ಸಚಿವ ಭೈರತಿ ಸುರೇಶ್ ಫೇಸ್​ಬುಕ್ ಖಾತೆಯಲ್ಲಿ ಅವಾಚ್ಯ ಶಬ್ದಗಳ ಕಮೆಂಟ್: ವೈರಲ್ ಆದ ಬೆನ್ನಲ್ಲೇ ಹೊರಬಂತು ಸತ್ಯ

| Updated By: ವಿವೇಕ ಬಿರಾದಾರ

Updated on: Mar 25, 2025 | 12:26 PM

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಫೇಸ್‌ಬುಕ್‌ನಲ್ಲಿ ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಫೇಸ್​​ಬುಕ್​ ಕಮೆಂಟ್​​ ನ​ ಸ್ಕ್ರೀನ್‌ಶಾಟ್ ಫೋಟೋಗಳು ವೈರಲ್ ಆಗಿವೆ. ಇದನ್ನು ಅಲ್ಲಗಳೆದಿರುವ ಸಚಿವರು ತಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.

ಸಚಿವ ಭೈರತಿ ಸುರೇಶ್ ಫೇಸ್​ಬುಕ್ ಖಾತೆಯಲ್ಲಿ ಅವಾಚ್ಯ ಶಬ್ದಗಳ ಕಮೆಂಟ್: ವೈರಲ್ ಆದ ಬೆನ್ನಲ್ಲೇ ಹೊರಬಂತು ಸತ್ಯ
ಭೈರತಿ ಸುರೇಶ್
Follow us on

ಬೆಂಗಳೂರು, ಮಾರ್ಚ್​ 25: ಫೇಸ್‌ಬುಕ್​​ನಲ್ಲಿ (Facebook) ತಮ್ಮ ಪೋಸ್ಟ್​ಗೆ ಕಮೆಂಟ್​ ಮಾಡಿದ್ದ ವ್ಯಕ್ತಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ (Byrathi Suresh) ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಉಚಿತ ನೀರು ಪೂರೈಸುವ ನೀರಿನ ಟ್ಯಾಂಕ‌ರ್​ಗಳಿಗೆ ಚಾಲನೆ ನೀಡಿರುವ ಬಗ್ಗೆ ಸಚಿವ ಬೈರತಿ ಸುರೇಶ್ ಫೇಸ್​ಬುಕ್​ ಪೋಸ್ಟ್ ಮಾಡಿದ್ದರು.

ಭೈರತಿ ಸುರೇಶ್ ಪೋಸ್ಟ್​ಗೆ ಕಾರ್ತಿಕ್ ಎಂಬ ವ್ಯಕ್ತಿ ಕಮೆಂಟ್ ಹಾಕಿದ್ದು “ಇದೆಲ್ಲ ನಾಟಕ, ಜನ ಮೂರ್ಖರೆಂದು” ಕಮೆಂಟ್ ಮಾಡಿದ್ದರು. ಕಾರ್ತಿಕ್​ ಅವರ ಈ ಕಮೆಂಟ್​ ನೋಡಿ ಕೆರಳಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, “ನಿನ್ನ ಅಡ್ರೆಸ್ ಕೊಡು ಹೊಡೆದು ಹಾಕ್ತೀನಿ. ನಿನ್ನ ಅಪ್ಪನಿಗೆ ಹುಟ್ಟಿದ್ರೆ ಅಡ್ರೆಸ್ ಹಾಕು, ಸೂ…” ಎಂದೆಲ್ಲಾ ಭೈರತಿ ಸುರೇಶ್ ಕಮೆಂಟ್ ಮಾಡಿದ್ದಾರೆ ಎನ್ನಲಾದ ಫೋಟೋಗಳು ವೈರಲ್​ ಆಗುತ್ತಿವೆ.

ಈ ಫೇಸ್​ಬುಕ್​ ​ಕಮೆಂಟ್​ಗಳನ್ನು​ ಯಾರೋ ಸ್ಕ್ರೀನ್​ಶಾಟ್​ ತೆಗೆದಿದ್ದಾರೆ. ಈ ಸ್ಕ್ರೀನ್​ಶಾಟ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಎಲ್ಲಡೆ ವೈರಲ್​ ಆಗುತ್ತಿವೆ. ಫೋಟೋಗಳು ವೈರಲ್ ಆಗುತ್ತಿದ್ದಂತೆ ಕಮೆಂಟ್​ಗಳನ್ನು ಡಿಲೀಟ್ ಮಾಡಲಾಗಿದೆ.

ಇದನ್ನೂ ಓದಿ
ದೇಸಾಯಿ ಆಯೋಗ ನೀಡುವ ವರದಿ ಆಧರಿಸಿ ಕ್ರಮ ಜರುಗಿಸುತ್ತೇವೆ: ಭೈರತಿ ಸುರೇಶ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಸಿಎಂ ಮಗನ ಸಾವಿಗೆ ಭೈರತಿ ಕಾರಣ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ: ಶೋಭಾ
ಮುಡಾ ಕೇಸ್​: ಭೈರತಿ ಸುರೇಶ್​, ಲೋಕಾಯುಕ್ತ ಎಸ್​ಪಿ ವಿರುದ್ಧ ದೂರು

ಫೇಸ್​ಬುಕ್​ ಪೋಸ್ಟ್​

ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಸಿಎಂ ಅವರ ಪತ್ನಿಯಾಗಲೀ ನಾನಾಗಲೀ ತಪ್ಪು ಮಾಡದ ಕಾರಣ ಹೆದರಲ್ಲ: ಭೈರತಿ ಸುರೇಶ್

ಸಚಿವ ಭೈರತಿ ಸುರೇಶ್ ಸ್ಪಷ್ಟನೆ

ನನ್ನ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿದೆ. ಈ ರೀತಿಯ ಮೆಸೇಜ್‌ಗಳಿಗೆ ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಭೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Tue, 25 March 25