ಹೊಸ ಆಚರಣೆ ವೇಳೆ ನುಗ್ಗಿದ ಗೂಳಿ, ತಪ್ಪಿದ ಭಾರಿ ಅನಾಹುತ!

ಹೊಸ ಆಚರಣೆ ವೇಳೆ ನುಗ್ಗಿದ ಗೂಳಿ, ತಪ್ಪಿದ ಭಾರಿ ಅನಾಹುತ!

ಬೆಳಗಾವಿ: ನಗರದಲ್ಲಿ ತಡರಾತ್ರಿ ಹೊಸ ಆಚರಣೆ ವೇಳೆ ಸ್ವಲ್ಪದರಲ್ಲೇ ಭಾರಿ ಅನಾಹುತವೊಂದು ತಪ್ಪಿದೆ. ನಗರದ ಕ್ಯಾಂಪ್ ಪ್ರದೇಶದಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ ಜನರ ಮಧ್ಯೆ ಗೂಳಿ ನುಗ್ಗಿದೆ.

ಕ್ಯಾಂಪ್ ಪ್ರದೇಶದ ಗೌಳಿ ಗಲ್ಲಿಯಲ್ಲಿ ಓಲ್ಡ್‌ಮ್ಯಾನ್ ದಹಿಸಲಾಗುತ್ತಿತ್ತು. ಇದನ್ನು ನೋಡಲು ಅಪಾರ ಜನಸ್ತೋಮ ಆಗಮಿಸಿತ್ತು. ಈ ವೇಳೆ ಏಕಾಏಕಿ ರಸ್ತೆ ಮೇಲೆ ನಿಂತಿದ್ದ ಜನರ ಮಧ್ಯೆ ಗೂಳಿ ನುಗ್ಗಿದೆ. ಮಹಿಳೆಯರು, ಮಕ್ಕಳಿಗೆ ಗುದ್ದಿದ ಗೂಳಿ ಬಳಿಕ ರಸ್ತೆಯಲ್ಲಿದ್ದ ಕಾರಿಗೂ ಗುದ್ದಿದೆ. ಬಳಿಕ ವ್ಯಕ್ತಿಯೋರ್ವ ಗೂಳಿಯ ಬಾಲ ಹಿಡಿದು ಹೊರಗೆ ಓಡಿಸಿದ್ದಾನೆ.

ಘಟನೆಯಲ್ಲಿ ನಾಲ್ವರು ಮಹಿಳೆಯರು ಮತ್ತು ಓರ್ವ ಬಾಲಕನಿಗೆ ಗಾಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜನರ ಮಧ್ಯೆ ಗೂಳಿ ನುಗ್ಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Click on your DTH Provider to Add TV9 Kannada