Firing ಬೇಗೂರಿನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಚೇಸ್ ಮಾಡಿ.. ರೌಡಿಶೀಟರ್ ಮೇಲೆ ಖಾಕಿ ಫೈರಿಂಗ್

Firing: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿರುವ ಘಟನೆ ವರದಿಯಾಗಿದೆ. ಕಾಲಿಗೆ ಗುಂಡಿಕ್ಕಿ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ರೌಡಿಶೀಟರ್ ಮದನ್ ಕಾಲಿಗೆ ಖಾಕಿ ಪಡೆ ಗುಂಡು ಹೊಡೆದಿದೆ.

  • TV9 Web Team
  • Published On - 19:38 PM, 14 Feb 2021
Firing ಬೇಗೂರಿನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಚೇಸ್ ಮಾಡಿ.. ರೌಡಿಶೀಟರ್ ಮೇಲೆ ಖಾಕಿ ಫೈರಿಂಗ್
ರೌಡಿಶೀಟರ್‌ ಮದನ್​(ಎಡ); PSI ಈಶ್ವರ್‌ (ಬಲ)

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿರುವ ಘಟನೆ ವರದಿಯಾಗಿದೆ. ಕಾಲಿಗೆ ಗುಂಡಿಕ್ಕಿ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ರೌಡಿಶೀಟರ್ ಮದನ್ ಕಾಲಿಗೆ ಖಾಕಿ ಪಡೆ ಗುಂಡು ಹೊಡೆದಿದೆ. ಮದನ್​ನನ್ನು ಬರೋಬ್ಬರಿ 4 ಕಿಲೋ ಮೀಟರ್ ಚೇಸ್ ಮಾಡಿದ ಪೊಲೀಸರು ರೌಡಿ ಶೀಟರ್​ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ. ಬೇಗೂರಿನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮದನ್​ನನ್ನು ಪೊಲೀಸರು ಚೇಸ್ ಮಾಡಿದ್ದಾರೆ.

ಏನಿದು ಪ್ರಕರಣ?
ಕೊಲೆ, ಸುಲಿಗೆ ಸೇರಿ 14ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಮದನ್​ನನ್ನು ಪೊಲೀಸರು ಅರೆಸ್ಟ್​ ಮಾಡಲು ಮುಂದಾಗಿದ್ದರು. ರೌಡಿ ಶೀಟರ್​ನನ್ನು ಬಂಧಿಸುವಾಗ ಕಾನ್ಸ್‌ಟೇಬಲ್‌ ರವಿಕುಮಾರ್‌ ಮೇಲೆ ಮದನ್​ ಹಲ್ಲೆಗೈದು ಪರಾರಿಯಾಗಿದ್ದ.

ಈ ವೇಳೆ, ಆರೋಪಿಯನ್ನು ಚೇಸ್​ ಮಾಡಿದ ಬೇಗೂರು ಠಾಣೆ PSI ಈಶ್ವರ್‌ ಆತ್ಮರಕ್ಷಣೆಗಾಗಿ ಫೈರಿಂಗ್‌ ಮಾಡಿದ್ದಾರೆ. ಕಾಲಿಗೆ ಗುಂಡಿಕ್ಕಿ ರೌಡಿ ಶೀಟರ್ ಮದನ್‌ನನ್ನ ಬಂಧಿಸಿದ್ದಾರೆ. ಸದ್ಯ, ಗಾಯಾಳು ರೌಡಿ ಶೀಟರ್​ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: 30 ವರ್ಷಗಳಿಂದಲೂ ಶ್ವಾಸನಾಳದ ಅಸ್ತಮಾದಿಂದ ಬಳಲುತ್ತಿದ್ದಾರೆ ಖ್ಯಾತ ನಟಿ ಕಾಜಲ್​ ಅಗರ್​ವಾಲ್