ಮಂಗಳೂರು: ಕರಾವಳಿಯ ಜನಪದ ಕ್ರೀಡೆ ಕಂಬಳದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಬೈಂದೂರಿನ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ಗಳಲ್ಲಿ 100 ಮೀಟರ್ ಓಡಿ ಹೊಸ ದಾಖಲೆ ಸೃಷ್ಟಿಸಿವೆ.
ಮಂಗಳೂರಿನ ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಕಂಬಳ ಏರ್ಪಡಿಸಲಾಗಿತ್ತು. ಬೈಂದೂರಿನ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ಗಳಲ್ಲಿ 100 ಮೀಟರ್ ಓಡಿವೆ. ಕಂಬಳದ ಉಸೇನ್ ಬೋಲ್ಟ್ ಎಂದು ಖ್ಯಾತರಾಗಿದ್ದ ಶ್ರೀನಿವಾಸ್ ಗೌಡರು ಕಳೆದ ವರ್ಷ 9.55 ಸೆಕೆಂಡ್ನಲ್ಲಿ ದಾಖಲೆ ಮಾಡಿದ್ದರು. ಈ ಬಾರಿ ವಿಶ್ವನಾಥ್, ಶ್ರೀನಿವಾಸ ಗೌಡರ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟಪುಷ್ಟವಾಗಿ ಆರೈಕೆ ಮಾಡಿ ಸಾಕಿ, ಬೆಳೆಸಿದ ಕೋಣವನ್ನು ಕ್ರೀಡೆಗಾಗಿ ಸಿದ್ಧಗೊಳಿಸಿರುತ್ತಾರೆ. ಈ ಕೋಣಗಳನ್ನು ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಹಗಲಿರುಳು ದುಡಿದ ರೈತರು ಮನರಂಜನೆಗಾಗಿ ಮೊದಲಿಗೆ ಪ್ರಾರಂಭಿಸಿದ ಸ್ಪರ್ಧೆ ಇದು. ನಂತರ ಜಾನಪದ ಕ್ರೀಡೆಯಾಗಿ ಜನಪ್ರಿಯವಾಗಿದೆ. ಸ್ಪರ್ಧೆಯಲ್ಲಿ ಓಡುವ ಕೋಣಗಳ ಜೊತೆಗೆ ಓಡಿಸುವ ಸಾರಥಿಯ ಪಾತ್ರವೂ ಮಹತ್ವದ್ದಾಗಿದೆ.
Published On - 4:10 pm, Sun, 7 February 21