AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಧದಷ್ಟು ರೈತರಿಗೆ ಮಾತ್ರವೇ ಕಿಸಾನ್ ‘ಸಮ್ಮಾನ್’! ಏನಾಯ್ತು ಮೋದಿ ಮಹತ್ವಾಕಾಂಕ್ಷೆ ಯೋಜನೆ?

ದೆಹಲಿ: ಕಿಸಾನ್ ಸಮ್ಮಾನ್ ಯೋಜನೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅನ್ನದಾತರಿಗೆ ನೆರವಾಗುವ ಸಣ್ಣ ಮತ್ತು ಮಧ್ಯಮ ರೈತರಿಗೆ ಪ್ರತಿವರ್ಷ ಆರು ಸಾವಿರ ಹಣಕಾಸಿನ ನೆರವು ನೀಡುವ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ನಿನ್ನೆಯಷ್ಟೇ ರಾಜ್ಯಕ್ಕೆ ಆಗಮಿಸಿದ ನಮೋ ಕಲ್ಪತರು ನಾಡಲ್ಲಿ ನಿಂತು ದೇಶದ 6 ಕೋಟಿ ರೈತರ ಬ್ಯಾಂಕ್ ಖಾತೆಗೆ 12 ಸಾವಿರ ಕೋಟಿ ಹಣವನ್ನ ನೇರವಾಗಿ ವರ್ಗಾಯಿಸಿದ್ದಾರೆ. ಆದ್ರೆ ಎಲ್ಲಾ ಅರ್ಹ ರೈತರಿಗೂ ಯೋಜನೆಯ ಲಾಭ ಸಿಕ್ಕಿದೆಯಾ ಅಂದ್ರೆ ಅದಕ್ಕುತ್ತರ ಇಲ್ಲ ಅಂತಿವೆ ಅಂಕಿ ಅಂಶಗಳು. […]

ಅರ್ಧದಷ್ಟು ರೈತರಿಗೆ ಮಾತ್ರವೇ ಕಿಸಾನ್ ‘ಸಮ್ಮಾನ್’! ಏನಾಯ್ತು ಮೋದಿ ಮಹತ್ವಾಕಾಂಕ್ಷೆ ಯೋಜನೆ?
ಸಾಧು ಶ್ರೀನಾಥ್​
|

Updated on:Jan 03, 2020 | 4:36 PM

Share

ದೆಹಲಿ: ಕಿಸಾನ್ ಸಮ್ಮಾನ್ ಯೋಜನೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅನ್ನದಾತರಿಗೆ ನೆರವಾಗುವ ಸಣ್ಣ ಮತ್ತು ಮಧ್ಯಮ ರೈತರಿಗೆ ಪ್ರತಿವರ್ಷ ಆರು ಸಾವಿರ ಹಣಕಾಸಿನ ನೆರವು ನೀಡುವ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ನಿನ್ನೆಯಷ್ಟೇ ರಾಜ್ಯಕ್ಕೆ ಆಗಮಿಸಿದ ನಮೋ ಕಲ್ಪತರು ನಾಡಲ್ಲಿ ನಿಂತು ದೇಶದ 6 ಕೋಟಿ ರೈತರ ಬ್ಯಾಂಕ್ ಖಾತೆಗೆ 12 ಸಾವಿರ ಕೋಟಿ ಹಣವನ್ನ ನೇರವಾಗಿ ವರ್ಗಾಯಿಸಿದ್ದಾರೆ. ಆದ್ರೆ ಎಲ್ಲಾ ಅರ್ಹ ರೈತರಿಗೂ ಯೋಜನೆಯ ಲಾಭ ಸಿಕ್ಕಿದೆಯಾ ಅಂದ್ರೆ ಅದಕ್ಕುತ್ತರ ಇಲ್ಲ ಅಂತಿವೆ ಅಂಕಿ ಅಂಶಗಳು.

