ಇಂದಿನಿಂದ ಗ್ರೀನ್ ಜೋನ್​ಗಳಲ್ಲಿ ಬಸ್ ಸಂಚಾರ ಶುರು

|

Updated on: May 04, 2020 | 6:45 AM

ಬೆಂಗಳೂರು: ಲಾಕ್​ಡೌನ್ ಪಾರ್ಟ್ 2 ಮುಗಿದು ಇಂದಿನಿಂದ ಮೂರನೇ ಪಾರ್ಟ್ ಆರಂಭವಾಗಿದೆ. ಆದ್ರೆ ಲೌಕ್​ಡೌನ್ ಇಷ್ಟು ದಿನ ಇದ್ದಂತೆ ಇರೋದಿಲ್ಲ. ರಾಜ್ಯ ಸರ್ಕಾರ ಸಡಿಲಿಕೆಯನ್ನು ಮಾಡಿದೆ. ರಾಜ್ಯದ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರವಿರಬೇಕು, ಮಾಸ್ಕ್ ಕಡ್ಡಾಯ, ಒಂದು ಬಸ್ ಗೆ 20ರಿಂದ 25 ಜನರು ಮಾತ್ರ ಪ್ರಯಾಣ ಮಾಡಬಹುದಾಗಿದೆ. ಪ್ರತಿ ಟ್ರಿಪ್ ಗೂ ಸ್ಯಾನಿಟೈಸ್ ಮಾಡುವ […]

ಇಂದಿನಿಂದ ಗ್ರೀನ್ ಜೋನ್​ಗಳಲ್ಲಿ ಬಸ್ ಸಂಚಾರ ಶುರು
Follow us on

ಬೆಂಗಳೂರು: ಲಾಕ್​ಡೌನ್ ಪಾರ್ಟ್ 2 ಮುಗಿದು ಇಂದಿನಿಂದ ಮೂರನೇ ಪಾರ್ಟ್ ಆರಂಭವಾಗಿದೆ. ಆದ್ರೆ ಲೌಕ್​ಡೌನ್ ಇಷ್ಟು ದಿನ ಇದ್ದಂತೆ ಇರೋದಿಲ್ಲ. ರಾಜ್ಯ ಸರ್ಕಾರ ಸಡಿಲಿಕೆಯನ್ನು ಮಾಡಿದೆ. ರಾಜ್ಯದ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭವಾಗಲಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರವಿರಬೇಕು, ಮಾಸ್ಕ್ ಕಡ್ಡಾಯ, ಒಂದು ಬಸ್ ಗೆ 20ರಿಂದ 25 ಜನರು ಮಾತ್ರ ಪ್ರಯಾಣ ಮಾಡಬಹುದಾಗಿದೆ. ಪ್ರತಿ ಟ್ರಿಪ್ ಗೂ ಸ್ಯಾನಿಟೈಸ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಗ್ರೀನ್ ಜೋನ್ ಜಿಲ್ಲೆಗಳಾದ ಕೋಲಾರ, ಹಾವೇರಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಚಾಮರಾಜನಗರ, ಯಾದಗಿರಿ, ಉಡುಪಿ, ರಾಮನಗರ, ಮಂಡ್ಯ, ತುಮಕೂರು, ಗದಗ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಶಿವಮೊಗ್ಗ, ಹಾಸನ ಸೇರಿದಂತೆ ಗ್ರೀನ್ ಜೋನ್​ನಲ್ಲಿ ಬಸ್ ಸಂಚಾರ ಶುರುವಾಗಲಿದೆ.

Published On - 6:44 am, Mon, 4 May 20