸೆಲ್ ದರ ₹86.33 ಆಗಿದೆ. ಕೋಲ್ಕತ್ತದಲ್ಲಿ ಪ್ರತಿ ಲೀ. ಪೆಟ್ರೋಲ್​ ಬೆಲೆ ₹90.24 ಹಾಗೂ ಡೀಸೆಲ್ ₹82.92 ಆಗಿದೆ. ಚೆನ್ನೈನಲ್ಲಿ ಪ್ರತಿ ಲೀ. ಪೆಟ್ರೋಲ್​ ₹91.17 ಹಾಗೂ ಡೀಸೆಲ್ 84.42 ಆಗಿದೆ.  ಪ್ರತಿ ದಿನ ಏರಿಕೆಯತ್ತ ಮುಖ ಮಾಡುತ್ತಿರುವ ತೈಲದ ಬೆಲೆಯಿಂದ ಜನರು ಬೇಸತ್ತಿದ್ದಾರೆ. ಸತತವಾಗಿ 7ನೇ ದಿನವೂ ಬೆಲೆ ಏರಿಕೆಯನ್ನು ನೋಡಿದರೆ ಪ್ರತಿ ಲೀ.ಬೆಲೆ ಶತಕ ಬಾರಿಸುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

ಇದನ್ನೂ ಓದಿ: Petrol Price Today: ಸತತ 6ನೇ ದಿನವೂ ಏರಿಕೆ ಕಂಡ ಪೆಟ್ರೋಲ್ ದರ; 29 ಪೈಸೆ ಹೆಚ್ಚಳ

ತೈಲದ ಏರಿಕೆಯು ಜನ ಜೀವನದ ಮೇಲೆ ಅತಿಯಾಗಿ ಪರಿಣಾಮ ಬೀರಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲದ ದರ ಏರಿಕೆ ಕಂಡಂತೆಯೇ ದೇಶೀಯ ಮಾರುಕಟ್ಟೆಯಲ್ಲೂ ಕೂಡಾ ದರ ಏರಿಕೆಯಾಗುತ್ತದೆ. ನಿರಂತರವಾಗಿ ದರ ಏರಿಕೆಯತ್ತ ಜಿಗಿಯುತ್ತಿರುವುದು ಗ್ರಾಹಕರನ್ನು ಕಂಗಾಲುಗೆಡಿಸಿದೆ.

Published On - 8:27 am, Mon, 15 February 21