ಮೊಮ್ಮಗನ ನಾಮಕರಣ ಕಾರ್ಯಕ್ರಮಕ್ಕೆ ಪ್ರಲ್ಹಾದ್ ಜೋಶಿಯವರನ್ನು ಆಮಂತ್ರಿಸಲು ಹುಬ್ಬಳ್ಳಿಗೆ ಬಂದ ಜನಾರ್ಧನ ರೆಡ್ಡಿ
ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕೇಳಿದಾಗ ಜನಾರ್ಧನ ರೆಡ್ಡಿ, ಕುಟುಂಬದಲ್ಲಿ ನಡೆಯುತ್ತಿರುವ ಒಂದು ಕಾರ್ಯಕ್ರಮದ ನಿಮಿತ್ತವಾಗಿ ತಾನು ಇಲ್ಲಿಗೆ ಬಂದಿರುವೆ, ಹಾಗಾಗಿ ರಾಜಕಾರಣದ ಬಗ್ಗೆ ಮಾತಾಡುವುದು ಸರಿಯಲ್ಲ, ಎಲ್ಲವನ್ನೂ ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ, ಅವರು ತೆಗೆದುಕೊಳ್ಳುವ ಎಲ್ಲ ನಿರ್ಣಯಗಳಿಗೆ ಪಕ್ಷದ ಒಬ್ಬ ಸಾಮಾನ್ಯ ಪತ್ರಕರ್ತನಾಗಿ ಬದ್ಧನಾಗಿರುತ್ತೇನೆ ಎಂದರು.
ಹುಬ್ಬಳ್ಳಿ: ಕಳೆದ ವರ್ಷ ಬಿಜೆಪಿಗೆ ವಾಪಸ್ಸಾದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಇಂದು ಹುಬ್ಬಳ್ಳಿಗೆ ಅಗಮಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನೆಗೆ ಭೇಟಿ ನೀಡಿದರು. ಏನು ವಿಶೇಷ ಅಂತ ಮಾಧ್ಯಮದವರು ಕೇಳಿದಾಗ ಮಾರ್ಚ್ 16ರಂದು ತನ್ನ ಮೊಮ್ಮಗನ ನಾಮಕರಣ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ, ಅದರಲ್ಲಿ ಭಾಗಿಯಾಗಿ ಮೊಮ್ಮಗನನ್ನು ಆಶೀರ್ವದಿಸಬೇಕೆಂದು ಕೋರಲು ಸಚಿವ ಜೋಶಿಯವರ ಮನೆಗೆ ಬಂದಿದ್ದೇನೆ ಎಂದು ಹೇಳಿದರು. ಕೊಪ್ಪಳ, ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿರುವ ಎಲ್ಲ ಹಿರಿಯ ಬಿಜೆಪಿ ನಾಯಕರ ಮನೆಗೆ ತೆರಳಿ ಆಮಂತ್ರಣ ನೀಡುತ್ತಿರುವುದಾಗಿ ಜನಾರ್ಧನ ರೆಡ್ಡಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಳ್ಳಾರಿಗೆ ಶ್ರೀರಾಮುಲು ನಾಯಕತ್ವ ಬೇಕು, ಅವರು ಗ್ರಾಮೀಣ ಭಾಗದಲ್ಲಿ ಮುಂದುವರಿಯಲಿ: ಗಾಲಿ ಜನಾರ್ಧನ ರೆಡ್ಡಿ