ಮುಡಾ ಪ್ರಕರಣದಲ್ಲಿ ಸಿಎಂ ಅವರ ಪತ್ನಿಯಾಗಲೀ ನಾನಾಗಲೀ ತಪ್ಪು ಮಾಡದ ಕಾರಣ ಹೆದರಲ್ಲ: ಭೈರತಿ ಸುರೇಶ್
ಮುಡಾ ಪ್ರಕರಣದಲ್ಲಿ ಪಾರ್ವತಿ ಸಿದ್ದರಾಮಯ್ಯ ಅವರಿಂದಾಗಲೀ ತನ್ನಿಂದಾಗಲೀ ಯಾವುದೇ ಪ್ರಮಾದ ಜರುಗಿಲ್ಲ, ಹಾಗಾಗಿ ಹೆದರುವಂಥ ಪ್ರಶ್ನೆ ಉದ್ಭವಿಸಲ್ಲ, ಜಾರಿ ನಿರ್ದೇಶನಾಲಯ ಕೂಡ ಒಂದು ಸ್ವಾಯತ್ತ ಸಂಸ್ಥೆಯಾಗಿದೆ, ಅದರ ಅಧಿಕಾರಿಗಳು ಮುಡಾ ಪ್ರಕರಣದ ತನಿಖೆ ಮಾಡುತ್ತಿದ್ದಾರೆ, ಮುಡಾದ ಅಧಿಕಾರಿಗಳು ಪ್ರಮಾದವೆಸಗಿದ್ದಾರೆ ಎಂದು ತನಿಖಾ ವರದಿಗಳಲ್ಲಿ ಕಂಡುಬಂದರೆ ಸರ್ಕಾರ ಕ್ರಮ ಜರುಗಿಸಲು ಹಿಂದೇಟು ಹಾಕದು ಎಂದು ಸುರೇಶ್ ಹೇಳಿದರು.
ಮೈಸೂರು: ಚಾಮುಂಡೇಶ್ವರಿ ದೇವಿಗೆ ಕುಟುಂಬ ಮತ್ತು ಬೀಗರೊಂದಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಸುರೇಶ್ ಮುಡಾ ಹಗರಣದ ಬಗ್ಗೆ ಹೇಳುತ್ತ 50:50 ಅನುಪಾತದಲ್ಲಿ ನಿವೇಶನಗಳನ್ನು ಪ್ರಾಧಿಕಾರ ಹಂಚಿದ್ದು ಮತ್ತು ಅದರ ಸಾಧಕ ಬಾಧಕಗಳನ್ನು ಸರ್ಕಾರ ರಚಿಸಿರುವ ಪಿಎನ್ ದೇಸಾಯಿ ಏಕ ಸದಸ್ಯ ಆಯೋಗಕ್ಕೆ ನೀಡಲಾಗಿದೆ ಅವರು ನೀಡುವ ವರದಿಯನ್ನಾಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ತನಗೆ ನಾಡಿನ ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ಪೂರ್ಣ ಭರವಸೆಯಿದೆ, ನ್ಯಾಯಾಲಯ ನೀಡುವ ನಿರ್ದೇಶನದ ಮೇರೆಗೆ ಮುಂದುವರಿಯುತ್ತೇವೆ ಎಂದು ಸುರೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ ಕೇಸ್: ಸಿಎಂ ಪತ್ನಿ ಹಾಗೂ ಸಚಿವ ಭೈರತಿ ಸುರೇಶ್ಗೆ ತಾತ್ಕಾಲಿಕ ರಿಲೀಫ್!
Published on: Feb 21, 2025 02:28 PM