ಅರ್ಧದಷ್ಟು ರೈತರಿಗೆ ಮಾತ್ರ ಕಿಸಾನ್ ಸಮ್ಮಾನ್ ಹಣ! ನಮ್ಮ ದೇಶದಲ್ಲಿ ಒಟ್ಟು 14 ಕೋಟಿ ಮಂದಿ ಸಣ್ಣ ಮತ್ತು ಮಧ್ಯಮ ರೈತರಿದ್ದಾರೆ. ಇವರೆಲ್ಲರಿಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ವರ್ಗಾಯಿಸೋದು ಕೇಂದ್ರ ಸರ್ಕಾರದ ಗುರಿಯಾಗಿತ್ತು. ಆದ್ರೆ, ಯೋಜನೆ ಜಾರಿಯಾಗಿ ಎರಡು ವರ್ಷ ಕಳೆದ್ರೂ ಎಲ್ಲಾ ರೈತರಿಗೆ ಯೋಜನೆಯ ಲಾಭ ಸಿಕ್ಕಿಲ್ಲ.

ಮೀಸಲಿಟ್ಟ ಮತ್ತು ಕೊಟ್ಟ ಹಣ: ಅಂದ್ಹಾಗೆ 2019-20ರಲ್ಲಿ ಕಿಸಾನ್ ಸಮ್ಮಾನ್ ಯೋಜನೆಗಾಗಿ ಒಟ್ಟು 75 ಸಾವಿರ ಕೋಟಿ ಹಣವನ್ನ ಮೀಸಲಿಡಲಾಗಿತ್ತು. ಈ ಹಣದಲ್ಲಿ 2019ರ ಅಕ್ಟೋಬರ್​ವರೆಗೆ ಕೇವಲ 32 ಸಾವಿರದ 577 ಕೋಟಿ ಹಣವನ್ನ ವರ್ಗಾಯಿಸಲಾಗಿದೆ. ಅಂದ್ರೆ, ಸರಿ ಸುಮಾರು 43 ಪರ್ಸೆಂಟ್​ನಷ್ಟು ಹಣ ಮಾತ್ರ ಅನ್ನದಾತರ ಅಕೌಂಟ್​ಗಳಿಗೆ ಟ್ರಾನ್ಸ್​ಫರ್ ಆಗಿದೆ. ಉಳಿದ ಹಣವನ್ನ ನೀಡದಿರೋದಕ್ಕೆ ಬೇರೆ ಬೇರೆ ಕಾರಣಗಳಿವೆ.

ಈ ಯೋಜನೆಯು ಆಧಾರ್ ಸಂಖ್ಯೆ ಆಧರಿತವಾಗಿದೆ. ರೈತರು ತಮ್ಮ ಆಧಾರ್ ಸಂಖ್ಯೆ , ಜಮೀನಿನ ಪಹಣಿ, ಬ್ಯಾಂಕ್ ಖಾತೆಯ ದಾಖಲೆ ಕೊಟ್ಟು ಫಲಾನುಭವಿಗಳಾಗಬೇಕು. ಆದ್ರೆ ಈ ದಾಖಲೆಗಳನ್ನ ನೀಡುವುದೇ ದೊಡ್ಡ ಸಮಸ್ಯೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಇಂಟರ್​ನೆಟ್ ಸಂಪರ್ಕ ಸರಿಯಾಗಿರಲ್ಲ. ಜಮೀನಿನ ದಾಖಲೆ ಪತ್ರಗಳು ಸರಿ ಇರಲ್ಲ. ಹೀಗಾಗಿ ಎಲ್ಲಾ ರೈತರು ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕಂತಿನಿಂದ ಕಂತಿಗೆ ಫಲಾನುಭವಿಗಳ ಸಂಖ್ಯೆ ಕೂಡ ಕುಸಿಯುತ್ತಿದೆ.

