ಗೊಂದಲದ ಗೂಡಾದ ಕರ್ನಾಟಕ ಯುವ ಕಾಂಗ್ರೆಸ್ ಚುನಾವಣೆ: ಮರು ಮತ ಎಣಿಕೆಗೆ ಸೂಚಿಸಿದ AICC!
recounting of karnataka youth congress president election ವಿಜೇತ ಅಭ್ಯರ್ಥಿ ರಕ್ಷಾ ರಾಮಯ್ಯ ಮನವಿಯಂತೆ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಮರು ಮತ ಎಣಿಕೆ ನಡೆಸಲು ಎಐಸಿಸಿ ಒಪ್ಪಿಗೆ ನೀಡಿದೆ. ಫೆಬ್ರವರಿ 20 ಮತ್ತು 21 ರಂದು ಮರು ಮತ ಎಣಿಕೆ ನಡೆಯಲಿದೆ.
ಬೆಂಗಳೂರು: ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಇತ್ತೀಚೆಗಷ್ಟೇ ಮುಗಿದಿದ್ದು, ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯೂ ಮುಗಿದಿದೆ. ಆದರೆ ಪ್ರಕ್ರಿಯೆಯು ಭಾರೀ ವಿವಾದಕ್ಕೆ ತುತ್ತಾಗಿದ್ದು, ಅದಿನ್ನೂ ತಿಳಿಯಾಗಿಲ್ಲ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು. ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ.. ಕಡಿಮೆ ಮತಗಳು ಪಡೆದರೂ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ರಕ್ಷಾ ರಾಮಯ್ಯ ಅವರು ಈಗ ಯುವ ಕಾಂಗ್ರೆಸ್ ಚುನಾವಣೆ ಮತದಾನದಲ್ಲಿ ನಡೆದಿದ್ದ ಮತಗಳ ಮರು ಎಣಿಕೆ ನಡೆಯಲಿ ಎಂದು ಮನವಿ ಮಾಡಿದ್ದಾರೆ.
ಕಡಿಮೆ ಮತ ಪಡೆದಿದ್ದರೂ ವಿಜೇತ ಅಭ್ಯರ್ಥಿ ಎಂದು ಘೋಷಣೆಯಾದೆ. ಆದರೆ ನನಗೆ ಹೆಚ್ಚಿನ ಮತ ಪಡೆದಿರುವ ವಿಶ್ವಾಸವಿದೆ. ಹಾಗಾಗಿ ಮತಗಳ ಮರು ಎಣಿಕೆ ನಡೆಯಲಿ ಎಂದು ರಕ್ಷ ರಾಮಯ್ಯ ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರವಾಗಿ ರಕ್ಷಾ ರಾಮಯ್ಯ ಮನವಿಯನ್ನು ಎಐಸಿಸಿ ಒಪ್ಪಿದೆ! ಫೇಮ್ ಸಂಸ್ಥೆ ಮೂಲಕ ಮರು ಮತ ಎಣಿಕೆ ನಡೆಸಲು ಎಐಸಿಸಿ ಒಪ್ಪಿಗೆ ನೀಡಿದೆ. ಫೆಬ್ರವರಿ 20 ಮತ್ತು 21 ರಂದು ಮರು ಮತ ಎಣಿಕೆ ನಡೆಯಲಿದೆ. ಈ ಮಧ್ಯೆ ಅಭ್ಯರ್ಥಿಗಳಾಗಿದ್ದ ರಕ್ಷಾ ರಾಮಯ್ಯ, ನಲಪಾಡ್ ಹ್ಯಾರಿಸ್ ಹಾಗೂ ಎನ್ ಎಸ್ ಮಂಜುನಾಥ್ ಅವರುಗಳಿಗೆ ದೆಹಲಿಗೆ ಬರುವಂತೆ ಎಐಸಿಸಿ ಬುಲಾವ್ ನೀಡಿದೆ.
Published On - 3:19 pm, Fri, 12 February 21