2018ರ ಡಿಸೆಂಬರ್​ನಿಂದ 2019ರ ಮಾರ್ಚ್​ವರೆಗೆ ಮೊದಲ ಕಂತಿನ ಹಣ ನೀಡಲಾಗಿದ್ದು, ಆಗ 7 ಕೋಟಿ ರೈತರ ಬ್ಯಾಂಕ್ ಖಾತೆಗೆ 14,055 ಕೋಟಿ ರೂಪಾಯಿಯನ್ನ ವರ್ಗಾಯಿಸಲಾಗಿದೆ. ಎರಡನೇ ಕಂತಿನಲ್ಲಿ 2019 ರ ಏಪ್ರಿಲ್​ನಿಂದ ಜುಲೈವರೆಗೆ ಹಣ ನೀಡಲಾಗಿದೆ. ಈ ಅವಧಿಯಲ್ಲಿ 5 ಕೋಟಿ 90 ಲಕ್ಷ ರೈತರಿಗೆ 11,845 ಕೋಟಿ ಹಣವನ್ನ ನೀಡಲಾಗಿದೆ. ಮೂರನೇ ಕಂತಿನಲ್ಲಿ 2019ರ ಆಗಸ್ಟ್​ನಿಂದ 2019ರ ಅಕ್ಟೋಬರ್​ವರೆಗೆ 3.33 ಕೋಟಿ ರೈತರ ಖಾತೆಗಳಿಗೆ 6,677 ಕೋಟಿ ರೂಪಾಯಿ ಹಣ ಹಾಕಲಾಗಿದೆ. ಅಲ್ಲಿಗೆ ಮೊದಲ ಕಂತಿನಲ್ಲಿ ಹಣ ಪಡೆದವರಿಗಿಂತ ಎರಡು ಹಾಗೂ ಮೂರನೇ ಕಂತಿನಲ್ಲಿ ಹಣ ಪಡೆದವರ ಸಂಖ್ಯೆಯಲ್ಲಿ ಕುಸಿತವಾಗಿದೆ.

ಯೋಜನೆ ಬಗೆಗಿನ ಈ ಎಲ್ಲಾ ಮಾಹಿತಿಯನ್ನ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆಯೇ ಸಂಸತ್​ಗೆ ಲಿಖಿತ ರೂಪದಲ್ಲಿ ನೀಡಿದೆ. ಯೋಜನೆ ಜಾರಿಯಲ್ಲಿ ಸಮಸ್ಯೆ ಇದೆ ಅಂತ ಸರ್ಕಾರವೇ ಹೇಳಿದೆ. ಆಧಾರ್ ಸಂಖ್ಯೆ ಖಚಿತಪಡಿಸಿಕೊಳ್ಳೋದು, ಅದಕ್ಕೆ ಜಮೀನು ಮತ್ತು ಬ್ಯಾಂಕ್ ಖಾತೆ ಜೋಡಣೆ ಮಾಡೋದ್ರಲ್ಲಿ ಪ್ರಾಬ್ಲಂ ಆಗ್ತಿದೆ. ಕೆಲವೆಡೆ ರೈತರ ಹೆಸರಿಗೂ ಆಧಾರ್ ಕಾರ್ಡ್​ನಲ್ಲಿರೋ ಹೆಸರಿಗೂ ಹೊಂದಾಣಿಕೆ ಆಗ್ತಿಲ್ಲ. ಬಿಹಾರ, ಜಾರ್ಖಂಡ್, ಉತ್ತರಾಖಂಡ್​ನಲ್ಲಿ ರೈತರ ಜಮೀನಿನ ದಾಖಲೆ ಪತ್ರಗಳೇ ಸರಿಯಾಗಿಲ್ಲ. ಒಟ್ನಲ್ಲಿ, ಕೇಂದ್ರದ ಮೋದಿ ಸರ್ಕಾರದ ಮಹತ್ವಕಾಂಕ್ಷೆಯ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಎಲ್ಲಾ ರೈತರಿಗೂ ಸಿಗ್ತಿಲ್ಲ. ಯೋಜನೆ ಜಾರಿಗೆ ಎದುರಾಗ್ತಿರೋ ಹತ್ತಾರು ವಿಘ್ನಗಳೇ ಇದಕ್ಕೆ ಕಾರಣ ಅನ್ನೋದು ಸ್ಪಷ್ಟ.

Published On - 3:52 pm, Fri, 3 January 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